ಸುಮಾರು ಮೂರು ವರ್ಷಗಳ ನಂತರ ತೆರೆ ಕಂಡಿರುವ ಧ್ರುವ ಸರ್ಜಾ ಬಿಗ್ ಬಜೆಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡುತ್ತಿದೆ. ರಿಲೀಸ್ ಆದ ಎರಡೇ ದಿನಗಳಲ್ಲಿ ಸುಮಾರು 35-50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಚಿತ್ರದ ಬಗ್ಗೆ ಒಂದು ಆರೋಪ ಕೇಳಿ ಬರುತ್ತಿದೆ. ಅದುವೇ ಬ್ರಾಹ್ಮಣರನ್ನು ಚಿತ್ರದಲ್ಲಿ ತಪ್ಪಾಗಿ ತೋರಿಸಿರುವುದು.

"

‘ಪೊಗರು’ ಚಿತ್ರದ ವಿರುದ್ಧ ಎದುರಾಯ್ತು ಗಂಭೀರ ಆರೋಪ 

ಪೊಗರು ಕೊಂಚ ಮಾಸ್‌ ಚಿತ್ರ, ಪಾತ್ರಕ್ಕೆ ಬೇಕಾದಂತೆ ನಟ ಹೊರಟಿರುತ್ತಾನೆ. ಅರ್ಚಕರು, ಪುರೋಹಿತರ ಬಗ್ಗೆ ಹಾಗೂ ಜಾತಿ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚಿದಾನಂದ ಮೂರ್ತಿ ಆರೋಪ ಮಾಡಿದ್ದಾರೆ. 'ಆಕ್ಷೇಪಾರ್ಹ ಮಾತುಗಳನ್ನು ತೆಗೆಯದೇ ಹೋದರೆ ಮಂಗಳವಾರ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುತ್ತೇವೆ. ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ,' ಎಂದೂ ಎಚ್ಚರಿಸಿದ್ದರು. 

ಚಿತ್ರ ವಿಮರ್ಶೆ: ಪೊಗರು 

ಈ ಬೆನ್ನಲ್ಲೇ ನಿರ್ದೇಶಕ ನಂದಕಿಶೋರ್ ಮಾತನಾಡಿದ್ದಾರೆ. 'ಸಚಿದಾನಂದ ಮೂರ್ತಿ ಅವರಿಗೆ ನಮಸ್ಕಾರ. ನಾನು ನಂದಕಿಶೋರ್. ನಿಮ್ಮ ಭಾವನೆಗಳಿಗೆ ದಕ್ಕೆಯಾಗಿರುವ ವಿಚಾರದ ಬಗ್ಗೆ ತಿಳಿದು ಬಂತು. ಸತತವಾಗಿ ಮೂರು ಮೂರುವರೆ ವರ್ಷದಿಂದ ಕಷ್ಟ ಪಟ್ಟು ಸಿನಿಮಾ ತೆಗೆದು ಅದರ ಹಿಂದೆ ಇರುವ ಪರಿಶ್ರಮ. ಕಷ್ಟ ಎಲ್ಲವೂ ನನಗೆ ಗೊತ್ತಿರುತ್ತದೆ. ಬೇಕಂತ ಒಬ್ಬರಿಗೆಗೆ ಅಥವಾ ಒಂದು ಜನಾಂಗಕ್ಕೆ ಅವಮಾನ ಮಾಡುವಂತ ಯಾವುದೇ ಉದ್ದೇಶದಿಂದ ಇದನ್ನು ಮಾಡಿಲ್ಲ. ಇದೊಂದು ಕಾಲ್ಪನಿಕ ಕತೆ. ತಿಳಿದೋ, ತಿಳಿಯದೋ ನಮ್ಮ ಕಡೆಯಿಂದ ತಪ್ಪಾಗಿದ್ರೆ  I am very sorry for that. ಒಂದು ಕನ್ನಡ ಚಿತ್ರ ಕೋವಿಡ್‌ ಆದ್ಮೇಲೆ ತುಂಬಾನೇ ಕಷ್ಟ ಪಟ್ಟು ರಿಲೀಸ್ ಮಾಡ್ತಿದ್ದೀವಿ. ದಯವಿಟ್ಟು ಕನ್ನಡಿಗರಾಗಿ ಕಲಾಭಿಮಾನಿಗಳಾಗಿ ಚಿತ್ರಕ್ಕೆ ಪ್ರೋತ್ಸಾಹ ನೀಡಿ ಎಂದು ಕೇಳಿಕೊಳ್ಳುವೆ. ಇದರಿಂದ ಯಾವ ದುರುದ್ದೇಶ ಅಥವಾ ನಿಮಗೆ ಧಕ್ಕೆ ತರುವಂತದ್ದು ಯಾವ ಉದೇಶವೂ ಇಲ್ಲ. ಕಾಲ್ಪನಿಕ ಕತೆ  ಆಗಿರುವುದರಿಂದ ನಾವು ಸಿನಿಮಾ ಆರಂಭದಲ್ಲಿಯೇ ಹಾಕಿದ್ದೀವಿ. ದಯವಿಟ್ಟು ಇದೆಲ್ಲಾ ಇಲ್ಲಿಗೆ ನಿಲ್ಲಿಸಿ,' ಎಂದು ನಂದಕಿಶೋರ್ ಆಗ್ರಹಿಸಿದ್ದಾರೆ.