ನಾವೇನು ಭಯೋತ್ಪಾದನೆ ಮಾಡಿದ್ದೀವಾ ಎಂದು ನಟ  ವಿನೋದ್ ರಾಜ್ ಮುಚ್ಚಿಟ್ಟ ಮದ್ವೆ ಬಗ್ಗೆ  ಪ್ರತಿಕ್ರಿಯೆ ನೀಡಿ ಕಿಡಿ ಕಾರಿದ್ದಾರೆ. 

ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿನೋದ್ ರಾಜ್ ಕುಟುಂಬ ಫೋಟೋ ಬಹಿರಂಗವಾಗುತ್ತಿದ್ದಂತೆ ಈ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ವಿನೋದ್ ರಾಜ್ ಅವರಿಗೆ ಮದುವೆಯಾಗಿದ್ದು ಮಗ ಇದ್ದಾನೆ ಎನ್ನುವ ಸತ್ಯವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬಹಿರಂಗ ಪಡಿಸಿದ್ದರು. ಜೊತೆಗೆ ಇದಕ್ಕೆಲ್ಲ ಮಗನ ಮಾರ್ಕ್ಸ್ ಕಾರ್ಡ್ ಸಾಕ್ಷಿ ಎಂದು ಹೇಳಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಲೀಲಾವತಿ ಅವರೇ ಪ್ರತಿಕ್ರಿಯೆ ನೀಡಿ ಮಗನ ಮದುವೆ ಆಗಿದೆ ಎಂದು ಒಪ್ಪಿಕೊಂಡಿದ್ದರು. ಇದೀಗ ಸ್ವತಃ ವಿನೋದ್ ರಾಜ್ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಸೀಕ್ರೆಟ್ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಅಷ್ಟೆಯಲ್ಲದೇ ಇದನ್ನೆಲ್ಲ ಬಯಲಿಗೆಳೆದ ನಿರ್ದೇಶಕ ಪ್ರಕಾಶ್ ರಾಜ್ ಮೆಹು ವಿರುದ್ಧ ಕಿಡಿ ಕಾರಿದ್ದಾರೆ. 

ಯೂಟ್ಯೂಬ್ ಮಾಹಿನಿ ಸಿನಿವುಡ್ ಜೊತೆ ಮಾತನಾಡಿದ ನಟ ವಿನೋದ್ ರಾಜ್ ಪ್ರಕಾಶ್ ರಾಜ್ ಅವರನ್ನು ತರಾಟೆ ತೆಗೆದುಕೊಂಡರು. ಏನು ದೊಡ್ಡ ನಿಧಿ ಕಂಡುಹಿಡಿದಿದ್ದೀರಾ? ಈ ದೇಶದಲ್ಲಿ ಎಷ್ಟೋ ಸಮಸ್ಯೆ ಇದೆ ಇದರ ಬಗ್ಗೆ ಮಾತಾಡು, ವಿನೋದ್ ರಾಜ್‌ಗೆ ಸಿನಿಮಾ ಇರ್ಲಿಲ್ಲ ಆದರ ಬಗ್ಗೆ ಯಾರು ಮಾತಾಡಿಲ್ಲ, ನಮ್ಮಿಂದ ಯಾರಿಗಾದರೂ ತೊಂದರೆ ಆಗಿದ್ಯಾ, ಭಯೋತ್ಪಾದನೆ ಮಾಡಿದ್ದೀವಾ ಈ ಬಗ್ಗೆ ಯಾಕೆ ಮಾತಾಡ್ತಿಯಾ ಎಂದು ಪ್ರಕಾಶ್ ರಾಜ್ ಅವರನ್ನು ತರಾಟೆ ತೆಗೆದುಕೊಂಡರು. 

