ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಲವು ವೈರಲ್ ಫೋಟೋ ವಿಡಿಯೋಗಳಿಗೆ ಸಾಕ್ಷಿಯಾಗುತ್ತಿದೆ. ಅದೇ ರೀತಿ ಈಗ ರಾಹುಲ್ ಪಾದಯಾತ್ರೆ ಮಧ್ಯೆ ರಸ್ತೆಯಲ್ಲಿಯೇ ಪುಶ್ ಅಫ್ ಮಾಡುತ್ತಿರುವ ಫೋಟೋ ವಿಡಿಯೋಗಳು ವೈರಲ್ ಆಗಿವೆ.

ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಲವು ವೈರಲ್ ಫೋಟೋ ವಿಡಿಯೋಗಳಿಗೆ ಸಾಕ್ಷಿಯಾಗುತ್ತಿದೆ. ಅದೇ ರೀತಿ ಈಗ ರಾಹುಲ್ ಪಾದಯಾತ್ರೆ ಮಧ್ಯೆ ರಸ್ತೆಯಲ್ಲಿಯೇ ಪುಶ್ ಅಫ್ ಮಾಡುತ್ತಿರುವ ಫೋಟೋ ವಿಡಿಯೋಗಳು ವೈರಲ್ ಆಗಿವೆ. ರಾಹುಲ್ ಗಾಂಧಿಯವರು ಈ ಭಾರತ್ ಜೋಡೋ ಯಾತ್ರೆಯಲ್ಲಿ 12 ರಾಜ್ಯಗಳ ಮೂಲಕ 3,570 ಕಿ.ಮೀ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿ ದೆಹಲಿ ತಲುಪಲಿದ್ದಾರೆ.

ಇನ್ನು ರಾಹುಲ್ ಫುಶ್ ಅಪ್ ಮಾಡುತ್ತಿರುವವ ಫೋಟೋಗಳನ್ನು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿ ವೇಣುಗೋಪಾಲ್, ಹಾಗೂ ಪುಟ್ಟ ಬಾಲಕನೋರ್ವ ಪುಶ್ ಅಪ್ ಮಾಡಲು ರಾಹುಲ್ ಜೊತೆ ಪ್ರಯತ್ನಿಸುತ್ತಾರೆ. ಆದರೆ ರಾಹುಲ್ ಮತ್ತು ಬಾಲಕ ಮಾತ್ರ ಮೂರು ನಾಲ್ಕು ಪುಶ್‌ಅಪ್‌ಗಳನ್ನು (push-up) ಸರಿಯಾಗಿ ಮಾಡುತ್ತಾರೆ. ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಮಾತ್ರ ಒಮ್ಮೆ ಪುಶ್‌ ಅಪ್ ಮಾಡಲು ಯತ್ನಿಸಿ ನನ್ನಿಂದ ಇದು ಸಾಧ್ಯ ಇಲ್ಲಪ್ಪ ಎಂಬಂತೆ ಮೇಲೆಳುತ್ತಾರೆ. ನಿನ್ನೆ ಪೋಸ್ಟ್ ಆದ ಈ ವಿಡಿಯೋವನ್ನು 21 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

Scroll to load tweet…

ಇನ್ನು ಕಾಂಗ್ರೆಸ್ ಮುಖಂಡ ಸುರ್ಜೇವಾಲ ಅವರು ಈ ಫೋಟೋ ಶೇರ್ ಮಾಡಿ ಒಂದು ಫುಲ್‌ ಹಾಗೂ ಇನ್ನೊಂದು ಅರ್ಧ ಪುಶ್ ಅಪ್ ಅಂತ ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ರಾಹುಲ್ ಗಾಂಧಿ ರಾಜ್ಯದ ಕಾಂಗ್ರೆಸ್ ನಾಯಕ 75 ವರ್ಷದ ಸಿದ್ದರಾಮಯ್ಯ (Siddaramaiah) ಅವರ ಕೈ ಹಿಡಿದುಕೊಂಡು ಓಡುತ್ತಿರುವ ವಿಡಿಯೋವೋಂದು ವೈರಲ್ ಅಗಿತ್ತು. ಅದಕ್ಕೂ ಮೊದಲು ಡಿ.ಕೆ. ಶಿವಕುಮಾರ್ (DK Shivakumar) ಜೊತೆ ಪಕ್ಷದ ಧ್ವಜ ಹಿಡಿದುಕೊಂಡು ಓಡುತ್ತಿರುವ ಫೋಟೋ ವೈರಲ್ ಆಗಿತ್ತು. 

