ಬಿಡಮ್ಮಾ ಬಿಡಮ್ಮಾ ಎಂದ್ರೂ ಶೂಟಿಂಗ್ನಲ್ಲಿ ಬಿಗಿದಪ್ಪಿ ಡಾ.ರಾಜ್ರನ್ನು ಸುಸ್ತು ಮಾಡಿದ್ರು ಈ ನಟಿ! ರೋಚಕ ಕಥೆ ಕೇಳಿ...

Synopsis
ಪರೋಪಕಾರಿ ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿಯೊಬ್ಬರಿಂದ ಡಾ.ರಾಜ್‌ಕುಮಾರ್ ಪಟ್ಟ ಪೇಚನ್ನು ವಿವರಿಸಿದ್ದಾರೆ ನಿರ್ಮಾಪಕ ಟಿ.ಜನಾರ್ದನ.
ಇಂಟಿಮೇಟ್ ದೃಶ್ಯಗಳಲ್ಲಿ ನಾಯಕನಾದವ ನಾಯಕಿಯನ್ನು ಅಪ್ಪಿಕೊಂಡು ಕೆಟ್ಟದ್ದಾಗಿ ನಡೆಸಿಕೊಂಡ ಎಂದು ಎಷ್ಟೋ ಮಂದಿ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಾ ಹೇಳಿದ್ದಿದೆ. ಚುಂಬಿಸುವ ದೃಶ್ಯಗಳಲ್ಲಿ ಉದ್ದೇಶಪೂರ್ವಕವಾಗಿ ರೀಟೇಕ್ ಪಡೆಯುತ್ತಿರುವ ನಾಯಕರೂ ಸಾಕಷ್ಟಿದ್ದಾರೆ. ಆದರೆ ಡಾ.ರಾಜ್‌ಕುಮಾರ್ ವಿಷಯದಲ್ಲಿ ಇದು ಉಲ್ಟಾ ಆಗಿತ್ತು! ನಟಿಯೊಬ್ಬರು ಡಾ.ರಾಜ್ ಅವರನ್ನು ತಬ್ಬಿಕೊಂಡು ರಾಜ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಬಿಟ್ಟಿದ್ದರಂತೆ. ಆ ನಾಯಕಿಯ ಹಿಡಿತದಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ನಟ, ಸುಸ್ತಾಗಿ ಹೋಗಿದ್ರಂತೆ. ಈ ಕುತೂಹಲದ ಘಟನೆಯನ್ನು ತೆರೆದಿಟ್ಟಿದ್ದಾರೆ. ನಿರ್ಮಾಪಕ ಟಿ.ಜನಾರ್ದನ ಅವರು. ಅಷ್ಟಕ್ಕೂ ಡಾ.ರಾಜ್ ಅವರ ಗುಣದಂತೆಯೇ ಅವರ ಬಾಹ್ಯ ಸೌಂದರ್ಯವೂ ಅಷ್ಟೇ ಆಕರ್ಷಕವಾಗಿತ್ತು. ಇದು ಅಂದಿನ ಕಾಲದಲ್ಲಿ ನಟಿಯರನ್ನು ಸೆಳೆಯುತ್ತಿತ್ತು. ಡಾ.ರಾಜ್ ಹಲವರ ಕ್ರಷ್ ಕೂಡ ಆಗಿದ್ದರು.
ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಟಿ. ಜನಾರ್ದನ ಅವರು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪರೋಪಕಾರಿ ಚಿತ್ರದ ಹಾಡು ಜೋಕೆ ನಾನು ಬಳ್ಳಿಯ ಮಿಂಚು ಹಾಡಿನ ಸಮಯದಲ್ಲಿ ನಡೆದ ಸನ್ನಿವೇಶವನ್ನು ಜನಾರ್ದನ ಅವರು ನೆನಪಿಸಿಕೊಂಡಿದ್ದಾರೆ. 1973ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಆಗ ಡಾ.ರಾಜ್ ಅವರು ಉತ್ತುಂಗದಲ್ಲಿ ಇದ್ದ ಕಾಲವದು. ಎಲ್ಲಾ ನಟಿಯರೂ ಒಮ್ಮೆಯಾದರೂ ರಾಜ್ ಜೊತೆ ನಟಿಸುವ ಹಂಬಲ ವ್ಯಕ್ತಪಡಿಸುತ್ತಿದ್ದರು. ತನ್ನ ಶ್ರೀಮಂತ ತಂದೆಯೊಂದಿಗೆ ಪಂಥವನ್ನು ಗೆಲ್ಲುವ ಸ್ವಾಭಿಮಾನಿ ಯುವಕನ ಕಥೆಯ ಸುತ್ತ ಸುತ್ತುತ್ತದೆ. ಈ ಚಿತ್ರದ ನಾಯಕಿ ಜಯಂತಿ. ಇದೇ ಚಿತ್ರದಲ್ಲಿ ಸೈಡ್ ರೋಲ್ ಆಗಿ ನಟಿಸಿದ್ದವರು ವಿಜಯಲಲಿತಾ. ಅವರೇ ಈ ರೀತಿ ಮಾಡಿದವರು ಎಂದು ಹೇಳಿದ್ದಾರೆ ಜನಾರ್ದನ.
