Phd ಪ್ರವೇಶ ಪರೀಕ್ಷೆಯಲ್ಲಿ ನಟಿ ಪವಿತ್ರಾ ಲೋಕೇಶ್ ಪಾಸ್!
ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪವಿತ್ರಾ. ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆದ ನಟಿ......
ದಕ್ಷಿಣ ಭಾರತ ಚಿತ್ರರಂಗದ ಅದ್ಭುತ ನಟಿ ಪವಿತ್ರಾ ಲೋಕೇಶ್ ಪಿಎಚ್‌ಡಿ ಮಾಡಲು ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದರು. ಇಂದು ಫಲಿತಾಂಶ ಪ್ರಕಟವಾಗಿದ್ದು ಪಾಸ್ ಆಗಿದ್ದಾರೆ. ಪವಿತ್ರಾ ಸೇರಿದಂತೆ ಸುಮಾರು 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೌದು! ಜುಲೂ 30ರಂದು ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಿತ್ತು. ಕನ್ನಡ ವಿವಿಯಲ್ಲಿ 981 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು ಆ ಪೈಕಿ 259 ಜನ ಉತ್ತೀರ್ಣರಾಗಿದ್ದಾರೆ ಎಂದು ಡಾ. ಸುಬ್ಬಣ್ಣ ರೈ ಮಾಹಿತಿ ನೀಡಿದ್ದಾರೆ. ಭಾಷಾ ನಿಕಾಯದಡಿ ಪವಿತ್ರಾ ಪರೀಕ್ಷೆ ಬರೆದಿದ್ದಾರೆ. ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದಾರೆ ಎನ್ನಲಾಗಿದೆ.
ಚಿಕ್ಕ ವಯಸ್ಸಿನಿಂದಲೂ ಓದಿನ ಮೇಲೆ ಪವಿತ್ರಾ ಲೋಕೇಶ್ ಆಸಕ್ತಿ ಜಾಸ್ತಿ. ಮೂಲತಃ ಮೈಸೂರಿನವರಾಗಿರುವ ಪವಿತ್ರಾ 9ನೇ ತರಗತಿಯಲ್ಲಿರುವಾಗ ತಂದೆ ಮೈಸೂರು ಲೋಕೇಶ್‌ರನ್ನು ಕಳೆದುಕೊಂಡರು. ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ 80% ಗಳಿಸಿದ ನಂತರ ಸಿವಿಲ್ ಸರ್ವೆಂಟ್ ಆಗಿ ಕೆಲಸ ಮಾಡಿದರು. ತಾಯಿಗೆ ಸಂಸಾರ ನಡೆದಲು ಕಷ್ಟವಾಗುತ್ತದೆ ಎಂದು ತಂದೆ ಹಾದಿ ಹಿಡಿದು ಸಿನಿಮಾಗಳಲ್ಲಿ ನಟಿಸಿದರು. ನಟನೆ ಜೊತೆ ಮೈಸೂರಿನ SBRR ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
16ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಪವಿತ್ರಾ ಲೋಕೇಶ್ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 5 ಅಡಿ 10 ಇಂಚು ಇರುವ ಪವಿತ್ರಾ ಲೋಕೇಶ್ ತುಂಬಾ ಉದ್ದ ಇರುವ ನಟಿ ಅನ್ನೋ ಹೆಗ್ಗಳಿಕೆ ಇತ್ತು. 2006ರಲ್ಲಿ ಬಿಡುಗಡೆಯಾದ ನಾಯಿ ನೇರಳು ಚಿತ್ರದಲ್ಲಿ ನಟಿಸಿರುವುದುಕ್ಕೆ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.