'ನೋಡಿ ಸ್ವಾಮಿ ಅವರು ಇರೋದೇ ಹಾಗೆ ಅಂತ ಅವರು ಹೇಳ್ತಾರೆ. ನಾವು ಹೇಳ್ತೀವಿ ನೋಡಿ ಸ್ವಾಮಿ ನಾನು ತನ್ನ ತಾಯಿ ಇರೋದೇ ಹೀಗೆ ಅಂತ. ನೀವು ಪಂಚಾಯ್ತಿ ಮಾಡುವ ಮಾತನ್ನು ದಯವಿಟ್ಟು ಅಳೆದು ಮಾತಾಡಿ. ಯಶ್ ಡೈಲಾಗ್ ನೆನಪಾಗುತ್ತಿದೆ. ದುಶ್ಮನ್ ಕಿದರ್ ಹೈ ಅಂದರೆ ಉರ್ತುಂಬ ಹೈ ಅಂತರಲ್ಲ ಹಾಗೆ. ಆ ಮನುಷ್ಯ ಮಾತಾಡಿದಾಗ ಏನು ಹೇಳಬಾರದು. ಯಾರು ಏನು ಜೀವನನೇ ಮಾಡಬಾರದಾ, ನಮ್ಮಿಂದ ಯಾರಿಗಾದ್ರೂ ತೊಂದರೆ ಆಗಿದ್ಯಾ ಅದನ್ನು ಮಾತನಾಡಿ. ಏನನ್ನು ಕಂಡಿಹಿಡಿಯುತ್ತಿದ್ದೀರಾ' ಎಂದು ಪ್ರಕಾಶ್ ರಾಜ್‌ ವಿರುದ್ಧ ಕಿಡಿ ಕಾರಿದರು. 

'ಇದನ್ನೆಲ್ಲ ರಿವೀಲ್ ಮಾಡೋಕೆ ತಮ್ಮ ತಾಯಿ ಕಷ್ಟದಲ್ಲಿ ಇದ್ದಾಗ ಇದನ್ನೆಲ್ಲ ಮಾಡಿದ್ದು. ವಿನೋದ್ ರಾಜ್ ಅವರಿಗೆ ಕರೆದೂ ಕರೆದೂ ಸಿನಿಮಾ ಕೊಟ್ಟವರೂ ಯಾರಾದ್ರೂ ಇದ್ದಾರಾ, ಎಷ್ಟು ಸಿನಿಮಾ ಮಾಡಿದ್ದಾನೆ, ಮಾಡಿದ್ದು ಕೇವಲ 25 ಅಷ್ಟೆ, ಅದನ್ನ ಯಾಕೆ ಕೊಟ್ಟಿಲ್ಲ ಎಂದು ಕೇಳುವುದಕ್ಕೆ ಇಲ್ಲಿ ಯಾರಿಗೂ ಭವಿಷ್ಯವಿಲ್ಲ. ನಮ್ಮ ಮುಂದೆನೇ ಓಡಾಡ್ತಿದ್ದಾರೆ. ಮಗನ ಮದ್ವೆ ಮಾಡ್ಸಿಲ್ವಾ ಮಗನ ಮದ್ವೆ ಮಾಡ್ಸಿಲ್ವಾ ಅಂತ ಕೇಳ್ತಾರೆ' ಎಂದು ಅಸಮಾಧಾನ ಹೊರಹಾಕಿದರು. 

'ರಾಜ್ ಕುಮಾರ್ ಮಗ ವಿನೋದ್ ರಾಜ್' ವದಂತಿ ಹಬ್ಬಲು ದ್ವಾರಕೀಶ್ ಕಾರಣ: ಶಾಕಿಂಗ್ ವಿಚಾರ ಬಿಚ್ಚಿಟ್ಟ ಪ್ರಕಾಶ್ ರಾಜ್

'ತಾಯಿ ಏನು ಹೇಳ್ತಾರೋ ನಾವು ಹಾಗೆ ನಡೆಯೋದು. ಸುಮ್ಮನಿರು ಅಂತಾರೆ ಅದಕ್ಕೆ ನಾನು ಸುಮ್ಮನೆ ಇರೋದು. ನಮ್ಮಿಂದ ಯಾರಿಗಾದ್ರು ತೊಂದರೆ ಆಗುತ್ತಿದ್ಯಾ, ಅಂತದ್ದಕ್ಕೆ ಅದಿಕ್ಕೆ ನಾವು ತಲೆನೇ ಇಡಲ್ಲ. ನಾನು ನಮ್ಮ ಅಮ್ಮ ಯಾವುತ್ತು ಯಾರಿಗೂ ತೊಂದರೆ ಕೊಟ್ಟಿಲ್ಲ, ತಪ್ಪಾದ ಉತ್ತರ ನೀಡಲ್ಲ. ನಿಮ್ಮ ಮನಸ್ಥಿತಿ ಮನೋಭಾವ ಹೇಗಿದೆ ಅದನ್ನು ಮೊದಲು ಸರಿ ಮಾಡಿಕೊಳ್ಳಿ' ಎಂದು ಫೋಟೋ ರಿವೀಲ್ ಮಾಡಿದವರಿಗೆ ಉತ್ತರ ನೀಡಿದರು. 