Scroll to load tweet…

ಇದಕ್ಕೂ ಮೊದಲು ತಾಯಿ ಮಗನ ಸಂಬಂಧದ ಭಾವುಕ ಫೋಟೋವೊಂದು ವೈರಲ್ ಆಗಿತ್ತು. ಭಾರತ್ ಜೋಡೋ ಯಾತ್ರೆಗೆ ಬಲ ತುಂಬಲು ಕರ್ನಾಟಕಕ್ಕೆ ಬಂದು ರಾಜ್ಯದಲ್ಲಿ ಕೆಲ ಕಾಲ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ತನ್ನ ತಾಯಿಯೂ ಆಗಿರುವ ಸೋನಿಯಾ ಗಾಂಧಿಯವರ (Sonia Gandhi)ಶೂ ಲೇಸ್‌ನ್ನು ಯಾತ್ರೆಗೂ ಮೊದಲು ರಾಹುಲ್ ಕಟ್ಟಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಾಕಷ್ಟು ವೈರಲ್ ಆಗಿತ್ತು. ಇದನ್ನು ಕಾಂಗ್ರೆಸ್ ಮಾ ಎಂದು ಕ್ಯಾಪ್ಷನ್ ನೀಡಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿತ್ತು.

ಇದು ಸೋನಿಯಾ ಗಾಂಧಿ ಕೋವಿಡ್‌ಗೆ ತುತ್ತಾದ ಗುಣಮುಖರಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಮೊದಲ ಕಾರ್ಯಕ್ರಮವಾಗಿತ್ತು. ಇದಕ್ಕೂ ಮೊದಲು ಅವರು ಕೊನೆಯದಾಗಿ 2016ರಲ್ಲಿ ವಾರಣಾಸಿಯಲ್ಲಿ ರೋಡ್‌ಶೋ ಒಂದರಲ್ಲಿ ಭಾಗವಹಿಸಿದ್ದರು. ಹಾಗೆಯೇ ಮಳೆ ಸುರಿಯುತ್ತಿದ್ದರೂ, ಮಳೆಯಲ್ಲಿ ನೆನೆಯುತ್ತಲೇ ರಾಹುಲ್ ಗಾಂಧಿ ನಿರಂತರ ಭಾಷಣ ಮಾಡಿದ್ದು, ಅದರ ಜೊತೆಗೆ ಕಾರ್ಯಕ್ರಮದಲ್ಲಿದ್ದ ಜನರು ಕೂಡ ಕುಳಿತುಕೊಳ್ಳಲು ಇಟ್ಟ ಚೇರ್‌ಗಳನ್ನೇ ಮಳೆಗೆ ಕೊಡೆಯಂತೆ ನಿಲ್ಲಿಸಿಕೊಂಡು ಭಾಷಣ ಕೇಳಿದ ವಿಡಿಯೋ ಫೋಟೋಗಳು ವೈರಲ್ ಆಗಿದ್ದವು.

ರಾಹುಲ್ ಗಾಂಧಿ ಕೈಯಲ್ಲಿ ಅಪ್ಪು ಫೋಟೋ; 'ಭಾರತ್ ಜೋಡೋ ಯಾತ್ರೆ'ಯಲ್ಲಿ ಪುನೀತ್‌ಗೆ ನಮನ

ಕಾಂಗ್ರೆಸ್‌ನ ಈ ರಾಷ್ಟ್ರಮಟ್ಟದ ಭಾರತ್ ಜೋಡೋ ಯಾತ್ರೆಯು ತಮಿಳುನಾಡಿನ (Tamil Nadu) ಕನ್ಯಾಕುಮಾರಿಯಲ್ಲಿ (Kanyakumari) ಸೆಪ್ಟೆಂಬರ್ ಏಳರಂದು ಆರಂಭವಾಗಿದ್ದು, ಸೆಪ್ಟೆಂಬರ್ 30 ರಂದು ರಾಜ್ಯ ತಲುಪಿತ್ತು. ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi) 12 ರಾಜ್ಯಗಳಲ್ಲಿ ಪ್ರಯಾಣ ಬೆಳೆಸಲಿದ್ದು, 3,570 ಕಿಲೋ ಮೀಟರ್‌ಗಳನ್ನು ಕ್ರಮಿಸಲಿದ್ದಾರೆ. ಮೂರು ದಕ್ಷಿಣ ರಾಜ್ಯಗಳನ್ನು (southern states) ಕ್ರಮಿಸಿದ ನಂತರ ರಾಹುಲ್ ಪಾದಯಾತ್ರೆ ಉತ್ತರದ ರಾಜ್ಯಗಳನ್ನು ಪ್ರವೇಶಿಸಲಿದೆ.

ನಾನು Pay Cm ಟೀ ಶರ್ಟ್ ಧರಿಸುವೆ, ಬಿಜೆಪಿ ಏನು ಮಾಡುತ್ತೆ ನೋಡ್ತಿನಿ: ಸರ್ಕಾರಕ್ಕೆ ಡಿಕೆಶಿ ಸವಾಲ್