ನಾಯಕನ ಪರಿಚಯ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ಮಾನಸ ಹೊಳ್ಳ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಚಂದನವನಕೆ ಬಂದ’ ಎಂಬ ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ರಚನೆ ಮಾಡಿದ್ದಾರೆ. ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಶ್ರೀನಿವಾಸ ಶಿಡ್ಲಘಟ್ಟ.

‘ನನ್ನ ಮಗ ಅಭಯ್‌ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ. ಎರಡು ವರ್ಷಗಳ ನಂತರ ಚಿತ್ರರಂಗಕ್ಕೆ ಬರಲಿ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟಮಾಡಿಕೊಂಡಿದ್ದ ಕತೆ ಕೇಳಿ ನನ್ನ ಮಗನೇ ಈ ಕತೆಗೆ ಸೂಕ್ತ ಎನಿಸಿತು. ಹೀಗಾಗಿ ‘ಮನಸಾಗಿದೆ’ ಚಿತ್ರದ ಮೂಲಕ ಅಭಯ್‌ ಹೀರೋ ಆಗಿ ನಿಮ್ಮ ಮುಂದೆ ಬರುತ್ತಿದ್ದಾನೆ. ಆತನನ್ನು ಬೆಂಬಲಿಸಿ’ ಎಂಬುದು ನಿರ್ಮಾಪಕರ ಮನವಿ. ಏಪ್ರಿಲ… 15ರಿಂದ 3 ಹಂತದಲ್ಲಿ ಬೆಂಗಳೂರು, ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ.

ಜನ ಸಿನಿಮಾ ನೋಡೋಕೆ ಬರ್ತಿಲ್ಲ, ಏನ್‌ ಮಾಡೋದು?; ಒಂದು ಗಂಟೆಯ ಕತೆಯ ನಿರ್ದೇಶಕರ ಕತೆ ಕೇಳಿ!

ಚಿತ್ರದಲ್ಲಿ ಮೇಘಶ್ರೀ ಹಾಗೂ ಅಧಿರಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ . ‘ಸಾಕಷ್ಟುಪ್ರೇಮಕತೆಗಳು ತೆರೆಮೇಲೆ ಬಂದಿವೆ. ಆದರೆ, ಈ ಚಿತ್ರದ ಮೂಲಕ ಹೇಳ ಹೊರಟಿರುವ ಪ್ರೇಮ ಕತೆ ಬರೆಯದ್ದೇ ಆಗಿದೆ. ಪ್ರೀತಿ ವರ್ಸಸ್‌ ಮಾನವೀಯತೆ ಈ ಚಿತ್ರದ ಪ್ರಧಾನ ಅಂಶಗಳು’ ಎಂದರು ನಿರ್ದೇಶಕರು. ಸಾಹಸ ಸಂಯೋಜನೆ ಥ್ರಿಲ್ಲರ್‌ ಮಂಜು ಅವರದ್ದು. ‘ಚಿತ್ರದ ಹೆಸರು ಕೇಳಿಯೇ ನಾನು ಮೆಚ್ಚಿಕೊಂಡಿದ್ದೆ. ಚಿತ್ರದಲ್ಲಿ ಮೂರು ಮುಖ್ಯ ಆ್ಯಕ್ಷನ್‌ಗಳಿವೆ. ಅಭಯ್‌ ಪ್ರತಿಭಾವಂತ ನಟರಾಗುತ್ತಾರೆಂಬ ನಂಬಿಕೆ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು ಥ್ರಿಲ್ಲರ್‌ ಮಂಜು ಅವರು.