'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್ ನೋಡ್ಲೇ ಇಲ್ಲ- ಡಬ್ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್
ಈ ಹಾಡಿನಲ್ಲಿ ವಿಜಯಲಲಿತಾ ಅವರು, ಡಾ.ರಾಜ್ ಅವರನ್ನು ಸುಮ್ಮನೇ ಟಚ್ ಮಾಡಿ ಬರಬೇಕಿತ್ತು. ಆದರೆ ರಾಜ್‌ಕುಮಾರ್ ಅವರನ್ನು ನೋಡುತ್ತಿದ್ದಂತೆಯೇ ಆ ನಟಿಗೆ ಅದೇನಾಯಿತೋ ಗೊತ್ತಿಲ್ಲ. ಜೋರಾಗಿ ಬಿಗಿದಪ್ಪಿಕೊಂಡುಬಿಟ್ಟರು. ಬಿಡಮ್ಮಾ ಎಂದರೂ ಕೇಳಲಿಲ್ಲ. ಆಕೆಯಿಂದ ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ರಾಜ್‌ಕುಮಾರ್ ಅವರಿಗೆ ಸುಸ್ತಾಗಿ ಹೋಯಿತು. ಕೊನೆಗೆ ಹಾಗೂ ಹೀಗೂ ತಪ್ಪಿಸಿಕೊಂಡು ಹೋದರು ಎಂದು ಹೇಳಿದ್ದಾರೆ.
ಮೊನ್ನೆಯಷ್ಟೇ ಡಾ.ರಾಜ್ ಅವರ ಅಭಿನಯದ ಬಗ್ಗೆ ನಟಿ ಸುಧಾರಾಣಿ ಮಾತನಾಡಿದ್ದರು. ದೇವತಾ ಮನುಷ್ಯ ಚಿತ್ರದ ಹಾಲಲ್ಲಾದರೂ ಹಾಕು ಶೂಟಿಂಗ್ ಸಮಯದಲ್ಲಿ ನಡೆದ ಈ ಘಟನೆಯ ಬಗ್ಗೆ ವಿವರಿಸಿರುವ ನಟಿ, ಈ ಹಾಡಿನ ಸಮಯದಲ್ಲಿಯೂ ನಾನು ತುಂಬಾ ಭಯ ಪಟ್ಟಿದ್ದೆ. ಆದರೆ ನಾನು ಹೊರಗಡೆಯಿಂದ ಒಳಗೆ ಬರುವಾಗ ಅಪ್ಪಾಜಿ ಒಂದು ಲುಕ್ ಕೊಡುತ್ತಾರೆ ಅದನ್ನು ನೀವು ನೋಡಿರಬಹುದು... ಎನ್ನುತ್ತಲೇ ಆ ನೋಟವನ್ನು ಬೀರಿದಾಗ ತಮಗೆ ಆದ ರೋಮಾಂಚನ ಅನುಭವವನ್ನು ನಟಿ ಹೇಳಿಕೊಂಡಿದ್ದರು. ಅಪ್ಪಾಜಿ ಆ ನೋಟ ನೋಡಿದಾಗ ನನಗೆ ಅಲ್ಲಿ ಅಪ್ಪಾಜಿಯೂ ಕಾಣಿಸಲಿಲ್ಲ, ಡಾ.ರಾಜ್‌ಕುಮಾರ್ ಅವರೂ ಕಾಣಿಸಲಿಲ್ಲ... ಬದಲಿಗೆ ಸಾಕ್ಷಾತ್ ರಾಘವೇಂದ್ರ ಅವರೇ ಪ್ರತ್ಯಕ್ಷರಾಗಿ ನನಗೆ ಅಭಯ ನೀಡುತ್ತಾರೆ ಎನ್ನಿಸಿಬಿಟ್ಟಿತು. ಆ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಅಂದು ನಡೆದ ಆ ಘಟನೆಯಿಂದಲೇ ನಾನು ಸಲೀಸಾಗಿ ಅವರ ಜೊತೆ ಮಗಳಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದರು.
'ಹಾಲಲ್ಲಾದರೂ ಹಾಕು' ಶೂಟಿಂಗ್ನಲ್ಲಿ ರಾಜ್ ಆ ನೋಟ ಬೀರಿದಾಗ ನಡೆದಿತ್ತು ಪವಾಡ: ಸುಧಾರಾಣಿ ಅನುಭವ ಕೇಳಿ...