ಈ ಚಿತ್ರದ ಹೆಸರು ‘ಪಂಚ್‌ ಶಕ್ತಿ’. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮೂಡಿ ಬಂದಿರುವ ಈ ಕಿರುಚಿತ್ರ ನಿರ್ಮಿಸಿರುವುದು ಆರ್‌ವಿ ದೇವರಾಜ್‌ ಅವರ ಪುತ್ರಿ ಪ್ರಿಯಾ ದೇವರಾಜ್‌. ಆನಂದ್‌ ಸುಂದರ್‌ರಾಜನ್‌ ನಿರ್ದೇಶನದ ಜತೆಗೆ ಸಂಗೀತವನ್ನೂ ನೀಡಿದ್ದಾರೆ. 

ಇತ್ತೀಚೆಗೆ ಕಿರುಚಿತ್ರದ ಪ್ರದರ್ಶನ ಜತೆಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಜ್ಯೋತ್ಸನಾ ವೆಂಕಟೇಶ್‌, ಸಾತ್ವಿಕಾ ಶಾಸ್ತ್ರಿ, ಶೇಸಿನ್‌ ಪ್ರವೀಣ್‌, ದಿಯಾ ಬಿಹಾನಿ, ಕೀರ್ತನರಾಜ್‌, ಉಷಾ, ದಿವ್ಯಾ ಅಶೋಕ್‌ ಕುಮಾರ್‌ ಚಿತ್ರದ ಮುಖ್ಯ ಪಾತ್ರಧಾರಿಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10 ಕೆಜಿ ತೂಕ ಇಳಿಸಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ; ಸಪ್ತ ಸಾಗರದಾಚೆ ಎಲ್ಲೋ ಪ್ರೇಮಕತೆಯ ಸಿನಿಮಾ! 

ಆ್ಯಸಿಡ್‌ ದಾಳಿಗೆ ಒಳಗಾದ ಹುಡುಗಿ, ಅತ್ಯಾಚಾರಕ್ಕೆ ಗುರಿಯಾದ ಹುಡುಗಿ, ಖಿನ್ನತೆಯಿಂದ ಬಳಲುತ್ತಿರುವ ಬಾಲಕಿ, ನಟನೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭಾವಂತೆ... ಹೀಗೆ ಐದು ವಿಭಿನ್ನ ಸ್ತರದ ಹೆಣ್ಣು ಮಕ್ಕಳ ಸುತ್ತ ಸಾಗುವ ಈ ಕತೆಯಲ್ಲಿ ಆಯಾ ಕ್ಷೇತ್ರದಲ್ಲಿ ಈ ಹುಡುಗಿಯರು ಎದುರಿಸುವ ಶೋಷಣೆ ಮತ್ತು ದೌರ್ಜನ್ಯದಿಂದ ಹೇಗೆ ಮುಕ್ತರಾಗುತ್ತಾರೆ, ಅದಕ್ಕಾಗಿ ಒಬ್ಬ ಮಹಿಳೆ ಇವರಿಗೆ ಹೇಗೆ ಧೈರ್ಯ ತುಂಬುತ್ತಾಳೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು.

ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳು ಕೊಟ್ಟ ಕಾಣಿಕೆ: ಪುನೀತ್‌ರಾಜ್‌ಕುಮಾರ್ 

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ನಿರ್ದೇಶಕ ಎಎಂಆರ್‌ ರಮೇಶ್‌ ಆಗಮಿಸಿ ಚಿತ್ರ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ‘ಸಾಮಾಜಿಕ ಉದ್ದೇಶ ಇಟ್ಟುಕೊಂಡು ಈ ಕಿರುಚಿತ್ರ ಮಾಡಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಚಿತ್ರವನ್ನು ತಲುಪಿಸಬೇಕು ಎನ್ನುವ ಕಾರಣಕ್ಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರವನ್ನು ತಯಾರಿಸಿದ್ದೇವೆ’ ಎಂದರು ಪ್ರಿಯಾ ದೇವರಾಜ್‌. ಚಿತ್ರಕ್ಕೆ ಅರ್ಜುನ್‌ ಗೌಡ ಛಾಯಾಗ್ರಾಹಣ ಮಾಡಿದ್ದಾರೆ. ತಮ್ಮ ಮಗಳ ಸಿನಿಮಾ ನಿರ್ಮಾಣದ ಸಾಹಸಕ್ಕೆ ಮಮತಾ ದೇವರಾಜ್‌ ಮೆಚ್ಚುಗೆ ಸೂಚಿಸಿದರು. ಸದ್ಯದಲ್ಲೇ ಈ ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.