ವಿನೋದ್ ರಾಜ್ ಮದ್ವೆಯಾಗಿದ್ದು ಮನೆ ಕೆಲಸದವಳನ್ನೇ, ಹಾಗಾಗಿ ಸೀಕ್ರೆಟ್ ಆಗಿ ಇಟ್ಟಿದ್ದು ಎಂದು ಎಂದು ಪ್ರಕಾಶ್ ರಾಜ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಸೀಕ್ರೆಟ್ ಮದುವೆ ವಿಚಾರ ಇನ್ನೂ ಚರ್ಚೆಯಾಗುತ್ತಿದೆ. ವಿನೋದ್ ರಾಜ್ ಕುಟುಂಬದ ಫೋಟೋ ಬಹಿರಂಗವಾಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿನೋದ್ ರಾಜ್ ಅವರಿಗೆ ಮದುವೆಯಾಗಿದ್ದು ಮಗ ಇದ್ದಾನೆ ಎನ್ನುವ ಸತ್ಯವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದರು. ಜೊತೆಗೆ ಇದಕ್ಕೆಲ್ಲ ಮಗನ ಮಾರ್ಕ್ಸ್ ಕಾರ್ಡ್ ಸಾಕ್ಷಿ ಎಂದು ಹೇಳಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಲೀಲಾವತಿ ಅವರೇ ಪ್ರತಿಕ್ರಿಯೆ ನೀಡಿ ಮಗನ ಮದುವೆ ಆಗಿದೆ ಎಂದು ಒಪ್ಪಿಕೊಂಡಿದ್ದರು. ಅಲ್ಲದೇ ಸ್ವತಃ ವಿನೋದ್ ರಾಜ್ ಕೂಡ ಪ್ರತಿಕ್ರಿಯೆ ನೀಡುವ ಮೂಲಕ ಸೀಕ್ರೆಟ್ ಮದುವೆ ಬಗ್ಗೆ ಮೌನ ಮುರಿದಿದ್ದರು. ಅಷ್ಟೆಯಲ್ಲದೇ ಇದನ್ನೆಲ್ಲ ಬಯಲಿಗೆಳೆದ ನಿರ್ದೇಶಕ ಪ್ರಕಾಶ್ ರಾಜ್ ಮೆಹು ವಿರುದ್ಧ ಕಿಡಿ ಕಾರಿದ್ದರು.
ನಿರ್ದೇಶಕ ಪ್ರಕಾಶ್ ರಾಜ್ ಮೆಹು, ವಿನೋದ್ ರಾಜ್ ಮದುವೆ ಬಗ್ಗೆ ಮತ್ತಷ್ಟು ವಿಚಾರ ಬಿಚ್ಚಿಟ್ಟಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ವಾಹಿನಿ ಜೊತೆ ಮಾತನಾಡಿದ ಪ್ರಕಾಶ್ ರಾಜ್, ವಿನೋದ್ ರಾಜ್ ಮದುವೆಯನ್ನು ಸೀಕ್ರೆಟ್ ಆಗಿ ಇಟ್ಟಿದ್ದೇಕೆ ಎಂದು ಬಹಿರಂಗ ಪಡಿಸಿದರು. ವಿನೋದ್ ರಾಜ್ ಮನೆ ಕೆಲಸ ಮಾಡುತ್ತಿದ್ದ ಯುವತಿಯನ್ನೇ ಮದುವೆಯಾಗಿದ್ದಾರೆ ಹಾಗಾಗಿ ಮದ್ವೆ ವಿಚಾರ ಮುಚ್ಚಿಟ್ಟಿದ್ದಾರೆ ಅನಿಸುತ್ತೆ ಎಂದು ಹೇಳಿದ್ದಾರೆ.
'ವಿನೋದ್ ರಾಜ್ ಅವರಿಗೆ ಮಗ ಹುಟ್ಟಿದ್ದು 2001ರಲ್ಲಿ. ಹಾಗಿದ್ದಾಗ ಅವರ ಮದುವೆ 1998-2000 ಒಳಗೆ ಆಗಿದೆ. ಮನೆ ಕೆಲಸ ಮಾಡುತ್ತಿದ್ದ ಯುವತಿಯನ್ನೇ ಮದುವೆಯಾಗಿದ್ದು, ಹಾಗಾಗಿ ಎಲ್ಲೂ ಹೇಳಿಕೊಂಡಿಲ್ಲ' ಎಂದು ಹೇಳಿದ್ದಾರೆ. 'ಅದು ನಿಜನೇ ಆಗಿದ್ರೆ ಹೆಮ್ಮೆ ಇಂದ ಹೇಳಿಕೊಳ್ಳಬೇಕು. ಅದು ತಪ್ಪಲ್ಲ. ಮನೆ ಕೆಲಸ ಮಾಡೋ ಹೆಣ್ಣಿಗೆ ಬಾಳು ಕೊಟ್ಟಿದ್ದಾರೆ ಅಂದರೆ ಹೆಮ್ಮೆ ಇಂದ ಹೇಳುವ ವಿಶಯ. ಇದೇ ಕಾರಣಕ್ಕೆ ಮುಚ್ಚಿದ್ದು ಅಥವಾ ಏನ್ ಇದಿಯೋ ಗೊತ್ತಿಲ್ಲ. ಹೆಂಡತಿ, ಮಗ ಇರೋದು ನಿಜ' ಎಂದು ಹೇಳಿದ್ದಾರೆ.
