ಬಿಗ್ ಬಾಸ್ ಕನ್ನಡ ಶೋ ಕೊರತೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕಿಚ್ಚ ಸುದೀಪ್ ಹೇಳಿದ್ದೇನು?
ಕಿಚ್ಚ ಸುದೀಪ್ ಅವರು ಕನ್ನಡದ ಬಿಗ್ ಬಾಸ್ ಬಗ್ಗೆ ಮಾತನ್ನಾಡಿದ್ದಾರೆ. 'ನಾನು ನನಗೆ ಅನ್ನಿಸಿದ್ದನ್ನು ಹೇಳುತ್ತೇನೆ. ನನ್ನ ಪ್ರಕಾರ ಕನ್ನಡದ ಬಿಗ್ ಬಾಸ್ ಇನ್ನೂ ಸ್ವಲ್ಪ ಇಂಪ್ರೂವ್‌ಮೆಂಟ್ ಆಗಬೇಕಿದೆ. ಹಿಂದಿ, ತಮಿಳು ಹಾಗು ತೆಲುಗು ಹೀಗೆ ಬೇರೆ ಭಾಷೆಯ ಬಿಗ್ ಬಾಸ್ ಶೋಗಳ..
ಸಂದರ್ಶನದಲ್ಲಿ ಮಾತನಾಡಿರುವ ಕಿಚ್ಚ ಸುದೀಪ್ (Kichcha Sudeep) ಅವರು ಕನ್ನಡದ ಬಿಗ್ ಬಾಸ್ ಬಗ್ಗೆ ಮಾತನ್ನಾಡಿದ್ದಾರೆ. 'ನಾನು ನನಗೆ ಅನ್ನಿಸಿದ್ದನ್ನು ಹೇಳುತ್ತೇನೆ. ನನ್ನ ಪ್ರಕಾರ ಕನ್ನಡದ ಬಿಗ್ ಬಾಸ್ ಇನ್ನೂ ಸ್ವಲ್ಪ ಇಂಪ್ರೂವ್‌ಮೆಂಟ್ ಆಗಬೇಕಿದೆ. ಹಿಂದಿ, ತಮಿಳು ಹಾಗು ತೆಲುಗು ಹೀಗೆ ಬೇರೆ ಭಾಷೆಯ ಬಿಗ್ ಬಾಸ್ ಶೋಗಳ ಜೊತೆ ಕನ್ನಡದ ಬಿಗ್ ಬಾಸ್ ಹೋಲಿಕೆ ಮಾಡಿದರೆ, ನನಗೆ ಕನ್ನಡದ ಶೋದಲ್ಲಿ ಸ್ವಲ್ಪ ಮಟ್ಟಿಗಿನ ಕೊರತೆ ಕಾಣಿಸುತ್ತಿದೆ.
ಬಿಗ್ ಬಾಸ್ ವೀಕ್ಷಕರು, ಟಿಆರ್‌ಪಿ ಸಂಗತಿಯ ಬಗ್ಗೆ ನಾನು ಹೇಳುತ್ತಿಲ್ಲ. ಬಿಗ್ ಬಾಸ್ ತಂಡದಲ್ಲಿ ಯಾರು ಇದ್ದಾರೋ ಅವರು ಸ್ವಲ್ಪ ಬೇರೆ ರೀತಿಯಲ್ಲಿ ಆಲೋಚಿಸಬೇಕು ಎಂದು ನನಗೆ ಅನ್ನಿಸ್ತಾ ಇದೆ. ಕನ್ನಡದ ಬಿಗ್ ಬಾಸ್ ಇನ್ನೂ ಸ್ವಲ್ಪ ಹೆಚ್ಚು ಚೆನ್ನಾಗಿ ಆಗಬೇಕು ಎಂಬುದು ನನ್ನ ಅಭಿಪ್ರಾಯ' ಎಂದಿದ್ದಾರೆ ಕಿಚ್ಚ ಸುದೀಪ್. ಈ ಹೇಳಿಕೆಯೀಗ ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಕಳೆದ ಅಕ್ಟೋಬರ್ 13ರಂದು ತಮ್ಮ 'X' ನಲ್ಲಿ ಟ್ವೀಟ್ ಮಾಡಿ, ಬಿಗ್ ಬಾಸ್ ಈ ಸೀಸನ್, ಅಂದರೆ 