ಸಾಕಷ್ಟು ಕುತೂಹಲ ಮೂಡಿಸಿದ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಯಾಗುತ್ತಿದ್ದು,ಟೀಸರ್ ನೋಡಿದವರು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಮಂಕಿ ಸೀನನ ಪಾತ್ರದಲ್ಲಿ ಧನಂಜಯ್ ಹೇಗೆ ನಟಿಸಿದ್ದಾರೆಂಬ ಹಲವರ ಪ್ರಶ್ನೆ ಆಗಿರುತ್ತದೆ. ಅದಕ್ಕೆ ತಕ್ಕಂತೆ ಚಿತ್ರದಲ್ಲಿ ಮಂಕಿ ಸೀನನ ಪಾತ್ರದಲ್ಲಿ ಡಾಲಿ ಸಿಕ್ಕಾಪಟ್ಟೆ ಮಿಂಚಿದ್ದಾರೆ ಎಂಬುದು ಚಿತ್ರತಂಡ ಹೇಳಿಕೊಳ್ಳುತ್ತಿದೆ.

'ಪಾಪ್‌ಕಾರ್ನ್‌ ಮಂಕಿ ಟೈಗರ್' ಮಾದೇವ ಹಾಡು ಸಿಕ್ಕಾಪಟ್ಟೆ ವೈರಲ್‌! ಕೇಳಿದ್ದೀರಾ?

ಆ ಮೂಲಕ ಮಹಾಶಿವರಾತ್ರಿ ಹಬ್ಬದಂದೇ ಮಂಕಿ ಸೀನ ತೆರೆ ಮೇಲೆ ಬರುತ್ತಿದ್ದಾರೆ. ನಿವೇದಿತಾ, ಅಮೃತಾ ಅಯ್ಯರ್, ಸಪ್ತಮಿ, ಕಾಕ್ರೋಚ್ ಸುಧಿ, ಪೂರ್ಣಚಂದ್ರ ತೇಜಸ್ವಿ, ಮೌನೀಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಮಾದೇವನ ಹಾಡು ತುಂಬಾ ವೈರಲ್ ಆಗಿದೆ. ‘ಟಗರು’ ಚಿತ್ರದ ಮೂಲಕ ಬ್ಲಾಕ್ ಬಾಸ್ಟರ್ ಹಿಟ್ ಕೊಟ್ಟ ಕಾಂಬಿನೇಷನ್ ಸಿನಿಮಾ ಎನ್ನುವ ಕಾರಣಕ್ಕೂ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚರಣ್ ರಾಜ್ ಸಂಗೀತ, ಶೇಖರ್ ಛಾಯಾಗ್ರಹಣ ಮಾಡಿರುವ ಈ ಚಿತ್ರವನ್ನು ಸುರ್ಧೀ ಕೆ.ಎಂ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ವಿಶೇಷ ಅಂದರೆ ಮೋಹನ್ ಹಾಗೂ ಫುಷ್ಕರ್ ಫಿಲಮ್ಸ್ ಜಂಟಿಯಾಗಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.