'ಇಂಥ ಶ್ರೇಷ್ಠ ವ್ಯಕ್ತಿಯ ಮನಸ್ಸು ನೋಯಿಸಿದವರು ಎಂದೂ ಉದ್ದಾರ ಆಗಲ್ಲ. ನಮಗೆ ಗೊತ್ತು, ಭಗವಂತನಿಗೆ ಗೊತ್ತು, ಯಾರ್ ಮಾರ್ಯಾದೆ ಕಳೆಯೋಕೆ ಹೊರಟಿದ್ದೀಯಾ, ಪ್ರಜ್ಞೆ ಇದಿಯಾ, ಪ್ರಾಣ ಹೋದರು ಸರಿ ತಪ್ಪಾದ ಪ್ರಶ್ನೆಗಳಿಗೆ ಉತ್ತರ ಕೊಡಲಲ್. ಲೀಲಾವತಿ, ವಿನೋದ್ ರಾಜ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಅದರ ಪರಿಸ್ಥಿತಿ ಪರಿಣಾಮ ಏನಾಗಲಿದೆ ಎಂದು ಪ್ರತಿಯೊಬ್ಬರಿಗೂ ಅರ್ಥವಾಗುತ್ತೆ' ಎಂದು ಆಕ್ರೋಶ ಹೊರಹಾಕಿದರು. 

ಲೀಲಾವತಿ ಅವ್ರೇ ಆ ಇನ್ನೊಂದು ಸತ್ಯ ಒಪ್ಪಿಕೊಂಡು ನೇರವಾಗಿ ಸ್ವರ್ಗಕ್ಕೆ ಹೋಗಿ; ಪ್ರಕಾಶ್ ರಾಜ್ ಮೆಹು

'ಮದುವೆ ಎಲ್ಲರದ್ದೂ ನಡಿತಿದೆ. ಇದರಿಂದ ಏನಾಗಿದೆ ಭಯೋತ್ಪಾದನೆ ಮಾಡಿದ್ದೀವಾ, ಅಲ್ಲೋಲ ಕಲ್ಲೋಲ ಆಗಿದ್ಯಾ. ಯಾರಿಗಾದರೂ ನೋವಾಗಿದ್ಯಾ, ದೊಡ್ಡ ನಿಧಿನ ಕಂಡುಹಿಡಿದ ಹಾಗೆ ಆಡ್ತಿರಲ್ಲ. ಕೆಲಸ ಬಿಟ್ರೆ ನನ್ನ ತಾಯಿಗೆ ಯಾವುದು ಇಲ್ಲ. ಅಗೌರವ ಒಂದೇ ಉಳಿದಿರೋದು. ಇಷ್ಟು ವರ್ಷಗಳ ಸರ್ವೀಸ್ ನಲ್ಲಿ ನನ್ನ ತಾಯಿ ಯಾರನ್ನಾದರೂ ಬೈಯ್ದಿದ್ದು ನೋಡಿದ್ರಾ? ಇದರ ಬಗ್ಗೆ ಎಲ್ಲಾ ಮಾತನಾಡಿ, ಬೇಡ ಅಂತ ಅವರಿಗೆ ನಾನು ಅವತ್ತಿಂದ ಹೇಳಿದ್ದೆ. ಅಣ್ವಾವ್ರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತು. ನಮಗೆ ಗೊತ್ತು, ಭಗವಂತನಿಗೆ ಗೊತ್ತು .ಯಾರ್ ಮಾರ್ಯಾದೆ ಕಳೆಯೋಕೆ ಹೊರಟಿದ್ದೀಯಾ ಪ್ರಜ್ಞೆ ಇದಿಯಾ? ಎಂದು ಮದುವೆ ಸೀಕ್ರೆಟ್ ರಿವೀಲ್ ಮಾಡಿದವರ ವಿರುದ್ಧ ವಿನೋದ್ ರಾಜ್ ಕಿಡಿ ಕಾರಿದರು.