ನಾವೇನು ಭಯೋತ್ಪಾದನೆ ಮಾಡಿದ್ದೀವಾ; ಸೀಕ್ರೆಟ್ ಮದ್ವೆ ಪ್ರಶ್ನಿಸಿದವರಿಗೆ ಯಶ್ ಡೈಲಾಗ್ ಮೂಲಕ ವಿನೋದ್ ರಾಜ್ ಕಿಡಿ
ಪ್ರಕಾಶ್ ವಿರುದ್ಧ ಕಿಡಿ
ಪ್ರಕಾಶ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ವಿನೋದ್ ರಾಜ್, 'ನೋಡಿ ಸ್ವಾಮಿ ಅವರು ಇರೋದೇ ಹಾಗೆ ಅಂತ ಅವರು ಹೇಳ್ತಾರೆ. ನಾವು ಹೇಳ್ತೀವಿ ನೋಡಿ ಸ್ವಾಮಿ ನಾನು ತನ್ನ ತಾಯಿ ಇರೋದೇ ಹೀಗೆ ಅಂತ. ನೀವು ಪಂಚಾಯ್ತಿ ಮಾಡುವ ಮಾತನ್ನು ದಯವಿಟ್ಟು ಅಳೆದು ಮಾತಾಡಿ. ಯಶ್ ಡೈಲಾಗ್ ನೆನಪಾಗುತ್ತಿದೆ. ದುಶ್ಮನ್ ಕಿದರ್ ಹೈ ಅಂದರೆ ಉರ್ತುಂಬ ಹೈ ಅಂತರಲ್ಲ ಹಾಗೆ. ಆ ಮನುಷ್ಯ ಮಾತಾಡಿದಾಗ ಏನು ಹೇಳಬಾರದು. ಯಾರು ಏನು ಜೀವನನೇ ಮಾಡಬಾರದಾ, ನಮ್ಮಿಂದ ಯಾರಿಗಾದ್ರೂ ತೊಂದರೆ ಆಗಿದ್ಯಾ ಅದನ್ನು ಮಾತನಾಡಿ. ಏನನ್ನು ಕಂಡಿಹಿಡಿಯುತ್ತಿದ್ದೀರಾ' ಎಂದು ಕಿಡಿ ಕಾರಿದರು.
'ರಾಜ್ ಕುಮಾರ್ ಮಗ ವಿನೋದ್ ರಾಜ್' ವದಂತಿ ಹಬ್ಬಲು ದ್ವಾರಕೀಶ್ ಕಾರಣ: ಶಾಕಿಂಗ್ ವಿಚಾರ ಬಿಚ್ಚಿಟ್ಟ ಪ್ರಕಾಶ್ ರಾಜ್
'ತಾಯಿ ಏನು ಹೇಳ್ತಾರೋ ನಾವು ಹಾಗೆ ನಡೆಯೋದು. ಸುಮ್ಮನಿರು ಅಂತಾರೆ ಅದಕ್ಕೆ ನಾನು ಸುಮ್ಮನೆ ಇರೋದು. ನಮ್ಮಿಂದ ಯಾರಿಗಾದ್ರು ತೊಂದರೆ ಆಗುತ್ತಿದ್ಯಾ, ಅಂತದ್ದಕ್ಕೆ ಅದಿಕ್ಕೆ ನಾವು ತಲೆನೇ ಇಡಲ್ಲ. ನಾನು ನಮ್ಮ ಅಮ್ಮ ಯಾವುತ್ತು ಯಾರಿಗೂ ತೊಂದರೆ ಕೊಟ್ಟಿಲ್ಲ, ತಪ್ಪಾದ ಉತ್ತರ ನೀಡಲ್ಲ. ನಿಮ್ಮ ಮನಸ್ಥಿತಿ ಮನೋಭಾವ ಹೇಗಿದೆ ಅದನ್ನು ಮೊದಲು ಸರಿ ಮಾಡಿಕೊಳ್ಳಿ' ಎಂದು ಪ್ರಕಾಶ್ ರಾಜ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದರು.
