ಕನ್ನಡ ಕೈಬರಹದಲ್ಲಿ ಪೂಜಾ ಗಾಂಧಿ ಮದುವೆಯ ಕರೆಯೋಲೆ: ನಟಿಯಿಂದ ಹೀಗೊಂದು ವಿಶೇಷ ಮನವಿ!

ನಟಿ ಪೂಜಾ ಗಾಂಧಿ  ನ. 29ರಂದು ದಾಂಪತ್ಯ ಜೀವನಕ್ಕೆ  ಕಾಲಿರಿಸಲಿದ್ದು, ಈ ಸಂದರ್ಭದಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಅವರು ಹೇಳಿರೋದೇನು? 
 

Pooja Gandhi getting married on Nov 29 and  made special request suc

 ಸ್ಯಾಂಡಲ್‌ವುಡ್‌ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದ ನಟಿ ಪೂಜಾ ಗಾಂಧಿ (Pooja Gandhi) ಅವರಿಗೆ ನಾಳೆ ಅಂದರೆ ನವೆಂಬರ್​ 29ರಂದು  ಮದುವೆಯ ಸಂಭ್ರಮ.  ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿ ಮೂಲಕ ಪೂಜಾ ಗಾಂಧಿಯವರ ಮದುವೆ ನಡೆಯಲಿದೆ.  ಆತ್ಮೀಯ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸರಳ ಆಮಂತ್ರಣ ಪತ್ರಿಕೆ ಎಲ್ಲೆಡೆ ವೈರಲ್ ಆಗುತ್ತಿದೆ. ಕನ್ನಡ ಪ್ರೇಮ ಮೆರೆಯುತ್ತಿರುವ ನಟಿ ಪೂಜಾ ಗಾಂಧಿ ಕನ್ನಡದಲ್ಲಿಯೇ ಕೈಬರಹದಲ್ಲಿ ಬರೆದಿರುವ ಪತ್ರ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ. ಅದರಲ್ಲಿ ಅವರು ವಿಶೇಷ ಮನವಿಯೊಂದನ್ನು ಮಾಧ್ಯಮದವರ ಬಳಿ ಮಾಡಿಕೊಂಡಿದ್ದಾರೆ. ಪೂಜಾ ಗಾಂಧಿಯವರೇ ಕನ್ನಡದಲ್ಲಿ ಬರೆದಿರುವಂತೆ, ಪ್ರೀತಿಯ ಮಾಧ್ಯಮ ಮಿತ್ರರಿಗೆ, ಆತ್ಮೀಯರೆ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಲು. ನನ್ನ ಚಿತ್ರ ಜೀವನದ ಎಲ್ಲ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಯಾಗಿದ್ದೀರಿ. ನವೆಂಬರ್​ 29ರಂದು ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್​ ಘೋರ್ಪಡೆಯವರೊಂದುಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ, ಆಶೀರ್ವದಿಸಿ ಎಂದಿದ್ದಾರೆ.

ಇದೇ ಮದುವೆಯ ಕರೆಯೋಲೆಯಲ್ಲಿ ಅವರು ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಅದೇನೆಂದರೆ, ತಮ್ಮಲ್ಲಿ ನನ್ನ ಸವಿನಯ ಮನವಿ, ಮದುವೆಯ ಸಮಯದಲ್ಲಿ ಯಾವುದೇ ಕ್ಯಾಮೆರಾಗಳಿಗೆ ಅವಕಾಶವಿರುವುದಿಲ್ಲ. ಅನ್ಯಥಾ ಭಾವಿಸಬೇಡಿ. ನಾವೇ ನಿಮಗೆ ಸಾಧ್ಯವಾದಷ್ಟು ಫೊಟೋಗಳನ್ನು ಮತ್ತು ದೃಶ್ಯಗಳನ್ನು ತಲುಪಿಸುತ್ತೇವೆ. ಎಂದಿದ್ದಾರೆ. ಅಂದಹಾಗೆ ಇವರ ಕೈಹಿಡಿಯುವ ವರ   ವಿಜಯ್​ ಘೋರ್ಪಡೆ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪೆನಿಯ ಮಾಲೀಕರಾಗಿದ್ದಾರೆ.  

