ಕಳೆದ ಒಂದು ವಾರದಿಂದ ಕನ್ನಡದ ‘ವಿಷ್ಣುಪ್ರಿಯ’ ಸಿನಿಮಾ ಕೇರಳದ ದಟ್ಟ ಕಾಡಿನಲ್ಲಿ ಸದ್ದು ಮಾಡುತ್ತಿದೆ. ಅಂದರೆ ಚಿತ್ರಕ್ಕಾಗಿ ಸಾಹಸ ಸನ್ನಿವೇಶಗಳನ್ನು ಚಿತ್ರತಂಡ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ಶೂಟಿಂಗ್ ಸ್ಪಾಟ್ ಫೋಟೋಗಳನ್ನು ನೋಡಿದರೆ ಚಿತ್ರದ ನಾಯಕ ಶ್ರೇಯಸ್ ಕೆ ಮಂಜು ಹಾಗೂ ನಾಯಕಿ ಪ್ರಿಯಾ ವಾರಿಯರ್ ಅವರು ಆ್ಯಕ್ಷನ್ ಸನ್ನಿವೇಶಗಳಲ್ಲಿ ಸಿಕ್ಕಾಪಟ್ಟೆ ಮಿಂಚಲಿದ್ದಾರೆಂಬ ಮಾಹಿತಿ ಇದೆ.

ಎಂತೆಂಥಾ ಪೋಸ್ ಕೊಟ್ಟಿದ್ದಾರೆ! ಬಿಗ್ ಬಾಸ್ ಸ್ಪರ್ಧಿಗಳ ನೀವು ನೋಡಿರದ ಪೋಟೋಸ್

ಅಂದಹಾಗೆ ಇದೇ ಕಾಡಿನ, ಇದೇ ಜಾಗದಲ್ಲಿ ಮೋಹನ್‌ಲಾಲ್ ನಟನೆಯ ‘ಪುಲಿ ಮುರುಗನ್’ ಚಿತ್ರದ ಶೂಟಿಂಗ್ ಮಾಡಲಾಗಿದ್ದು. ಈಗ ಕೆ ಮಂಜು ನಿರ್ಮಿಸಿ, ವಿ ಕೆ ಪ್ರಕಾಶ್ ನಿರ್ದೇಶನದ ‘ವಿಷ್ಣುಪ್ರಿಯ’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ.

ಅರ್ಧಶತಕದ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ಪರ್ಧಿ

ಯಶ್ ನಟನೆಯ ‘ಕೆಜಿಎಫ್’ ಹಾಗೂ ರಕ್ಷಿತ್ ಶೆಟ್ಟಿ ಅವರ ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳಿಗೆ ಸಾಹಸಗಳನ್ನು ಸಂಯೋಜನೆ ಮಾಡಿದ ವಿಕ್ರಂ ಮೋರೆ ಅವರೇ ‘ವಿಷ್ಣುಪ್ರಿಯ’ ಚಿತ್ರಕ್ಕೂ ಫೈಟ್ ಕಂಪೋಸ್ ಮಾಡಲಾಗುತ್ತಿದೆ. ಆ್ಯಕ್ಷನ್ ಹಾಗೂ ಹಾಡಿನ ಕೆಲ ಮಾಂಟೇಜ್ ದೃಶ್ಯಗಳನ್ನು ಕೇರಳ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಚಿತ್ರತಂಡ ಹತ್ತು ದಿನಗಳ ಕಾಲ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದೆ.