ಪವಿತ್ರಾ ಗೌಡಗೆ ಸಿನಿಮಾ ನಟಿಯಾಗುವ ಹುಚ್ಚು ಹಿಡಿಸಿದ್ದು ಯಾರು? ಸೀಕ್ರೆಟ್ ಹೊರಬಿತ್ತು!
'ನಾವಿಬ್ಬರು ಲವ್ ಮ್ಯಾರೇಜ್ ಮಾಡಿಕೊಂಡು, ಮಗಳೊಬ್ಬಳಿಗೆ ಪೋಷಕರಾಗಿ ಸಂಸಾರ ನಡೆಸುತ್ತಿದ್ದೆವು. ಆಗ ನಮ್ಮ ಮನೆಗೆ ಪವಿತ್ರಾ ಜೊತೆ ಆ ನಟಿ ಬರುತ್ತಿದ್ದರು. ಅವರು ನಮ್ಮ ಮನೆಯಲ್ಲಿ ಕೂಡ ಬಹಳಷ್ಟು ಸಮಯ ಇರುತ್ತಿದ್ದರು. ಆಗ ನನ್ನ ಹೆಂಡತಿಯಾಗಿದ್ದ ಪವಿತ್ರಾ ಗೌಡ ಅವರಿಗೆ..
ಸದ್ಯ ನಟ ದರ್ಶನ್ ಹಾಗೂ ಪವಿತ್ರಾ ಗೌಡ (Pavithra Gowda) ಅವರಿಬ್ಬರೂ ಜೈಲಿನಿಂದ ಬೇಲ್ ಮೂಲಕ ಬಿಡುಗಡೆಯಾಗಿ ಹೊರಬಂದಿರುವುದೇ ದೊಡ್ಡ ಸುದ್ದಿ. ಅಶ್ಲೀಲ ಮೆಸೇಜ್ ಕಳುಹಿಸಿ ಕೊಲೆಯಾಗಿರುವ ರೇಣುಕಾಸ್ವಾಮಿ ಕೇಸ್‌ನಲ್ಲಿ (Renukaswamy) ಆರೋಪಿಗಳಾಗಿ ಕಳೆದ ಐದು ತಿಂಗಳುಗಳಿಗಿಂತ ಹೆಚ್ಚು ದಿನಗಳಿಂದ ದರ್ಶನ್, ನಟಿ ಹಾಗೂ ದರ್ಶನ್ (Darshan) ಸ್ನೇಹಿತೆ ಪವಿತ್ರಾ ಗೌಡ ಜೈಲಿನಲ್ಲಿದ್ದು ಈಗ ಹೊರಗೆ ಬಂದಿದ್ದಾರೆ. ಈ ವೇಳೆ, ನಟಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ಒಂದು ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.
ಆ ಸೀಕ್ರೆಟ್ ಏನ್ ಗೊತ್ತಾ? ಸಂಜಯ್ ಸಿಂಗ್ ಜೊತೆ ಲವ್ ಮ್ಯಾರೇಜ್ ಮಾಡಿಕೊಮಡು ಪವಿತ್ರಾ ಗೌಡ ಅವರು ದಾಂಪತ್ಯ ಜೀವನ ಸಾಗಿಸುತ್ತಿದ್ದರು. ಆದರೆ, ಅವರ ಸ್ನೇಹಿತೆಯಾಗಿ ಮನೆಗೆ ಬರುತ್ತಿದ್ದ ಕನ್ನಡದ ಸೀರಿಯಲ್ ನಟಿಯೊಬ್ಬರು ಪವಿತ್ರಾ ಗೌಡ ಅವರಿಗೆ ಈ ಬಣ್ಣದ ಲೋಕದ ಹುಟ್ಟು ಹಿಡಿಸಿದ್ದಾರೆ. ಅವರಿಂದಲೇ ಪವಿತ್ರಾ ಗೌಡ ಅವರು ಸಿನಿಮಾ, ಶೂಟಿಂಗ್, ಕೆರಿಯರ್ ಅಂತ ಸಂಸಾರ ತ್ಯಜಿಸಿ ಮೇಕಪ್ ಹಾಕಿಕೊಳ್ಳಲು ಶುರು ಮಾಡಿದ್ದು ಎಂದಿದ್ದಾರೆ ಮಾಜಿ ಪತಿ ಸಂಜಯ್.
ಬಿಗ್ ಬಾಸ್ ಕನ್ನಡ ಶೋ ಕೊರತೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕಿಚ್ಚ ಸುದೀಪ್ ಹೇಳಿದ್ದೇನು?
'ನಾವಿಬ್ಬರು ಲವ್ ಮ್ಯಾರೇಜ್ ಮಾಡಿಕೊಂಡು, ಮಗಳೊಬ್ಬಳಿಗೆ ಪೋಷಕರಾಗಿ ಸಂಸಾರ ನಡೆಸುತ್ತಿದ್ದೆವು. ಆಗ ನಮ್ಮ ಮನೆಗೆ ಪವಿತ್ರಾ ಜೊತೆ ನಟಿ 'ಕೋಳಿ ರಮ್ಯಾ' ಬರುತ್ತಿದ್ದರು. ಅವರು ನಮ್ಮ ಮನೆಯಲ್ಲಿ ಕೂಡ ಬಹಳಷ್ಟು ಸಮಯ ಇರುತ್ತಿದ್ದರು. ಆ ಸಮಯದಲ್ಲಿ ನನ್ನ ಹೆಂಡತಿಯಾಗಿದ್ದ ಪವಿತ್ರಾ ಗೌಡ ಅವರಿಗೆ ಸಿನಿಮಾ ನಟಿಯಾಗಲೇಬೇಕು ಎಂಬ ಆಸೆ ಹುಟ್ಟಿದ್ದು, ಅದಕ್ಕಾಗಿ ಪವತ್ರಾ ಹಠ ಹಿಡಿದಿದ್ದು. ಆ ಬಳಿಕ ಪವಿತ್ರಾಗೆ ಬಣ್ಣದ ಲೋಕದ ಸೆಳೆತ ಜಾಸ್ತಿಯಾಗಿ, ಬಳಿಕ ನಮ್ಮ ಸಂಸಾರ ವಿಚ್ಛೇದನದತ್ತು ಸರಿಯಿತು' ಎಂದಿದ್ದಾರೆ ಸಂಜಯ್ ಸಿಂಗ್.
ಒಟ್ಟಿನಲ್ಲಿ, ಸಂಸಾರ ಮಾಡಬೇಕು ಎಂದು ಸಂಜಯ್ ಸಿಂಗ್ ಜೊತೆ ಸಪ್ತಪದಿ ತುಳಿದ ಪವಿತ್ರಾ ಗೌಡ ಬಳಿಕ ಕೋಳಿ ರಮ್ಯಾ ಸಹವಾಸದಿಂದಲೇ ನಟಿಯಾದರೇ? ನಿಖರವಾಗಿ ಬೇರೆಯವರು ಹೇಳಲಾಗದು. ಆದರೆ, ಸಂಜಯ್ ಸಿಂಗ್ ಹೇಳುವ ಪ್ರಕಾರ ಹೌದು, ಪವಿತ್ರಾ ಸಂಸಾರಕ್ಕಿಂತ ಹೆಚ್ಚಾಗಿ ನಟಿಯಾಗಲು ಹಾತೊರಿದಿದ್ದು ಆ ಕೋಳಿ ರಮ್ಯಾ ಸಹವಾಸದಿಂದಲೇ ಆಗಿದೆ. ಬಳಿಕ ಪವಿತ್ರಾ ಗೌಡ ಅವರು 'ಸಾಗುವ ದಾರಿಯಲ್ಲಿ', 'ಪ್ರೀತಿ ಕಿತಾಬು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಕಾರಣಕ್ಕೇ ಕನ್ನಡದ ಸ್ಟಾರ್ ನಟ ದರ್ಶನ್ ಸಂಪರ್ಕಕ್ಕೂ ಬಂದಿದ್ದಾರೆ.
'ಪುಷ್ಪಾ 2' ಡಾನ್ಸ್ ಕುಣಿತದ ನಂತ್ರ ಶ್ರೀಲೀಲಾ ಕಥೆ ನೋಡಿ; ಹೀಗಾಗುತ್ತೆ ಅಂದ್ಕೊಂಡಿದ್ರಾ?
ನಟ ದರ್ಶನ್ ಸಿನಿಮಾದ ಆಡಿಶನ್‌ಗೆ ಬಂದಿದ್ದ ಪವಿತ್ರಾ ಗೌಡ ಅವರಿಗೆ ದರ್ಶನ್ ಪರಿಚಯವಾಗಿ, ಬಳಿಕ ಅದು ಸ್ನೇಹಕ್ಕೆ ತಿರುಗಿ, ಅವರಿಬ್ಬರೂ ತುಂಬಾ ಕ್ಲೋಸ್ ಆಗಿದ್ದು ಈಗ ಇತಿಹಾಸ. ಅಷ್ಟೇ ಅಲ್ಲ, ಪರಸ್ಪರ ಹತ್ತಿರವಾಗಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ, ಕೊಲೆ ಕೇಸ್ ಆರೋಪಿಗಳಾಗಿ ಜೈಲು ಸೇರಿ ಈಗ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದಾರೆ. ಈಗ ಪವಿತ್ರಾ ಮಾಜಿ ಪತಿ ಸಂಜಯ್ ಸಿಂಗ್ ಅವರು ಪವಿತ್ರಾ ಒಪ್ಪ ಬಂದರೆ ತಾವು ಮತ್ತೆ ಅವರೊಂದಿಗೆ ಸಂಸಾರ ಮಾಡಲು ಸಿದ್ದ' ಎಂದು ಹೇಳುತ್ತಿದ್ದಾರೆ. ಆದರೆ ಅದು ಸಾಧ್ಯವೇ? ಕಾಲವೇ ಉತ್ತರಿಸಬೇಕಷ್ಟೇ!