Puneeth Rajkumar Birthday; ಅಪ್ಪು ಇಲ್ಲದೇ 2ನೇ ಜನ್ಮದಿನ; ಅಭಿಮಾನಿಗಳ ಭಾವುಕ ವಿಶ್

ಪವರ್ ಸ್ಟಾರ್ ಪುನೀತ್ ಇಲ್ಲದೇ 2ನೇ ಜನ್ಮದಿನ. ಅಭಿಮಾನಿಗಳು ಭಾವುಕ ವಿಶ್ ಮಾಡುತ್ತಿದ್ದಾರೆ. 

puneeth rajkumar birthday; Fans emotional wishes to Appu sgk

ಮಾರ್ಚ್ 17  ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವಾಗಿತ್ತು. ಸದಾಶಿವನಗರದ ನಿವಾಸದ ಮುಂದೆ ಅಭಿಮಾನಿಗಳ ದಂಡೇ ಸೇರುತ್ತಿತ್ತು. ಅಪ್ಪು..ಅಪ್ಪು ಅಂತ ಘೋಷಣೆ ಕೂಗುತ್ತಾ ನೆಚ್ಚಿನ ನಟನನ್ನು ನೋಡಲು ಸಾಲುಗಟ್ಟಲೇ ಅಭಿಮಾನಿಗಳು ನಿಂತಿರುತ್ತಿದ್ದರು. ಅಪ್ಪು ನೋಡಿ ಸಂಭ್ರಮಿಸುತ್ತಿದ್ದರು, ಸಂತಸ ಪಡುತ್ತಿದ್ದರು, ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಇದೆಲ್ಲ ಈಗ ನೆನಪು ಮಾತ್ರ. ಅಪ್ಪು ಇಲ್ಲದೇ 2ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಆ ಖುಷಿ, ಸಂಭ್ರಮ, ಘೋಷಣೆಗಳಿಲ್ಲದೇ ಪುನೀತ್ ಅವರನ್ನು ನೆನೆಯುತ್ತಾ ದುಃಖದಲ್ಲೇ ಜನ್ಮದಿನ ಆಚರಣೆ ಮಾಡುವಂತೆ ಮಾಡಲಾಗುತ್ತಿದೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಬೇಸರದಲ್ಲೇ ಈ ದಿನವನ್ನು ಆಚರಿಸಲಾಗುತ್ತಿದೆ.

ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ದಿನದಂದು ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ ಕೂಡ ರಿಲೀಸ್ ಆಗುತ್ತಿರುವುದು ವಿಶೇಷ.  ಇಂದು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಕಂಠೀರವ ಸ್ಟುಡಿಯೋಗೆ ರಾಜ್ ಕುಟುಂಬ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈಗಾಗಲೇ ಉಪ್ಪು ಸಮಾಧಿಯನ್ನು ಅಲಂಕರಿಸಲಾಗಿದೆ. ವಿಶೇಷ ಪೂಜೆ ಮೂಲಕ ಅಪ್ಪು ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. 

Bengaluru: ಪಂತರಪಾಳ್ಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಪುನೀತ್‌ ರಾಜ್‌ಕುಮಾರ್‌ ಹೆಸರು

ಇನ್ನು ಅಪ್ಪು ಸಮಾಧಿಗೆ ಭೇಟಿ ನೀಡಿ ಅಪ್ಪು ದರ್ಶನ ಪಡೆಯಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಇಂದು ಆಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಲಾಗಿದ್ದಾರೆ. ಅಪ್ಪು ನೆನೆದು ಧನ್ಯರಾಗಲಿದ್ದಾರೆ. ಅಭಿಮಾನಿಗಳಿಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಅಭಿಮಾನಿಗಳಿಂದ ಸಾಕಷ್ಟು ಸಾಮಾಜಿಕ ಕಾರ್ಯಗಳು ಸಹ ನಡೆಯಲಿದೆ. 

ಪುನೀತ್ ರಾಜ್​ಕುಮಾರ್ ನಟನೆ ಜೊತೆಗೆ ಅನೇಕ ಸಾಮಾಜಿಕ ಕೆಲಸಗಳ ಮೂಲಕವೂ ಅಭಿಮಾನಿಗಳ ಹೃದಯ ಗೆದ್ದಿದ್ದರು. ಅಭಿಮಾನಿಗಳು ಕೂಡ ಈಗ ಅಪ್ಪು ಹಾದಿಯಲ್ಲೇ ಸಾಗುತ್ತಿದ್ದಾರೆ. ಇಂದು ಅಪ್ಪು ಜನ್ಮದಿನದಂದು ರಕ್ತದಾನ, ಅನ್ನದಾನ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 

Yuva Rajkumar:'ಯುವ' ಚಿತ್ರಕ್ಕೂ ಅಪ್ಪುಗೂ ಇದೆ ಲಿಂಕ್; ಪೋಸ್ಟರ್‌ನಲ್ಲಿ ಅಡಗಿದೆ ರಹಸ್ಯ

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಕೊನೆಯದಾಗಿ ನಟಿಸಿದ್ದ ಗಂಧದ ಗುಡಿ ಸಾಕ್ಷ್ಯಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದು ಅಪ್ಪು ಕನಸಿನ ಚಿತ್ರವಾಗಿತ್ತು. ಪುನೀತ್ ನಿಧನದ ಬಳಿಕ ಈ ಸಾಕ್ಷ್ಯಚಿತ್ರ ರಿಲೀಸ್ ಆಗಿತ್ತು. ಅವರ ಮೊದಲ ಪುಣ್ಯತಿಥಿಗೂ ಒಂದು ದಿನ ಮುಂಚಿತವಾಗಿ ಚಿತ್ರಮಂದಿರಕ್ಕೆ ಬಂದಿತ್ತು. ಇದೀಗ ಅವರ ಹುಟ್ಟುಹಬ್ಬದ ಪ್ರಯುಕ್ತ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ  ‘ಗಂಧದ ಗುಡಿ’ಸ್ಟ್ರೀಮಿಂಗ್ ಆಗುತ್ತಿದೆ.  ಅಭಿಮಾನಿಗಳ ಪಾಲಿಗೆ ವಿಶೇಷವಾಗಿದೆ. ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಅಪ್ಪು ನಟನೆಯ ಸೂಪರ್ ಹಿಟ್ ರಾಜಕುಮಾರ ಸಿನಿಮಾದ ಉಚಿತ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಅಭಿಮಾನಿಗಳು ಮತ್ತೊಮ್ಮೆ ಚಿತ್ರಮಂದಿರದಲ್ಲಿ ಅಪ್ಪು ಅವರನ್ನು ಕಣ್ತುಂಬಿಕೊಳ್ಳಬಹುದು. 

Latest Videos
Follow Us:
Download App:
  • android
  • ios