Sandalwood
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿಮಾ ಹೊರತು ಪಡಿಸಿ ಎಲ್ಲೇ ಕಾಣಿಸಿಕೊಂಡರೂ ಸೀರೆ ಅಥವಾ ಸೆಲ್ವಾರ್ ಧರಿಸಿರುತ್ತಾರೆ. ಹೀಗಾಗಿ ಬೇರೆ ಡ್ರೆಸ್ ಡಿಸೈನ್ ಮಾಡಿ ಎಂದು ನೆಟ್ಟಿಗರು ಡಿಸೈನರ್‌ನ ಕೇಳಿದ್ದಾರೆ.
Rachita ram'ಯಾಕೆ ರಚಿತಾ ರಾಮ್‌ಗೆ ಸದಾ ಸೀರೆ ಅಥವಾ ಸೆಲ್ವಾರ್‌ಗಳನ್ನು ಕೊಡುತ್ತೀನಿ ಎಂದು ಅವರ ಅಭಿಮಾನಿಗಳು ಮತ್ತು ಆಪ್ತರು ನನ್ನನ್ನು ಕೇಳುತ್ತಾರೆ. ಅದು ರಚಿತಾ ರಾಮ್ ಅವರ ವ್ಯಕ್ತಿತ್ವ ಎಂದಿದ್ದಾರೆ ಡಿಸೈನರ್.
ಕ್ಯಾರೆಕ್ಟರ್‌ನಿಂದ ಹೊರಗೆ ಇರುವಾಗ ಅವರಾಗಿ ಗುರುತಿಸಿಕೊಳ್ಳಲು ಅವರಾಗಿ ಇರಲು ಇಷ್ಟ ಪಡುತ್ತಾರೆ ಎಂದು ಡಿಸೈನರ್ ವರ್ಷಿಣಿ ಜಾನಕಿರಾಮ್ ಖಾಸಗಿ ಟಿವಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ವೆಸ್ಟರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡೋಣ ಬನ್ನಿ ಎಂದು ಹಲವು ಸಲ ನಾನೇ ಕೇಳಿದ್ದೀನಿ. ಆದರೆ ಇಲ್ಲಿ ಗಮನಿಸಬೇಕಾದದ್ದು ಏನೆಂದರೆ ರಚಿತಾ ರಾಮ್ ಸೀರೆ ಧರಿಸುವ ರೀತಿ ಅದನ್ನು ಕ್ಯಾರಿ ಮಾಡುವ ರೀತಿ ತುಂಬಾ ಚೆನ್ನಾಗಿದೆ.
ಸಿನಿಮಾಗೆ ಅಗತ್ಯಕ್ಕೆ ತಕ್ಕಂತೆ ರೆಡಿಯಾಗುತ್ತಾರೆ ಉಳಿದ ಸಮಯದಲ್ಲಿ ಅವರಗೆ ಖುಷಿ ಕೊಡುವ ವಸ್ತ್ರವನ್ನು ಧರಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ.
ಯಾವ ರೀತಿ ಬಟ್ಟೆಯ ಮಟೀರಿಯಲ್‌ಗಳು ಚೆನ್ನಾಗಿ ಇರುತ್ತದೆ ಯಾವ ಸೂಕ್ತವಾದದ್ದು ಎಂದು ರಚಿತಾ ಚೆನ್ನಾಗಿ ತಿಳಿದುಕೊಂಡಿದ್ದಾರೆ.
ಕಪ್ಪು, ಕೆಂಪು ಮತ್ತು ಆಫ್ ವೈಟ್ ಬಣ್ಣದ ಡ್ರೆಸ್‌ಗಳಲ್ಲಿ ರಚಿತಾ ರಾಮ್ ಸಖತ್ ಆಗಿ ಕಾಣಿಸುತ್ತಾರೆ ಎಂದಿದ್ದಾರೆ ಡಿಸೈನರ್. ಸುಮಾರು ನಾಲ್ಕು ವರ್ಷಗಳಿಂದ ಡಿಂಪಲ್ ಕ್ವೀನ್ ಜೊತೆ ಕೆಲಸ ಮಾಡುತ್ತಿದ್ದಾರೆ ವರ್ಷಿಣಿ.
ಈಗಾಗಲೆ ಸಾಕ್ಷಷ್ಟು ರಿಯಾಲಿಟಿ ಶೋಗಳಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಆಗಲೂ ಸೀರೆನೇ ಬೇಕು ಎಂದಿ ಡಿಮ್ಯಾಂಡ್ ಮಾಡಿದ್ದರಂತೆ. ಇದಕ್ಕೆ ಕಾರಣ ಆ ಕಾರ್ಯಕ್ರಮವನ್ನು ಫ್ಯಾಮಿಲಿ ಮತ್ತು ಮಕ್ಕಳು ನೋಡುತ್ತಾರೆಂದು.
ರಚಿತಾ ರಾಮ್ ನಮ್ಮನೆ ಹುಡುಗಿ ಎಂದು ನೋಡುವ ಅಭಿಮಾನಿಗಳು ತುಂಬಾ ಜನ ಇದ್ದಾರೆ. ಹೀಗಾಗಿ ಸೀರೆ ಅಥವಾ ಸೆಲ್ವಾರ್‌ನಲ್ಲಿ ಕಾಣಿಸಿಕೊಂಡರೆ ನಮಗೆ ಇಷ್ಟ ಎಂದು ಕಾಮೆಂಟ್ ಮಾಡುತ್ತಾರೆ.