ಬದುಕಿದ್ರೆ ಅಪ್ಪು ತರ ಇರಬೇಕು, ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾವುಕ!

ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಭಾವುಕರಾಗಿದ್ದಾರೆ. ಪುನೀತ್ ಗಂಧದ ಗುಡಿ ಸಿನಿಮಾ ಅಲ್ಲ ಅದು ದಂತಕಥೆ ಎಂದು ಬೊಮ್ಮಾಯಿ ಬಣ್ಣಿಸಿದ್ದಾರೆ. ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಬಸವರಾಜ್ ಬೊಮ್ಮಾಯಿ ಭಾಷಣದ ಹೈಲೈಟ್ಸ್ ಇಲ್ಲಿದೆ.

Puneet Rajkumar life exemplary and inspiring says CM Basavraj Bommai in Puneeth Parva gandhada gudi pre release event ckm

ಬೆಂಗಳೂರು(ಅ.21): ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಪ್ರಿ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತ್ ರಾಜ್‌ಕುಮಾರ್ ನೆನೆಪಿಸಿದ್ದಾರೆ. ಇಷ್ಟೇ ಅಲ್ಲ ಪುನೀತ್‌ಗೆ ಪರಿಸರ ಮೇಲಿದ್ದ ಕಾಳಜಿಯನ್ನು ಕೊಂಡಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬದುಕಿದರೆ ಅಪ್ಪು ರೀತಿ ಬದುಕಬೇಕು ಎಂದಿದ್ದಾರೆ. ಮನಸ್ಸು ಭಾವನಾತ್ಮಕ ಆದಾಗ ಮಾತನಾಡಿದರೆ, ತೂಕ ಕಡಿಮೆ ಆಗುತ್ತದೆ. ಭಾವನೆಯನ್ನು ಭಾವನೆ ಜೊತೆ ಜೋಡಿಸುವುದು ಸೂಕ್ತ ಎಂದು ಬೊಮ್ಮಾಯಿ ಹೇಳಿದ್ದಾರೆ.  

ಮನುಷ್ಯ ಇದ್ದಾಗ ಹೊಗಳೋದು ಸಹಜ. ಆದ್ರೆ ಇಲ್ಲದೇ ಇದ್ದಾಗ ನೆನಪು ಮಾಡಿಕೊಳ್ಳೋದು ಮುಖ್ಯ. ಡಾ. ರಾಜ್ ಕುಮಾರ್ ಅವರ ಎಲ್ಲಾ ಗುಣ ಹೊಂದಿದ್ದವರು ಪುನೀತ್ ರಾಜ್‌ಕುಮಾರ್. ಅಪ್ಪು ಸಣ್ಣ ವಯಸ್ಸಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅಷ್ಟೇ ಸಣ್ಣ ವಯಸ್ಸಿನಲ್ಲಿ ಅಗಲಿರುವುದು ನಮಗೆ ದುಃಖ ತಡೆಯಲು ಸಾಧ್ಯಾವಾಗುತ್ತಿಲ್ಲ. ಜಗತ್ತಿನಲ್ಲಿ ದೊಡ್ಡ ಬದಲಾವಣೆ ಮಾಡಿದವರೆಲ್ಲಾ ಬೇಗ ನಮ್ಮನ್ನು ಅಗಲಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

ನೋವಿನಲ್ಲಿ ಕಳೆದೋಯ್ತು ವರ್ಷ, ಪುನೀತ ಪರ್ವದಲ್ಲಿ ಶಿವಣ್ಣ ಭಾವುಕ, ರಮ್ಯಾ, ಧ್ರುವ ಸೇರಿ ಗಣ್ಯರು ನುಡಿ!

