ಭಾರತ್ ಜೋಡೋ ಯಾತ್ರೆಯಲ್ಲೂ ಅಪ್ಪು ಫೋಟೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದರು. ಇದೀಗ ಪುನೀತ್ ಪೋಟೋ ಜೊತೆಗೆ ನೇತ್ರ ದಾನಕ್ಕೂ ಪ್ರೇರಣೆ ಆಗಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿದೆ. ಐಕ್ಯತಾ ಯಾತ್ರೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಅವರ ಸಂಕಷ್ಟಗಳನ್ನು ವಿಚಾರಿಸುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಭಾವ ಬೀರಿರುವುದು ವಿಶೇಷ. ಇತ್ತೀಚಿಗಷ್ಟೆ ರಾಹುಲ್ ಗಾಂಧಿ ಕೈಯಲ್ಲಿ ಅಪ್ಪು ಫೋಟೋ ರಾರಾಜಿಸಿತ್ತು. ಭಾರತ್ ಜೋಡೋ ಯಾತ್ರೆಯಲ್ಲೂ ಅಪ್ಪು ಫೋಟೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದರು. ಇದೀಗ ಪುನೀತ್ ಪೋಟೋ ಜೊತೆಗೆ ನೇತ್ರ ದಾನಕ್ಕೂ ಪ್ರೇರಣೆ ಆಗಿದೆ.
ಅಪ್ಪು ನಿಧನ ಹೊಂದಿ ವರ್ಷ ಆಗುತ್ತಾ ಬಂತು. ಆದರೂ ಅಭಿಮಾನಿಗಳ ಮನದಲ್ಲಿ ಅಪ್ಪು ನೆನಪು ಇನ್ನು ಹಸಿರಾಗೆ ಇದೆ. ಪುನೀತ್ ದೇವರಾಗಿದ್ದಾರೆ. ಅಭಿಮಾನಿಗಳು ಅಪ್ಪು ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ಎಲ್ಲಾ ಸಮಾರಂಭಗಳಲ್ಲೂ ಅಪ್ಪು ಸ್ಮರಣೆ ಮಾಡಲಾಗುತ್ತಿದೆ. ಇದೀಗ ಭಾರತ್ ಜೋಡೋ ಯಾತ್ರೆಯಲ್ಲೂ ಅಪ್ಪುಗೆ ವಿಶೇಷ ನಮನ ಸಲ್ಲಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ಉತ್ತೇಜನದಿಂದ ಅನೇಕರು ಅಂಗಾಗ ದಾನಕ್ಕೆ ಮುಂದಾಗಿದ್ದಾರೆ. ಯಾತ್ರೆಯ 33 ಮಂದು ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಯಾತ್ರಿಗಳು ನೇತ್ರದಾನ ಮಾಡಿ ಎನ್ನುವ ಪುನೀತ್ ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದರು. ಇನ್ನು ಅಂಗಾಗ ದಾನ ಮಾಡಿದ ಮೂವರು ಕುಟುಂಬಸ್ಥರೊಂದಿಗೆ ರಾಹುಲ್ ಗಾಂಧಿ ಯಾತ್ರೆಯಲ್ಲಿ ಹೆಜ್ಜೆ ಹಾಕಿರುವುದು ವಿಶೇಷವಾಗಿತ್ತು.
ಈ ಮೂಲಕ ಮತ್ತಷ್ಟು ಜನರಿಗೆ ನೇತ್ರ ದಾನ ಮತ್ತು ಅಂಗಾಗ ದಾನಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಹಲವು ಮಂದಿ ಸ್ವಯಂ ಪ್ರೇರಣೆಯಿಂದ ವಾಗ್ದಾನ ಮಾಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ಪುನೀತ್ ಜೀವನ ಶೈಲಿ, ಸರಳತೆಯನ್ನು ಅವರ ಜೀವನದಲ್ಲಿಯೂ ಅಳವಡಿಸಿಕೊಳ್ಳುತ್ತಿರುವುದು ವಿಶೇಷ.
ರಾಹುಲ್ ಗಾಂಧಿ ಕೈಯಲ್ಲಿ ಅಪ್ಪು ಫೋಟೋ; 'ಭಾರತ್ ಜೋಡೋ ಯಾತ್ರೆ'ಯಲ್ಲಿ ಪುನೀತ್‌ಗೆ ನಮನ
ಗಂಧದ ಗುಡಿ ಬಗ್ಗೆ
ಇನ್ನು ಪುನೀತ್ ರಾಜ್ ಕುಮಾರ್ ನಟನೆಯ ಸಾಕ್ಷ್ಯಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಪ್ಪು ನಿಧನ ಬಳಿಕ ತೆರೆಗೆ ಬರುತ್ತಿರುವ ಗಂಧದ ಗುಡಿ ಸಾಕ್ಷ್ಯಚಿತ್ರ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಬಹುನಿರೀಕ್ಷೆಯ ಸಾಕ್ಷ್ಯಚಿತ್ರ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಇತ್ತಚೀಗಷ್ಟೆ ಗಂಧದ ಗುಡಿ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳು ಅಪ್ಪು ನೀಡಿ ಖುಷಿಯ ಜೊತೆಗೆ ಭಾವುಕರಾಗಿದ್ದರು. ಇದೀಗ ಸಾಕ್ಷ್ಯಚಿತ್ರವನ್ನು ನೋಡಲು ಕಾಯುತ್ತಿದ್ದಾರೆ.
ಭಾರತ್ ಜೋಡೋ ಯಾತ್ರೆಲಿ ರಾಹುಲ್ ಫುಶ್ಅಪ್ಸ್: ಸಾಧ್ಯ ಇಲ್ಲ ಅಂತ ಕೈ ಚೆಲ್ಲಿದ DKS: ವಿಡಿಯೋ ವೈರಲ್
ಭಾರತ್ ಜೋಡೋ ಯಾತ್ರೆ ಬಗ್ಗೆ
ಕಾಂಗ್ರೆಸ್‌ನ ಈ ರಾಷ್ಟ್ರಮಟ್ಟದ ಭಾರತ್ ಜೋಡೋ ಯಾತ್ರೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಸೆಪ್ಟೆಂಬರ್ 7ರಂದು ಆರಂಭದವಾದ ಯಾತ್ರೆ ಸೆಪ್ಟೆಂಬರ್ 30 ರಂದು ಕರ್ನಾಟಕ ತಲುಪಿತು. ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ 12 ರಾಜ್ಯಗಳ ಪ್ರಯಾಣ ಬೆಳೆಸಲಿದ್ದಾರೆ. 3,570 ಕಿಲೋ ಮೀಟರ್‌ಗಳನ್ನು ಕ್ರಮಿಸಲಿದ್ದಾರೆ. ಮೂರು ದಕ್ಷಿಣ ರಾಜ್ಯಗಳನ್ನು ಕ್ರಮಿಸಿದ ನಂತರ ರಾಹುಲ್ ಪಾದಯಾತ್ರೆ ಉತ್ತರದ ರಾಜ್ಯಗಳನ್ನು ಪ್ರವೇಶಿಸಲಿದೆ.
