Asianet Suvarna News Asianet Suvarna News

ಡಿಸೆಂಬರ್‌ನಲ್ಲಿ 10 ದಿನ ಮೊದಲು ರಿಲೀಸ್‌ ಡೇಟ್‌ ಘೋಷಣೆ: ಜಾಕ್‌ ಮಂಜು

ಇಡೀ ಚಿತ್ರರಂಗ, ಸಿನಿ ರಸಿಕರು ಕಾಯುತ್ತಿದ್ದ ಸಿನಿಮಾ ವಿಕ್ರಾಂತ್ ರೋಣ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಜಾಕ್ ಮಂಕು ನಿರ್ಧರಿಸಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ಪ್ರಶಂಸೆ ನೀಡಿದ್ದಾರೆ. 
 

Producer Jack Manju hints Vikrant Rona release in December vcs
Author
Bangalore, First Published Sep 16, 2021, 9:53 AM IST
  • Facebook
  • Twitter
  • Whatsapp

‘ಪರಿಸ್ಥಿತಿ ಸರಿ ಹೋದರೆ ಡಿಸೆಂಬರ್‌ನಲ್ಲಿ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ ಚಿತ್ರ ಬಿಡುಗಡೆಯಾಗಲಿದೆ’ ಎಂದು ನಿರ್ಮಾಪಕ ಜಾಕ್‌ ಮಂಜು ತಿಳಿಸಿದ್ದಾರೆ.

‘ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್‌ ಎಂದುಕೊಂಡು ಕೆಲಸ ಮಾಡುತ್ತಿದ್ದೇವೆ. ಚಿತ್ರದ ಬಿಡುಗಡೆ ದಿನಾಂಕ ಮೊದಲೇ ಘೋಷಿಸುವುದು, ಆಮೇಲೆ ಅದು ಮುಂದೆ ಹೋಗೋದು ಈಗ ಕಾಮನ್‌ ಆಗಿದೆ. ನಮ್ಮ ಚಿತ್ರಕ್ಕೆ ಹಾಗಾಗಬಾರದು ಅನ್ನುವ ಉದ್ದೇಶಕ್ಕೆ ಸಿನಿಮಾ ಬಿಡುಗಡೆಗೂ 10 ದಿನ ಮೊದಲಷ್ಟೇ ರಿಲೀಸ್‌ ದಿನಾಂಕ ಘೋಷಿಸುತ್ತೇವೆ. ಆ ಹೊತ್ತಿಗೆ ಬೇರೆ ರಾಜ್ಯಗಳ ಚಿತ್ರರಂಗದ ಸ್ಥಿತಿ ನೋಡಿ ಆ ಭಾಷೆಗಳ ರಿಲೀಸ್‌ ಬಗ್ಗೆ ಯೋಚಿಸುತ್ತೇವೆ. ಇನ್ನೇನು ಆಂಧ್ರದಲ್ಲಿ ಶೇ.100 ಸೀಟು ಭರ್ತಿ ಆದೇಶ ಬರಲಿದೆ. ಬೇರೆ ಭಾಷೆಗಳಲ್ಲಿ ಪ್ರಚಾರಕ್ಕೂ ಸಾಕಷ್ಟುಖರ್ಚು ಮಾಡಬೇಕಾಗುತ್ತೆ. ಎಲ್ಲಾ ಖರ್ಚು ವೆಚ್ಚ ಸೇರಿ ಸಿನಿಮಾದ ಬಜೆಟ್‌ 100 ಕೋಟಿ ರು. ಆಗಬಹುದು’ ಎಂದು ಹೇಳಿದ್ದಾರೆ.

Producer Jack Manju hints Vikrant Rona release in December vcs

ಹಿಂದಿ, ತಮಿಳು, ತೆಲುಗಿನಲ್ಲೂ ಸುದೀಪ್‌ ಡಬ್ಬಿಂಗ್‌

‘ಓಟಿಟಿಗಳಿಂದ ಸಾಕಷ್ಟುಆಫರ್‌ಗಳು ಬರುತ್ತಿದ್ದರೂ ನೇರ ಓಟಿಟಿಗೇ ಚಿತ್ರ ನೀಡುವುದಿಲ್ಲ. ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ. ಬಳಿಕ ಪ್ರತಿಕ್ರಿಯೆ ನೋಡಿಕೊಂಡು ಓಟಿಟಿಗೆ ನೀಡುತ್ತೇವೆ. ಈಗಾಗಲೇ ಸುದೀಪ್‌ ಚಿತ್ರದ ಕನ್ನಡ ಡಬ್ಬಿಂಗ್‌ ಮುಗಿಸಿದ್ದಾರೆ. ಮಲಯಾಳಂ ಬಿಟ್ಟು ತೆಲುಗು, ತಮಿಳು, ಹಿಂದಿಗೆ ಕಿಚ್ಚ ಅವರ ಧ್ವನಿಯೇ ಇರಲಿದೆ’ ಎಂದೂ ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

ಡೆಡ್ ಮ್ಯಾನ್ಸ್ ಆ್ಯಂಥಮ್ ಹಿಂದಿನ ದನಿಗಳು

"

Follow Us:
Download App:
  • android
  • ios