ಅಜ್ಜಿ ಆಸ್ತಿಯಲ್ಲಿ ನನಗೂ ಪಾಲಿದೆ ಎಂದ ನವೀನ್. ತಪ್ಪು ಪ್ರತಿಯೊಬ್ಬರೂ ಮಾಡುತ್ತಾರೆ ಎಂದ ಹೇಳಿಕೆ ವೈರಲ್....  

ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿದ ನಿರ್ದೇಶಕ ಹಾಗೂ ನಟ ನರೇಶ್ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ಬಗ್ಗೆ ನವೀನ್ ಮಾತನಾಡಿದ್ದಾರೆ. ನರೇಶ್ ಮೊದಲನೇ ಪತ್ನಿ ಮಗನಾಗಿರುವ ನವೀನ್ ಅಜ್ಜಿ ಆಸ್ತಿಯಲ್ಲಿ ನನಗೂ ಪಾಲಿದೆ ಆದರೆ ನೋಡಿಕೊಳ್ಳಲು ಆಗಲ್ಲ ಎಂದು ತಂದೆ ಮ್ಯಾನೇಜ್ ಮಾಡುತ್ತಿದ್ದಾರೆ ಎಂದಿದ್ದಾರೆ. 

ನರೇಶ್ ತಾಯಿ ಯಾರು? 

ತೆಲುಗು ಚಿತ್ರರಂಗದ ಲೆಜೆಂಡರಿ ಲೇಡಿ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿದ್ದ ವಿಜಯ ನಿರ್ಮಲಾ. ಸುಮಾರು 44 ಸಿನಿಮಾಗಳ ನಿರ್ದೇಶನ ಮಾಡಿರುವ ನಿರ್ಮಲಾ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿರುವ ಮಹಿಳೆ. ಸಖತ್ ಹೆಸರು ಮತ್ತು ಹಣ ಮಾಡಿ 2019ರಲ್ಲಿ ಅಗಲಿದರು. ನಿರ್ಮಲಾ ಅಗಲಿದೆ ಮೂರು ವರ್ಷಗಳಲ್ಲೇ ಕೃಷ್ಣ ಕೂಡ ಕೊನೆಯುಸಿರೆಳೆದಿದ್ದರು. ಆ ಬಳಿ 1000 ಕೋಟಿ ಆಸ್ತಿಯನ್ನು ಪುತ್ರ ನರೇಶ್‌ ಹೆಸರಿನಲ್ಲಿ ಮಾಡಿಟ್ಟಿದ್ದರು. ಆಸ್ತಿ ವಿಚಾರವಾಗಿ ನರೇಶ್ ಕೂಡ ಓಪನ್ ಆಗಿ ಆಗಾಗ ಮಾತನಾಡುತ್ತಾರೆ. 

ಪವಿತ್ರಾ ಜೊತೆಗಿನ ಮದ್ವೆ ಬಗ್ಗೆ ಮೌನ ಮುರಿದ ನರೇಶ್​ ಪುತ್ರ: ಮಕ್ಕಳು ಹೀಗೂ ಇರ್ತಾರಾ ಅಂದ ಫ್ಯಾನ್ಸ್​!

ನವೀನ್ ಹೇಳಿಕೆ ಏನು?

'ಪವಿತ್ರಾ ಲೋಕೇಶ್ ಒಳ್ಳೆಯ ವ್ಯಕ್ತಿನೇ ಅವರು ನನಗೆ ಪರಿಚಯವಿದ್ದಾರೆ. ಅವರು ನನ್ನೊಂದಿಗೆ ಚೆನ್ನಾಗಿದ್ದಾರೆ. ಊಟವನ್ನು ಕಳುಹಿಸಿಕೊಡುತ್ತಾರೆ. ಅವರಿಬ್ಬರೂ ಆರಾಮಾಗಿದ್ದಾರೆ. ಅದೇ ಮುಖ್ಯ ಜೀವನದಲ್ಲಿ. ಯಾರ್ ಯಾರೋ ಕಾಮೆಂಟ್ ಮಾಡುವ ಅಗತ್ಯವಿಲ್ಲ. ಉಪದೇಶ ಕೊಡುವುದಕ್ಕೆ ನಮ್ಮಪ್ಪ ಏನು ಮಗುವಲ್ಲ ಎಲ್ಲರ ಬದುಕಿನಲ್ಲೂ ತಪ್ಪು ಆಗುತ್ತದೆ. ಆಮೇಲೆ ಆಸ್ತಿ ಬಗ್ಗೆ ಕೇಳುವವರಿಗೆ ಕಿವಿ ಮಾತು ಸದ್ಯ ಎಲ್ಲಾ ಆಸ್ತಿ ನರೇಶ್ ಹೆಸರಿನಲ್ಲಿದೆ. ಅವರೇ ಈಗ ವಾರಸ್ದಾರ. ನನಗೆ ಇಷ್ಟೊಂದು ಆಸ್ತಿಯನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋದು ಗೊತ್ತಿಲ್ಲ. ಅದನ್ನು ಕಾಪಾಡುವುದು ಡೊಡ್ಡ ಜವಾಬ್ದಾರಿ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ನವೀನ್ ಮಾತನಾಡಿದ್ದಾರೆ. 

Phd ಪ್ರವೇಶ ಪರೀಕ್ಷೆಯಲ್ಲಿ ನಟಿ ಪವಿತ್ರಾ ಲೋಕೇಶ್ ಪಾಸ್‌!

'ಆಸ್ತಿಯನ್ನು ಕಾಪಾಡುವುದು ಒಂದು ದೊಡ್ಡ ಜವಾಬ್ದಾರಿ. ಹಾಗಾಗಿ ಎಲ್ಲಾ ಆಸ್ತಿಯನ್ನು ಅವರ ಹೆಸರಿನಲ್ಲಿ ಇರುವುದೇ ಒಳ್ಳೆಯದು ಎಂದು ಕೊಂಡಿದ್ದೇನೆ. ಸದ್ಯ ಎಲ್ಲಾ ಆಸ್ತಿಯೂಅವರ ಹೆಸರಿನಲ್ಲೇ ಇದೆ. ನರೇಶ್ ಬಳಿಕ ಈ ಆಸ್ತಿಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ' ಎಂದು ನವೀನ್ ಹೇಳಿದ್ದಾರೆ.