 ಅಪ್ಪು ನಡೆದ ಮಾರ್ಗದಲ್ಲಿ ನಾವು ನಡೆಯಬೇಕು. ಅವರು ಬಿಟ್ಟು ಹೋಗಿರುವ ಸನ್ಮಾರ್ಗವನ್ನು ನಾವು ಪಾಲಿಸಬೇಕು. ಈ ಕಾರ್ಯಕ್ರಮ ನೋಡಿದರೆ ನಮಗೆ ಅರ್ಥವಾಗುತ್ತದೆ ಡಾ. ರಾಜ್ ಕುಟುಂಬಕ್ಕೆ ಎಷ್ಟು ಹೃದಯ ಶ್ರೀಮಂತಿಕೆ ಇದೆ ಅನ್ನೋದು.  ಅಪ್ಪು ಮಾಡಿರುವ ಗಂಧದ ಗುಡಿ ಕೇವಲ ಸಿನಿಮಾ ಅಲ್ಲ ಅದು ಒಂದು ದಂತಕತೆ ಆಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.  ಅಪ್ಪು ಕೂಡ ಒಂದು ದಂತಕಥೆ ಎಂದರು.

 

 

ಕರ್ನಾಟಕದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ಇಡೀ ಕರ್ನಾಟಕದಲ್ಲಿ ಅಪ್ಪು ಅಭಿಮಾನಿಗಳಿದ್ದಾರೆ. ದೂರದ ಔರಾದ್‌ನಲ್ಲಿ ಅಪ್ಪು ಅಭಿಮಾನಿಗಳು ಫೋಟೋ ಹಿಡಿದು ಬಂದು ಮಾತನಾಡಿದ್ದಾರೆ.  ಇದೆಲ್ಲಾ ನೋಡಿದರೆ ಬದುಕಿದರೆ ನಿಜಕ್ಕೂ ಅಪ್ಪು ರೀತಿ ಬದುಕಬೇಕು ಎಂದು ಎನಿಸುತ್ತದೆ ಎಂದು ಬೊಮಮಮ್ಮಾಯಿ ಹೇಳಿದ್ದಾರೆ.

ಏನೇ ಆಗಲಿ ನಾನು ಅಪ್ಪುನ ಲೋಹಿತ್‌ ಅಂತಲೇ ಕರೆಯುವುದು: ಸುಧಾ ಮೂರ್ತಿ

ನವೆಂಬರ್ 1ನೇ ತಾರಿಖು ಕನ್ನಡ ರಾಜ್ಯೋತ್ಸವ ದಿನ ಕರ್ನಾಟಕದ ಅತೀ ಶ್ರೇಷ್ಠ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಮರಣೋತ್ತರ ನೀಡುತ್ತಿದ್ದೇವೆ. ನಮ್ಮ ಸರ್ಕಾರ, ವಿಧಾನಸೌದ ಮುಂಭಾಗ ಈ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.  

ಪುನೀತ್ ಅವರನ್ನ ಅಶ್ವಿನಿ ಅವರಲ್ಲಿ ನೋಡುತ್ತಿದ್ದೇವೆ, ಅಶ್ವತ್ಥ್ ನಾರಾಯಣ್
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಅಶ್ವತ್ಥ್ ನಾರಾಯಣ್, ಪ್ರಕೃತಿಯನ್ನು ಹೇಗೆ ಉಳಿಸಬೇಕು ಅನ್ನೋದು ಈ ಗಂಧದ ಗುಡಿ ಸಿನಿಮಾದಲ್ಲಿದೆ. ಪರಿಸರ ಉಳಿಸಲು ಸಂದೇಶ ನೀಡಿದ್ದಾರೆ. ಅವರ ಸಾಧನೆ ನೆ‌ನಪು ಮಾಡಿಕೊಳ್ಳಬೇಕು. ಪುನೀತ್ ಅವರನ್ನ ಅಶ್ವಿನಿ ಅವರಲ್ಲಿ ನೋಡುತ್ತಿದ್ದೇವೆ ಎಂದು ಅಶ್ವಿಥ್ ನಾರಾಯಣ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios