ಭೀಮನ ಅಮವಾಸ್ಯೆಗೆ ಗಂಡನ ಪಾದಪೂಜೆ ಮಾಡಿದ ಪ್ರಣಿತಾ ಕೊಟ್ರು ಈ ಕಾರಣ: ಫ್ಯಾನ್ಸ್​ ಕಿತ್ತಾಟ!

ಪ್ರತಿ ವರ್ಷದಂತೆ ಈ ವರ್ಷವೂ ಭೀಮನ ಅಮವಾಸ್ಯೆಗೆ ನಟಿ ಪ್ರಣಿತಾ ಸುಭಾಷ್​ ಗಂಡನ ಪಾದಪೂಜೆ ಮಾಡಿ ಅದರ ಫೋಟೋ ಶೇರ್​ ಮಾಡಿದ್ದಾರೆ.  
 

Pranitha Subhash worshiped her husband on Bhimana Amavasya suc

ಸಿಂಪಲ್​ ಬ್ಯೂಟಿ ಎಂದೇ ಹೆಸರಾದವರು ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್​ (Pranitha Subhash). 2010ರಿಂದಲೂ ಪ್ರಣಿತಾ  ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಪೊರ್ಕಿ ಚಿತ್ರ ಮೂಲಕ ಅವರು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿರೋ ಈ ಬೆಡಗಿ ಇದೀಗ ಬಾಲಿವುಡ್​ ಸೇರಿದಂತೆ ಬಹುಭಾಷಾ ತಾರೆಯಾಗಿ ಗಮನ ಸೆಳೆದಿದ್ದಾರೆ.  ತೆಲುಗು, ತಮಿಳು ಸೇರಿದಂತೆ ಸ್ಟಾರ್ ನಟರ ಜೊತೆ ಪ್ರಣಿತಾ ನಟಿಸಿದ್ದಾರೆ.  ಸದ್ಯ ಗಂಡ, ಮಗು ಎಂದು ಫ್ಯಾಮಿಲಿಗೆ ಟೈಮ್​ ಕೊಡ್ತಿರೋ ಈ ಬ್ಯೂಟಿ ಚಿತ್ರರಂಗದಲ್ಲಿಯೂ ಬಿಜಿಯಾಗಿದ್ದಾರೆ. ಖ್ಯಾತ ಉದ್ಯಮಿ ನಿತಿನ್‌ ರಾಜು ಜೊತೆ  2021ರಂದು  ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ 2022ರಲ್ಲಿ ಹೆಣ್ಣು ಮಗುವಿನ ಅಮ್ಮನಾಗಿದ್ದಾರೆ. ಅಮ್ಮನಾದರೂ ಫಿಟ್​ನೆಸ್​ ಕಾಯ್ದುಕೊಂಡು ಇನ್ನೂ ಚಾರ್ಮಿಂಗ್​ ಉಳಿಸಿಕೊಂಡಿರೋ ನಟಿ ಅಪ್ಪಟ ಹಿಂದೂ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ.

ಇಂದು ಭೀಮನ ಅಮವಾಸ್ಯೆ (Bheemana Amavasya). ಹಿಂದೂ ಶಾಸ್ತ್ರದ ಪ್ರಕಾರ ಪತಿಯ ಪಾದಪೂಜೆಯನ್ನು ಪತ್ನಿ ಮಾಡಬೇಕು. ಇದು ತಲೆತಲಾಂತರಗಳಿಂದ ನಡೆದು ಬಂದಿದೆ. ಮಹಿಳೆಯರೂ ದುಡಿದು ಸಂಸಾರದ ನೊಗ ಹೊತ್ತಿರುವ ಈ ಹೊತ್ತಿನಲ್ಲಿ, ಗಂಡನಿಗೆ ಪೂಜೆ ಮಾಡುವುದು ಏಕೆ ಎನ್ನುವ ಹೆಣ್ಣುಮಕ್ಕಳೇ ಹೆಚ್ಚು.  ಆದರೆ ಅದೇನೇ ವಾದ-ಪ್ರತಿವಾದ-ವಿವಾದ ಇದ್ದರೂ ಕೆಲವು ಪತ್ನಿಯರು ಭೀಮನ ಅಮವಾಸ್ಯೆಯನ್ನು ಮಾತ್ರ ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಅವರ ಪೈಕಿ ನಟಿ ಪ್ರಣಿತಾ ಕೂಡ ಒಬ್ಬರು. ಪ್ರತಿ ವರ್ಷದಂತೆ ಈ ವರ್ಷವೂ ಇವರು ಪತಿಯ ಪಾದ ಪೂಜೆ ಮಾಡಿದ್ದು, ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್​ ಮಾಡಿದ್ದಾರೆ. ಇದಕ್ಕೆ ಕ್ಯಾಪ್ಷನ್​ ಕೂಡ ಕೊಟ್ಟಿರುವ ನಟಿ,  ಸನಾತನ ಧರ್ಮದಲ್ಲಿ ಭೀಮನ ಅಮಾವ್ಯಾಸೆಗೆ ಹೆಚ್ಚಿನ ಮಹತ್ವವಿದೆ.  ದೇವಿಯರನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ.