11 ನನ್ನ ಕೊನೆಯ ಸೀನಸ್ ಎಂದಿದ್ದಾರೆ ನಟ ಸುದೀಪ್. ಜೊತೆಗೆ, ನೀವೆಲ್ಲಾ ಬಿಗ್ ಬಾಸ್‌ಗೆ ತೋರಿಸುತ್ತಿರುವ ರೆಸ್ಪಾನ್ಸ್‌ಗೆ ತುಂಬಾ ಥ್ಯಾಂಕ್ಸ್. ಟಿಆರ್‌ಪಿ ಕೂಡ ನಿಮ್ ಪ್ರೀತಿ-ವಿಶ್ವಾಸವನ್ನು ಸಾರಿ ಹೇಳುತ್ತಿವೆ. ಆದರೆ, ಈ ಬಿಗ್ ಬಾಸ್ ಬಿಟ್ಟು ನಾನು ಮುಂದೇನು ಮಾಡಬೇಕೆಂದು ಯೋಚಿಸಿ ನಿರ್ಧರಿಸಲು ಇದು ಸೂಕ್ತ ಸಮಯ.
ಬಿಗ್ ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್. ನನ್ನ ಈ ನಿರ್ಧಾರವನ್ನು ಕಲರ್ಸ್ ಕನ್ನಡ ವಾಹಿನಿ, ವೀಕ್ಷಕರು ಹಾಗು ಸಂಬಂಧಪಟ್ಟ ಎಲ್ಲರೂ ಗೌರವಿಸುತ್ತಾರೆ ಎಂದೇ ನಾನು ಭಾವಿಸುತ್ತೇನೆ. ನನ್ನ ಸಿನಿಮಾ ತೆರೆಗೆ ಬರದೇ ವರ್ಷಗಳೇ ಕಳೆದಿವೆ. ನನ್ನ ಸಿನಿಮಾ ಪ್ರೇಕ್ಷಕರಿಗೆ ಕೂಡ ನಾನು ನಿರಾಸೆ ಮಾಡಲಾರೆ. ಬಿಗ್ ಬಾಸ್ ವೀಕ್ಷಕರು, ಬಿಗ್ ಬಾಸ್ ಪ್ರಿಯರಷ್ಟೇ ನನಗೆ ಸಿನಿಮಾ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕೂಡ ಮುಖ್ಯ.
ಹೀಗಾಗಿ ಹತ್ತು ಹಾಗೂ ಮತ್ತೊಂದು ಸೀಸನ್ ಮುಗಿದ ಬಳಿಕ ನಾನು ಬಿಗ್ ಬಾಸ್ ಶೋದಿಂದ ಹೊರಬರುತ್ತಿದ್ದೇನೆ' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಅವರ ಈ ಮಾತು ಹೊಸದೇನು ಅಲ್ಲ, ಅಂದರೆ ಮೂರು ತಿಂಗಳ ಹಿಂದೆಯೇ ಹೇಳಿದ್ದಾರೆ. ಆದರೆ, ಕನ್ನಡದ ಬಿಗ್ ಬಾಸ್ ಶೋ ಈಗಿರುವುದಕ್ಕಿಂತ ಇನ್ನೂ ಸ್ವಲ್ಪ ಹೆಚ್ಚು ಸುಧಾರಣೆ ಆಗಬೇಕು ಎಂದಿರುವುದು ಇದೇ ಮೊದಲು. ಹತ್ತು ಸೀಸನ್ ಮುಗಿಸಿ ಹನ್ನೊಂದರ ಕೊನೆಯ ಘಟ್ಟದಲ್ಲಿರುವ ಕಿಚ್ಚ ಸುದೀಪ್ ಮಾತನ್ನು ಕಲರ್ಸ್ ವಾಹಿನಿ ಹಾಗೂ ಸಂಬಂಧಪಟ್ಟವರು ಸೀರಿಸಯ್ಸಾಗಿ ತೆಗೆದುಕೊಳ್ಳುವರೇ? ಕಾದು ನೋಡಬೇಕಿದೆ.