Asianet Suvarna News Asianet Suvarna News

ಮುಖ್ಯಮಂತ್ರಿಗಳಿಗೆ ಬೇಡಿಕೆಯಿಟ್ಟ ನಿರ್ಮಾಪಕ ಸೂರಪ್ಪ ಬಾಬು!

-ರಾತ್ರಿ 12ರ ತನಕ ನೈಟ್ ಕರ್ಫ್ಯೂ ಸಡಿಲಿಕೆ ಮಾಡಿ
-ಸೆಕೆಂಡ್ ಶೋ ಇಲ್ಲದ ಕಾರಣ ಕೋಟ್ಯಾಂತರ ರೂಪಾಯಿ ನಷ್ಟ
- ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾ ಭರ್ಜರಿ ಪ್ರದರ್ಶನ

producer Soorappa Babu request CM Basavaraj Bommai to extend night curfew
Author
Bangalore, First Published Oct 20, 2021, 1:04 PM IST
  • Facebook
  • Twitter
  • Whatsapp

ಬೆಂಗಳೂರು (ಅ.20): ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ  ಸುದೀಪ್ (Kiccha Sudeep) ಅಭಿನಯದ 'ಕೋಟಿಗೊಬ್ಬ  3'  (Kotigobba 3)  ಚಿತ್ರ ಈಗಾಗಲೇ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು (Soorappa Babu) ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಮನವಿಯೊಂದನ್ನು ಇಟ್ಟಿದ್ದಾರೆ.

ನಾನು ನಿರ್ಮಾಣ ಮಾಡಿರುವ 'ಕೋಟಿಗೊಬ್ಬ 3' ಹಾಗೂ ನನ್ನ ಸ್ನೇಹಿತ ಕೆ.ಪಿ.ಶ್ರೀಕಾಂತ್ (K.P.Srikant) ನಿರ್ಮಾಣದ 'ಸಲಗ' (Salaga) ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿವೆ. ನಮಗೆ ರಾತ್ರಿ 9 ಗಂಟೆಗೆ ಸೆಕೆಂಡ್ ಶೋ ಇಲ್ಲದ ಕಾರಣ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ರಾಜ್ಯದಲ್ಲಿ ರಾತ್ರಿ 12ರ ತನಕ ಕೋವಿಡ್ ನೈಟ್ ಕರ್ಫ್ಯೂ (Night Curfew) ಸಡಿಲಿಕೆ ಮಾಡಿ, ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಿ. ಮಹಾರಾಷ್ಟ್ರ ಸರ್ಕಾರ ರಾತ್ರಿ 12 ಗಂಟೆಯವರೆಗೂ ಕೋವಿಡ್ ನೈಟ್ ಕರ್ಫ್ಯೂ ಸಡಿಲಿಸಿದೆ. ಹಾಗಾಗಿ ನಾಳೆಯಿಂದಲೇ ನಮ್ಮ ರಾಜ್ಯದಲ್ಲಿರೋ ನೈಟ್ ಕರ್ಫ್ಯೂವನ್ನು ಸಡಿಲಗೊಳಿಸಿ, ಇದರಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗುತ್ತೆ ಮತ್ತು ನಮ್ಮ ಸಿನಿಮಾಗಳು ಒಳ್ಳೆಯ ಪ್ರದರ್ಶನ ಕಾಣುತ್ತವೆಎಂದು ನಿರ್ಮಾಪಕ ಸೂರಪ್ಪ ಬಾಬು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಮನವಿ ಸಲ್ಲಿಸಿದ್ದಾರೆ.

40.5 ಕೋಟಿ ಗಳಿಕೆ ದಾಖಲಿಸಿದ ಕೋಟಿಗೊಬ್ಬ 3

 'ಕೋಟಿಗೊಬ್ಬ 3' ಚಿತ್ರವು ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುತ್ತಿದ್ದು, ಇತ್ತಿಚೆಗಷ್ಟೇ ಚಿತ್ರದ ನಿರ್ಮಾಪಕರ ವಿರುದ್ಧ ಸಿನಿಮಾ ವಿತರಕ ಖಾಝಾಪೀರ್‌  (Khajapeer)ಚಿತ್ರದ ಅಗ್ರಿಮೆಂಟ್‌ಗೆ ಸಂಬಂಧಿಸಿದ ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೇ ನಟ ಸುದೀಪ್ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ಧಮ್ಕಿ ಹಾಕಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ಅನ್ನು ದಾಖಲಿಸಿದ್ದರು.

ಕೋಟಿಗೊಬ್ಬ 3 ನಿರ್ಮಾಪಕರ ವಿರುದ್ಧ FIR ದಾಖಲು

ಶನಿವಾರ 'ಕೋಟಿಗೊಬ್ಬ 3' ಸಕ್ಸಸ್‌ ಮೀಟ್‌ (Success Meet) ಆಯೋಜಿಸಿದ್ದೇವೆ. ಅಲ್ಲಿ ನನಗಾದ ಅನ್ಯಾಯ, ನನ್ನ ವಿರುದ್ಧದ ಪಿತೂರಿ ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದು ಸೂರಪ್ಪ ಬಾಬು ತಿಳಿಸಿದ್ದಾರೆ. ಸದ್ಯ ಚಿತ್ರವು ಬಿಡುಗಡೆಯಾದ ನಾಲ್ಕೇ ದಿನದಲ್ಲಿ 40.5 ಕೋಟಿ ಹಣ ಗಳಿಸಿದ್ದು,  ಸ್ವತಃ ಕಿಚ್ಚ ಸುದೀಪ್‌ ಅವರೇ ಈ ಸುದ್ದಿಯನ್ನು ರೀಟ್ವೀಟ್‌ ಮಾಡಿ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಚಿತ್ರದ ಬಿಡುಗಡೆ ವಿತರಕರು ಮತ್ತು ನಿರ್ಮಾಪಕರ ನಡುವೆ ಹಣಕಾಸಿನ ಸಮಸ್ಯೆಯಿಂದ ತಡವಾಗಿತ್ತು. ಇದರಿಂದ ಸುಮಾರು ಏಳೆಂಟು ಕೋಟಿ ನಷ್ಟವಾಗಿತ್ತು. ಜೊತೆಗೆ ಇದಕ್ಕೆ ಕಾರಣವಾದವರ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಸೂರಪ್ಪ ಬಾಬು ತಿಳಿಸಿದ್ದರು. 

"

Follow Us:
Download App:
  • android
  • ios