ಸಂತೋಷ ಹಾಗೂ ಅಳಲನ್ನು ಒಟ್ಟಿಗೆ ಹೇಳಿಕೊಂಡು ಪ್ರಶ್ನೆ ಮುಂದಿಟ್ಟಿದ್ದು ನಿರ್ದೇಶಕ ರಾಘವ ದ್ವಾರ್ಕಿ. ಅವರ ಈ ಮಾತುಗಳು ‘ಒಂದು ಗಂಟೆಯ ಕತೆ’ ಚಿತ್ರಕ್ಕೆ ಸಂಬಂಧಿಸಿದ್ದು. ಸಿನಿಮಾ ಬಿಡುಗಡೆಯ ನಂತರ ನಿರ್ದೇಶಕ, ನಿರ್ಮಾಪಕಿ ಶ್ವೇತಾ ದಾಕೋಜು ಮಾಧ್ಯಮಗಳ ಮುಂದೆ ಬಂದರು.

ಚಿತ್ರ ವಿಮರ್ಶೆ: ಒಂದು ಗಂಟೆಯ ಕತೆ 

ಎರಡು ವಾರಗಳ ಹಿಂದೆ ತೆರೆಗೆ ಬಂದ ಸಿನಿಮಾ ಇದು. ಆದರೂ ಜನಕ್ಕೆ ಈ ಸಿನಿಮಾ ಬಗ್ಗೆ ಹೆಚ್ಚು ಗೊತ್ತಿಲ್ಲ. ಯಾಕೆ ಎನ್ನುವ ಪ್ರಶ್ನೆಗೆ ಅವರೇ ಕೊಟ್ಟಉತ್ತರ- ‘ಪ್ರಚಾರ ಇಲ್ಲ. ಎಲ್ಲರು ಸೀಡಿ ಹಿಂದೆ ಹೋಗುತ್ತಿದ್ದಾರೆ. ಯಾವ ಟೀವಿ ಆನ್‌ ಮಾಡಿದರೂ ಸೀಡಿ ಲೇಡಿದೇ ಕತೆ. ನಮ್ಮ ಚಿತ್ರದ ಬಗ್ಗೆ ಸುದ್ದಿನೇ ಇಲ್ಲ. ಸಿನಿಮಾ ಬಂದಿರೋದು ಜನಕ್ಕೆ ಗೊತ್ತಾಗದಿದ್ದರೆ ಒಳ್ಳೆಯ ಕತೆಯ ಸಿನಿಮಾ ಮಾಡಿದರೂ ಪ್ರಯೋಜನ ಏನು?’ ಇಂದು ರಾಘ ದ್ವಾರ್ಕಿ ಅವರ ಮಾತುಗಳು.

‘ಒಂದು ಗಂಟೆಯ ಕತೆ’ ಚಿತ್ರದ್ದೂ ಕೂಡ ಇಡೇ ಸೀಡಿ ಪ್ರಕರಣವನ್ನು ನೆನಪಿಸುತ್ತದಂತೆ. ಪ್ರಸ್ತುತ ಬೆಳವಣಿಗೆಗಳಿಗೆ ಹತ್ತಿರ ಇರುವ ಸಿನಿಮಾ ಇದು. ಹೀಗಾಗಿ ಆ ಸೀಡಿ ಕತೆ ಬಿಟ್ಟು, ನಮ್ಮ ಕತೆ ನೋಡಿ. ಹಾಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರವನ್ನೂ ಮಾಡಿ ಎನ್ನುವುದು ನಿರ್ದೇಶಕರ ಮನವಿ. ಈ ಚಿತ್ರವನ್ನು ಸದ್ಯದಲ್ಲೇ ಹಿಂದಿಯಲ್ಲೂ ಮಾಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಇದಕ್ಕೆ ನಿರ್ದೇಶಕ ರಾಘವ ದ್ವಾರ್ಕಿ ಅವರ ಸ್ನೇಹಿತ ರಾಜೀವ್‌ ಸಾಥ್‌ ನೀಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಆಯುಷ್ಮಾನ್‌ ಖುರಾನ್‌ ಅಥವಾ ರಾಜ್‌ಕುಮಾರ್‌ ರಾವ್‌ ‘ಒಂದು ಗಂಟೆಯ ಕತೆ’ ಚಿತ್ರದ ಹಿಂದಿ ವರ್ಷನ್‌ನಲ್ಲಿ ನಟನೆ ಮಾಡುವ ಸಾಧ್ಯತೆಗಳಿವೆಯಂತೆ. ‘ನಮ್ಮ ಚಿತ್ರವನ್ನು ನೋಡಿ. ನಾವು ಹೊಸಬರು. ಒಳ್ಳೆಯ ಚಿತ್ರ ಮಾಡಿದ್ದೇವೆ. ಸಿನಿಮಾ ಗೆದ್ದರೆ 50 ಅಥವಾ 100ನೇ ದಿನದ ಸಂಭ್ರಮದಲ್ಲಿ ಮತ್ತೆ ಸಿಗೋಣ’ ಎಂದಿದ್ದು ನಿರ್ಮಾಪಕಿ ಶ್ವೇತಾ.