ಕನ್ನಡ ಪ್ರೇಮ ಮೆರೆದ ನಟಿ ಪೂಜಾ ಗಾಂಧಿ: ವಿಡಿಯೋ ನೋಡಿಯಾದ್ರೂ ಬುದ್ಧಿ ಕಲೀರಿ ಅಂತಿದ್ದಾರೆ ಅಭಿಮಾನಿಗಳು

ಮುಂಗಾರು ಮಳೆಯ ಬಳಿಕ ಮಿಂಚಿದ್ದ ಪೂಜಾ ಗಾಂಧಿ  ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಜನಾ ಗಾಂಧಿ ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ಮುಂಗಾರು ಮಳೆ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿರು. ಮುಂಗಾರು ಮಳೆಯ ಯಶಸ್ಸಿನ ಬಳಿಕ  ಕನ್ನಡದ ಟಾಪ್​ ನಟಿ (Kannada Top Actress) ಎಂದೇ ಖ್ಯಾತಿ ಪಡೆದ ಪೂಜಾ,  ಇದ್ದಕ್ಕಿದ್ದಂತೆಯೇ ಬಣ್ಣದ ಲೋಕದಿಂದ  ಕಣ್ಮರೆಯಾಗಿದ್ದಾರೆ.   ಪೀಕ್​ನಲ್ಲಿದ್ದಾಗಲೇ ಪೂಜಾ ಚಿತ್ರರಂಗದಿಂದ ಹಿಂದೆ ಸರಿದಿದ್ದಾರೆ. ನಟಿ ನೋಡೋಕೆ ಚೆನ್ನಾಗಿಲ್ಲ. ಕುಳ್ಳಕ್ಕೆ ಇದ್ದಾರೆ. ಗಂಡಸರ ಹಾಗೇ ಕಾಣಿಸುತ್ತಾರೆ ಎಂದೆಲ್ಲಾ ಟೀಕೆಗಳನ್ನು ಎದುರಿಸುತ್ತಲೇ ಹಲವು ಭಾಷೆಗಳಲ್ಲಿ ನಟಿಸಿದ್ದ ನಟಿ ಎಲ್ಲರಿಗೂ ಹೆಚ್ಚು ಆಪ್ತವಾದದ್ದು ಅವರು ಕನ್ನಡ ಕಲಿತದ್ದರಿಂದ. 

ಇದೇ ನವೆಂಬರ್​ 1ರ ಕನ್ನಡ ರಾಜ್ಯೋತ್ಸವದ ದಿನ ಮತ್ತೆ ಕನ್ನಡಾಭಿಮಾನ ಮರೆದಿದ್ದರು. ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ ಎಂದು ಕನ್ನಡದಲ್ಲಿ ಬರೆದು ಅದರ ರಂಗೋಲಿಯನ್ನು ಹಾಕಿ ಕನ್ನಡಾಭಿಮಾನ ಮೆರೆದಿದ್ದರು. ಮಾತ್ರವಲ್ಲದೇ ಅದರ ವಿಡಿಯೋ ಮಾಡಿ ಶೇರ್​ ಮಾಡಿದ್ದರು. ಇದು ಕನ್ನಡಿಗರಿಗೆ ತುಂಬಾ ಸಂತೋಷ ಉಂಟು ಮಾಡಿದೆ. ನಟಿಯ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇವರಿಗಿರೋ ಕನ್ನಡಾಭಿಮಾನ, ಇಲ್ಲೇ ಹುಟ್ಟಿ,ಇಲ್ಲೇ ತಿಂದು, ಇಲ್ಲೇ ಸಂಪಾದನೆ ಮಾಡಿದವರಿಗೂ ಇಲ್ಲ ಎಂದು ನೆಟ್ಟಿಗರು ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈಕೆಯ ವಿಡಿಯೋ ನೋಡಿಯಾದ್ರೂ ಕನ್ನಡ ನಾಡಿನಲ್ಲಿ ಹುಟ್ಟಿದವರು ಬುದ್ಧಿ ಕಲಿಯಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ನ.29ಕ್ಕೆ ನಟಿ ಪೂಜಾ ಗಾಂಧಿ ವಿವಾಹ, ಮುಂಗಾರು ಮಳೆ ಹುಡುಗಿಯ ವರನ್ಯಾರು?
 

Latest Videos
Follow Us:
Download App:
  • android
  • ios