ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಅಶ್ವಿನಿ ಹುಟ್ಟುಹಬ್ಬದ ಆಚರಣೆಯೂ ನಡೆಯುತ್ತಿದೆ. ಅಪ್ಪು ಅಭಿಮಾನಿಗಳೊಂದಿಗೆ ಮಾತನಾಡಿದ ಹಳೆಯ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲು ಸೂಚಿಸಿದ ಅವರ ಕಾಳಜಿಯನ್ನು ನೆಟ್ಟಿಗರು ಮೆಚ್ಚಿದ್ದಾರೆ. ಅಪ್ಪು ಸಮಾಧಿ ಬಳಿ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅಭಿಮಾನಿಗಳು ಥಿಯೇಟರ್ ಮುಂದೆ ಇರುವ ಕಟೌಟ್‌ಗೆ ಹಾಲಿ ಅಭಿಷೇಕ, ಹೂ ಅಭಿಷೇಕ ಮಾಡಿ ಸಂಭ್ರಮಿಸುತ್ತಿದ್ದಾರೆ. ಇಂದು ಅಶ್ವಿನಿ ಹುಟ್ಟುಹಬ್ಬ ಆಗಿದ್ದು ಅಭಿಮಾನಿಗಳಿಗೆ ಡಬಲ್ ಸೆಲೆಬ್ರೇಷನ್ ಎನ್ನಬಹುದು. ಚಿತ್ರಮಂದಿರಗಳಿಗೆ ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟ-ನಟಿಯರು ಆಗಮಿಸುತ್ತಿದ್ದಾರೆ. ಈ ವೇಳೆ ಅಪ್ಪು ಹಳೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು! ಅಪ್ಪು ಸದಾಶಿವನಗರದ ನಿವಾಸದಲ್ಲಿ ಇರುವ ಮನೆಗೆ ಅಭಿಮಾನಿಗಳು ಭೇಟಿ ಮಾಡಿದ್ದರು. ಅವರೊಟ್ಟಿಗೆ ಫೋಟೋ ತೆಗೆಸಿಕೊಂಡು ಖುಷಿಯಿಂದ ಮಾತನಾಡಿದ ನಟ ಊಟದ ವ್ಯವಸ್ಥೆ ಮಾಡುವ ಯೋಚನೆ ಮಾಡಿದ್ದರು. ಮನೆ ಕೆಲಸದ ಹುಡುಗ ಹಾಗೂ ಬೌನ್ಸರ್‌ಗಳು ಅಪ್ಪು ಹಿಂದೆ ನಿಂತಿದ್ದರು. ಆಗ 'ಏಯ್ ಮನೆ ಹಿಂದೆ ಏನೋ ಇದೆ ಅಲ್ವಾ ಏನೋ ಅದು?' ಎಂದು ಪುನೀತ್ ಹುಡುಗರಿಗೆ ಅರ್ಥ ಆಗುವಂತೆ ಜೋರಾಗಿ ಹೇಳಿದ್ದಾರೆ. ಆಗ ಅಲ್ಲೊಂದು ಹೋಟೆಲ್ ಇದೆ ಎಂದು ಹುಡುಗ ಹೇಳಿದ್ದಾರೆ. 'ಅಲ್ಲಿಗೆ ಇವರನ್ನು ಕರೆದುಕೊಂಡು ಹೋಗಿ ಊಟದ ವ್ಯವಸ್ಥೆ ಮಾಡು. ಎಲ್ಲರೂ ಊಟ ಮಾಡಿಕೊಂಡು ಹೋಗಿ' ಎಂದು ಅಪ್ಪು ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿ ಅಪ್ಪು ಜೋರಾಗಿ ಗದರಿರುವುದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಅವರ ಕಾಳಜಿ ಮತ್ತು ಪ್ರೀತಿ ಬಗ್ಗೆ ಮೆಚ್ಚಿಕೊಂಡಿದ್ದಾರೆ.
ಕಾಲೇಜ್‌ನಲ್ಲಿ ಆ ಹುಡುಗಿಗೆ ಐ ಲವ್ ಯೂ ಹೇಳೋಕೆ 1 ವರ್ಷ ತೆಗೊಂಡೆ; ಕೊನೆಗೂ ಹಳೆ ಕಹಾನಿ ಬಿಚ್ಚಿಟ್ಟ ರವಿಚಂದ್ರನ್
ಅಪ್ಪು ಇದ್ದಿದ್ದರೆ 50ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಈ ವರ್ಷ ಕಠೀರವ ಸ್ಟುಡಿಯೋದಲ್ಲಿ ಇರುವ ಅಪ್ಪು ಸಮಾಧಿ ಬಳಿ ಆಚರಣೆ ಅದ್ಧೂರಿಯಾಗಿ ನಡೆಯಲಿದೆ. ಸ್ಟುಡಿಯೋಗೆ ಆಗಮಿಸುವ ಸಾವಿರಾರೂ ಅಭಿಮಾನಿಗಳಿಗೆ ಸಣ್ಣ ಮಟ್ಟದಲ್ಲಿ ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಅಲ್ಲದೆ ಕಿರುತೆರೆ ಹಲವು ರಿಯಾಲಿಟಿ ಶೋಗಳಲ್ಲಿ ಅಪ್ಪು ಹುಟ್ಟುಹಬ್ಬದ ನೆನಪು ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಿದ್ದಾರೆ. ಈ ಹಿಂದೆ ಪುನೀತ್ ನಿವಾಸದ ಬಳಿ ಹಾಗೂ ಸಮಾಧಿ ಬಳಿ ಆಗಮಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯಶ್ ನನ್ನ ಬರ್ತಡೇ ಪಾರ್ಟಿಗೆ ಬರ್ತಿದ್ರು, ತಂದೆ ಫ್ರೆಂಡ್ ಮೇಲೆ ಕ್ರಶ್ ಆಗಲ್ಲ: ಸಾನ್ವಿ ಸುದೀಪ್ ಹೇಳಿಕೆ ವೈರಲ್