Meghana Raj ಅಭಿನಯದ ಸಸ್ಪೆನ್ಸ್​ ಥ್ರಿಲ್ಲರ್​ 'ತತ್ಸಮ ತದ್ಭವ' ಟೀಸರ್​ ಬಿಡುಗಡೆ
 
ಈಕೆಯ ಈ ಫೋಟೋ ನೋಡಿ ಹಾಗೂ ಅದಕ್ಕೆ ಕೊಟ್ಟ ಶೀರ್ಷಿಕೆ ನೋಡಿದ ಫ್ಯಾನ್ಸ್​ ಫಿದಾ ಆಗಿದ್ದಾರೆ. ಆದರೆ ಪ್ರತಿ ಬಾರಿಯಂತೆ ಈ ಬಾರಿ ಕೂಡ ಪ್ರಣಿತಾ ಭೀಮನ ಅಮವಾಸ್ಯೆಯ ಫೋಟೋದಲ್ಲಿ ಪತಿಯ ಮುಖವನ್ನು ಕಾಣಿಸಲಿಲ್ಲ. ಕಳೆದ ಬಾರಿ ಅರ್ಧಬಂರ್ಧ ಮುಖ ಕಾಣಿಸುವಂಥ ಫೋಟೋ ಹಾಕಿದ್ದರೆ, ಈ ಬಾರಿ ಕೇವಲ ಪಾದದ ಫೋಟೋ ಹಾಕಿದ್ದಾರೆ. ಪಾದಕ್ಕೆ ಹೂವನ್ನಿಟ್ಟು ಪಾದವನ್ನು ತಾವು ನಮಸ್ಕರಿಸುತ್ತಿರುವ ಫೋಟೋ (Photo) ಹಾಕಿದ್ದಾರೆ. ಈ ಬಾರಿ ಕೂಡ ಈಕೆಯ ಫ್ಯಾನ್ಸ್​ ಪತಿಯ ಮುಖ ನೋಡಲಾಗದೇ ನಿರಾಶರಾಗಿದ್ದಾರೆ. ಪಾದ ಪೂಜೆ ಮಾಡುತ್ತಿರುವುದು ಸಂತೋಷದ ವಿಷಯ. ಅದರಲ್ಲಿಯೂ ನಟಿಯಾಗಿ ನೀವು ಎಲ್ಲರಿಗೂ ದಾರಿದೀಪ ಆಗಿರುವಿರಿ. ಆದರೆ ಪತಿಯ ಮುಖ ಏಕೆ ತೋರಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅದೇ ವೇಳೆ ಈ ಫೋಟೋ ಈಕೆಯ ಫ್ಯಾನ್ಸ್​ ಕಿತ್ತಾಟಕ್ಕೂ ಕಾರಣವಾಗಿದೆ. ಅದೇನೆಂದರೆ ಕಮೆಂಟಿಗನೊಬ್ಬ ಸುದೀರ್ಘ ಕಮೆಂಟ್​ ಹಾಕಿ, ಭೀಮನ ಅಮವಾಸ್ಯೆಗೆ ಪತಿಯ ಪಾದ ಪೂಜೆ ಏಕೆ ಮಾಡಬೇಕು ಎನ್ನುವುದನ್ನು ಬರೆದಿದ್ದಾರೆ. ಗಂಡಂದಿರು ಮನೆಯನ್ನು ನೋಡಿಕೊಳ್ಳುವವರು. ಸಂಪಾದನೆ ಮಾಡಿ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಆದ್ದರಿಂದ ಅವರೇ ಶ್ರೇಷ್ಠ. ಹೆಂಗಸರು ಈ ದಿನಗಳಲ್ಲಿ ದುಡಿಯುತ್ತಿದ್ದರೂ ಅವರು ತಮಗಿಂತ ಹೆಚ್ಚು ಸಂಪಾದನೆ ಮಾಡುವವರನ್ನೇ ಹುಡುಕುತ್ತಾರೆ. ತಮ್ಮ ದುಡಿಮೆಯನ್ನು ತಾವೇ ಖರ್ಚು ಮಾಡುತ್ತಾರೆ. ಆದರೆ ಪುರುಷರು ಹಾಗಲ್ಲ. ಆದ್ದರಿಂದ ಪುರುಷರ ಪಾದಪೂಜೆ ಮಾಡಬೇಕು ಎಂದು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆ ನೀಡಿದ್ದಾರೆ.  ಇದು ಹಲವರ ಅದರಲ್ಲಿಯೂ ಮಹಿಳೆಯ ಕೆಂಗಣ್ಣಿಗೆ ಗುರಿಯಾಗಿದೆ.  ನಮ್ಮ ಊರಿಗೆ ಬಂದು ನೋಡಿ. ಇಲ್ಲಿ ಎಷ್ಟೋ ಹೆಣ್ಣುಮಕ್ಕಳೇ ದುಡಿಮೆ ಮಾಡಿ ಕುಟುಂಬ ನೋಡಿಕೊಳ್ಳುತ್ತಿದ್ದಾರೆ, ಅವರ ಪತಿಗೆ ಕೆಲಸವೇ ಇಲ್ಲ. ಎಲ್ಲರನ್ನೂ ನೀವು ಜನರಲೈಸ್​ ಮಾಡುವುದು ಸರಿಯಲ್ಲ ಎಂದಿದ್ದರೆ, ಇನ್ನು ಕೆಲವರು ನಟಿಯರು ಮಾತ್ರ ಮಹಿಳೆಯರಲ್ಲ. ಎಷ್ಟೋ ಮಹಿಳೆಯರು ಅವರೇ ದುಡಿಮೆ ಮಾಡಿ ಸಂಸಾರದ ನೊಗ ಹೊತ್ತಿರುವುದು ಇದೆ ಎಂದಿದ್ದಾರೆ. 

