ಬಿಗ್ ಬಾಸ್ ಮನೆ ಅರ್ಧ ಶತಕ ದಾಖಲಿಸಿದೆ. ಮನೆ   ಏಳು ವಾರಗಳನ್ನು ಮುಗಿಸಿದ್ದು ಏಳನೇ ವಾರ  ಆರ್‌ ಜೆ ಪೃಥ್ವಿ ಹೊರಬಿದ್ದಿದ್ದಾರೆ ಎನ್ನಲಾಗಿದೆ.

ಭೂಮಿ ಶೆಟ್ಟಿ, ಚಂದನ್ ಆಚಾರ್, ಕಿಶನ್, ಪೃಥ್ವಿ, ರಾಜು ತಾಳಿಕೋಟೆ ಹಾಗೂ ಶೈನ್​ ಶೆಟ್ಟಿ ನಾಮಿನೇಟ್ ಆಗಿದ್ದರು. ಎಲ್ಲರಿಗಿಂತ ಮೊದಲು ಶೈನ್ ಶೆಟ್ಟಿ ಅಧಿಕ ಮತಗಳನ್ನು ಪಡೆದು ಸೇವ್ ಆಗಿದ್ದರು.

ಚೈತ್ರಾ ಕೊಟ್ಟೂರು ಮತ್ತು ರಕ್ಷಾ ಮನೆಗೆ ಹೊಸದಾಗಿ ಸೇರಿಕೊಂಡಿದ್ದರು. ಇದಕ್ಕೂ ಮೊದಲು ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಪೃಥ್ವಿ ಮನೆಯಿಂದ ಹೊರಗೆ ಹೆಜ್ಜೆ ಇಟ್ಟಿದ್ದಾರೆ.

ಸುದೀಪ್ ತಾವೇ ಕೈಯಾರೆ ತಯಾರಿಸಿದ ಕೇಕ್ ಮನೆ ಒಳಗೆ ಕಳುಹಿಸಿಕೊಟ್ಟರು. ಇದಾದ ಮೇಲೆ ಮನೆಯವರು ಕೇಕ್ ಚಪ್ಪರಿಸಿ ಬಾಯಿತುಂಬಾ ಹೊಗಳಿದರು.

ನಾನೇನೆ ಬೋಲ್ಡ್ ಡ್ರೆಸ್ ಹಾಕ್ತೇನೆ, ತಿರುಗಿ ಬಂದು ಉತ್ತರ ಕೊಟ್ಟ ಚೈತ್ರಾ ಕೊಟ್ಟೂರು

50 ದಿನದ ಜರ್ನಿಯನ್ನು ಬಿಗ್ ಬಾಸ್ ಒಂದು ವಿಟಿ ಮಾಡಿ ಮನೆಯವರಿಗೆ ತೋರಿಸಿದರು. 50 ದಿನದಲ್ಲಿ ನಡೆದ ಘಟನಾವಳಿಗಳ ಹೈಲೈಟ್ಸ್ ಅದರಲ್ಲಿ ಇತ್ತು. 

ಶೈನ್ ಶೆಟ್ಟಿ ದೀಪಿಕಾ ಮಾತಿಗೆ ಕಿವಿಗೊಟ್ಟು ಗಡ್ಡ ತೆಗೆದಿದ್ದು, ಕಿಶನ್ ಚಂದನಾಳನ್ನು ತಂಗಿ ಎಂದು ಕರೆಯಲು ಶುರುಮಾಡಿದ್ದು ಎಲ್ಲವನ್ನು ಇಟ್ಟುಕೊಂಡು ವಾಸುಕಿ ವೈಭವ್ ಹಾಡಿನ ಮೂಲಕ ರಂಜಿಸಿದರು. ವಾಸುಕಿ ಹಾಡಿಗೆ ಸಖತ್ ಚಪ್ಪಾಳೆ  ಬಿದ್ದವು.

ಮನೆಗೆ ಪ್ರವೇಶ ಮಾಡಿದ್ದ ಮೊದಲನೇ ವಾರ ಅದ್ಭುತ ಪ್ರದರ್ಶನ ನೀಡಿದ್ದ ಪೃಥ್ವಿ ಎರಡನೇ ವಾರ ಕಳಪೆ ಬೋರ್ಡ್ ಕುತ್ತಿಗೆಗೆ ಹಾಕಿಕೊಂಡಿದ್ದರು. ಒಟ್ಟಿನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ಪೃಥ್ವಿ ಮನೆಯಿಂದ ಹೊರ ನಡೆದಿದ್ದಾರೆ.