Mafia New Poster: ಇಂದು (ಜು.4) ಪ್ರಜ್ವಲ್‌ ದೇವರಾಜ್‌ ಹುಟ್ಟುಹಬ್ಬ. ಈ ಪ್ರಯುಕ್ತ ಅವರು ನಟಿಸಿರುವ ‘ಮಾಫಿಯಾ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ತಂದೆ - ಮಗ ಇಬ್ಬರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

ಇಂದು (ಜು.4) ಪ್ರಜ್ವಲ್‌ ದೇವರಾಜ್‌ ಹುಟ್ಟುಹಬ್ಬ. ಈ ಪ್ರಯುಕ್ತ ಅವರು ನಟಿಸಿರುವ ‘ಮಾಫಿಯಾ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಕುಮಾರ್ ಬಿ. ನಿರ್ಮಿಸಿರುವ, ಲೋಹಿತ್ ಎಚ್ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ದೇವರಾಜ್ ಅವರು ಅಭಿನಯಿಸಿದ್ದು, ತಂದೆ - ಮಗ ಇಬ್ಬರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಆ್ಯಕ್ಷನ್‌ ಹಾಗೂ ಥ್ರಿಲ್ಲರ್‌ ಕಥಾಹಂದರವಿರುವ ಈ ಚಿತ್ರವನ್ನು ಗಣಪತಿ ಹಬ್ಬದ ಸಂದರ್ಭ ರಿಲೀಸ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಮಾಫಿಯಾ' ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಆಕ್ಷನ್ ಪ್ರಧಾನ ಕಥೆಯ ಚಿತ್ರವಾಗಿದೆ. ಅಂಡರ್‌ವರ್ಲ್ಡ್ ಸ್ಟೋರಿಯೂ ಚಿತ್ರದಲ್ಲಿದೆ. ಈ ಹಿಂದೆ 'ಮಮ್ಮಿ' ಮತ್ತು 'ದೇವಕಿ' ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾಗಿರುವ ಲೋಹಿತ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. 'ಇದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನರ್‌.

'ನಾನು ಮತ್ತು ನನ್ನ ಮಗ ಇಬ್ಬರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಇಬ್ಬರು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇವೆ. ಯುವ ತಂಡದ ಜತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ' ಎಂದರು ಹಿರಿಯ ನಟ ದೇವರಾಜ್. ಇಲ್ಲಿ ನನ್ನ ತಂದೆ ಅವರು ನನ್ನ ಹಿರಿಯ ಪೊಲೀಸ್ ಅಧಿಕಾರಿ ಪಾತ್ರ. ಈ ಚಿತ್ರದ ಮೂಲಕ ಹೊಸ 'ಮಾಫಿಯಾ' ಕತೆ ಹೇಳುತ್ತಿದ್ದಾರೆ ನಿರ್ದೇಶಕರು. ತುಂಬಾ ಅಚ್ಚುಕಟ್ಟಾಗಿ ಚಿತ್ರವನ್ನು ರೂಪಿಸುತ್ತಿದ್ದಾರೆ ಎಂದು ಪ್ರಜ್ವಲ್ ದೇವರಾಜ್ ಹೇಳಿಕೊಂಡರು.

ಒಳ್ಳೆಯ ಸೆಟ್ ಹಾಕಿದ್ದಾರೆ

ಸಾಧು ಕೋಕಿಲ (Sadhu Kokila) ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಒಂದು ಒಳ್ಳೆಯ ಸೆಟ್ ಹಾಕಿದ್ದಾರೆ. ಅಪ್ಪನ ಜತೆಗೆ ಕೆಲಸ ಮಾಡುವ ಅವಕಾಶ ಮತ್ತೆ ಸಿಕ್ಕಿದೆ'. 'ಶೂಟಿಂಗ್ ತಯಾರಿ ನೋಡಿದಾಗ ಇವರು ಹೊಸಬರು ಅನಿಸುವುದಿಲ್ಲ. ಎಲ್ಲರು ನುರಿತ ತಂತ್ರಜ್ಞರಂತೆ ಕಾಣುತ್ತಿದ್ದಾರೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ' ಎಂದು ಸಾಧು ಕೋಕಿಲ ತಿಳಿಸಿದ್ದಾರೆ. ಶೈನ್ ಶೆಟ್ಟಿ, ಇನ್ನು ವಿಜಯ್ ಚೆಂಡೂರ್, ವಾಸುಕಿ ವೈಭವ್ ತಾರಾಬಳಗದಲ್ಲಿದ್ದಾರೆ.