ರಹಸ್ಯವಾಗಿ ಮದ್ವೆಯಾದ್ರಾ ಕೆಜಿಎಫ್​ ನಟಿ ಶ್ರೀನಿಧಿ ಶೆಟ್ಟಿ? ಫೋಟೋ ನೋಡಿ ಫ್ಯಾನ್ಸ್​ ಖುಷ್​!

ಇನ್ನು, ನಟಿ ಪ್ರಣಿತಾ ವಿಷಯಕ್ಕೆ ಬರುವುದಾದರೆ, ಈಕೆ,  ಜರಾಸಂದ, ಮಿ.420, ಅಂಗಾರಕ ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ.  ಮದುವೆಗೂ ಮುನ್ನ ಬಾಲಿವುಡ್‌ನ ಹಂಗಾಮ 2, ಭುಜ್ ಸಿನಿಮಾದಲ್ಲಿ ಪೊರ್ಕಿ ನಾಯಕಿ ಅಭಿನಯಿಸಿದ್ದರು. ಮದುವೆ, ಮಗುವಾದ ಬಳಿಕ ಸ್ವಲ್ಪ ಬ್ರೇಕ್​ ತೆಗೆದುಕೊಂಡಿದ್ದ ನಟಿ,  ನಟ ದಿಲೀಪ್‌ ಅವರಿಗೆ ನಾಯಕಿಯಾಗುವ ಮೂಲಕ ಮಾಲಿವುಡ್‌ಗೆ (Mollywood) ಎಂಟ್ರಿ ಕೊಟ್ಟಿದ್ದಾರೆ.  

Latest Videos
Follow Us:
Download App:
  • android
  • ios