Meghana Raj ಅಭಿನಯದ ಸಸ್ಪೆನ್ಸ್​ ಥ್ರಿಲ್ಲರ್​ 'ತತ್ಸಮ ತದ್ಭವ' ಟೀಸರ್​ ಬಿಡುಗಡೆ

ಬಹು ವರ್ಷಗಳ ಬಳಿಕ ನಟಿ ಮೇಘನಾ ರಾಜ್ ‘ತತ್ಸಮ ತದ್ಭವ’ ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡಿದ್ದು, ಇದರ ಟೀಸರ್​ ಇಂದು ಬಿಡುಗಡೆಯಾಗಿದೆ.
 

Meghana Raj stard Tatsama Tadbhava teaser released today suc

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ  ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.  ವರ್ಷಗಳ ಬಳಿಕ  ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್‌.  ಮೇಘನಾ ರಾಜ್ (Meghana Raj) ಅವರು ‘ತತ್ಸಮ ತದ್ಭವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆದಿದ್ದವು. ಇದು ಮಹಿಳಾ ಪ್ರಧಾನ ಸಿನಿಮಾ ಎಂಬ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. 

 ಕೆಲ ವರ್ಷಗಳಿಂದ ಈಚೆ ಮೇಘನಾ ರಾಜ್ ಅವರ ಬಾಳಲ್ಲಿ ಹಲವು ಏರುಪೇರುಗಳು ಉಂಟಾದವು. ಪತಿ ಚಿರಂಜೀವಿ ಮೃತಪಟ್ಟ ಬಳಿಕ ಅವರು ಕಣ್ಣೀರಲ್ಲಿ ಕೈ ತೊಳೆದರು. ರಾಯನ್ ಜನಿಸಿದ ಬಳಿಕ ಅವರ ಬಾಳಲ್ಲಿ ಮತ್ತೆ ಸಂತೋಷ ಮೂಡಿತು. ಈಗ ಮೇಘನಾ ರಾಜ್ ಅವರು ಖುಷಿಯಾಗಿದ್ದಾರೆ. ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಕಂಬ್ಯಾಕ್ ಸಿನಿಮಾ  ‘ತತ್ಸಮ ತದ್ಭವ’ (Tatsama Tadbhava) ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಇದಕ್ಕೆ ಸಕತ್​ ರೆಸ್ಪಾನ್ಸ್​ ಬಂದಿದೆ. ಮೇಘನಾ ರಾಜ್ ಅವರು ಮೇ 3ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ‘ತತ್ಸಮ ತದ್ಭವ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿತ್ತು. ಈ ಪೋಸ್ಟರ್​ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದರು. ಈ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಟೀಸರ್ ನೋಡಿ ಇನ್ನಷ್ಟು  ಕುತೂಹಲ ಮೂಡಿದೆ.\

ಚಿನ್ನದ ಬೆಲೆ ಗಗನ ಮುಟ್ಟಿದರೂ ಬ್ಯಾಗ್‌ಮೇಲೆ MR ಕೆತ್ತಿಸಿಕೊಂಡ ಮೇಘನಾ ರಾಜ್!
 
ಈ ಟ್ರೇಲರ್​ ನೋಡಿದರೆ ಇದು ಕಾಣೆಯಾಗಿರುವ ಪತಿಯ ಹುಡುಕಾಟದ ಕಥೆ ಎಂದು ತೋರುತ್ತದೆ. ಇದರಲ್ಲಿ ಮೇಘನಾ ರಾಜ್​ ಅವರ ಮಾತನ್ನು ಕೇಳಬಹುದು. ಅವರು  ‘ನನ್ನ ಹೆಸರು ಆರಿಕಾ. ನನ್ನ ಪತಿ ಕಾಣೆ ಆಗಿದ್ದಾರೆ’ ಎಂದು ದೂರು  ದೂರು ನೀಡುತ್ತಾರೆ. ಈ ಕೇಸ್​ ಅನ್ನು  ಪೊಲಿಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ನಡೆಸುತ್ತಾರೆ. ಈ ಟೀಸರ್​ನ ಉದ್ದಕ್ಕೂ ಕುತೂಹಲಕಾರಿ ಸಸ್ಪೆನ್ಸ್ ಅಂಶ ಇದೆ.  ಇದನ್ನು ನೋಡಿದರೆ ಚಿತ್ರದಲ್ಲಿ ಸಾಕಷ್ಟು  ಥ್ರಿಲ್ಲಿಂಗ್ ಅಂಶ ಇದೆ ಎನ್ನುವುದು ತಿಳಿದುಬರುತ್ತದೆ. ಅಂದಹಾಗೆ ಈ ಟೀಸರ್​ ಬೆಳಿಗ್ಗೆ 10:31ಕ್ಕೆ  ರಿಲೀಸ್ ಆಗಿದೆ.  ನಟಿ ಮೇಘನಾ ರಾಜ್ (Meghana Raj) ಅವರ ನಟನೆ ಎಲ್ಲರ ಗಮನ ಸೆಳೆದಿದೆ. ಆಗಸ್ಟ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಟೀಸರ್​​ನಲ್ಲಿ ಮಾಹಿತಿ ನೀಡಲಾಗಿದೆ.

ಅಂದಹಾಗೆ, ಮೇಘನಾ ಅವರ ಸ್ನೇಹಿತರಾಗಿರುವ ಪನ್ನಗಾಭರಣ (Pannagabharana) ‘ತತ್ಸಮ ತದ್ಭವ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸ್ಫೂರ್ತಿ ಅನಿಲ್ ಪನ್ನಗ ಭರಣ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ವಿಶಾಲ್ ಆತ್ರೇಯ ನಿರ್ದೇಶನ ಇದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಸೇರಿ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಮೇಘನಾ ರಾಜ್‌ ಕೈಯಲ್ಲಿ ಬಾಟಲಿಗಳು ಪೀಸ್‌ ಪೀಸ್‌, ಪಾತ್ರೆಗಳು ಪುಡಿಪುಡಿ: ಆಗಿದ್ದೇನು?
 

Latest Videos
Follow Us:
Download App:
  • android
  • ios