Asianet Suvarna News Asianet Suvarna News

ಜ್ಯೂ.NTR ಹಣೆಯಿಂದ ರಕ್ತ, ರಾಮ್ ಚರಣ್ ಪೊಲೀಸ್: RRR ಚಿತ್ರದ ಸಣ್ಣ ತುಣುಕು

ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Pan India Movie RRR Glimpse Video out starred Ram Charan and NTR
Author
Bangalore, First Published Nov 1, 2021, 3:17 PM IST

ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (RRR) (ರೈಸ್‌–ರೋರ್‌–ರಿವೋಲ್ಟ್‌) ಚಿತ್ರದ ಫಸ್ಟ್‌ಲುಕ್, ಪೋಸ್ಟರ್, ಪ್ರೋಮೋ ಹಾಗೂ ಹಾಡು ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇದೀಗ ಚಿತ್ರತಂಡ ಚಿತ್ರದ ಗ್ಲಿಂಪ್ಸ್ (Glimpse) ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಯೂಟ್ಯೂಬ್‌ನಲ್ಲಿ (YouTube) ಭರ್ಜರಿ ವೀಕ್ಷಣೆ ಪಡೆದಿದೆ.  'ಆರ್‌ಆರ್‌ಆರ್‌' ಚಿತ್ರಕ್ಕೆ ರಾಜಮೌಳಿ ಆ್ಯಕ್ಷನ್​- ಕಟ್​ ಹೇಳಿದ್ದು, ರಾಮ್ ಚರಣ್ (Ram Charan), ಜೂನಿಯರ್ ಎನ್‌ಟಿಆರ್ ( NTR), ಅಜಯ್ ದೇವಗನ್ (Ajay Devgn), ಆಲಿಯಾ ಭಟ್ (Alia Bhatt), ಒಲಿವಿಯಾ ಮೋರಿಸ್ (Olivia Morris), ಸಮುದ್ರಕನಿ (Samuthirakani), ಅಲಿಸನ್ ಡೂಡಿ (Alison Doody) ಹಾಗೂ ರೇ ಸ್ಟೀವನ್ಸನ್ (Ray Stevenson) ನಟಿಸಿದ್ದಾರೆ.

ಜೂನಿಯರ್ NTR ಕಣ್ಣಿಗೆ ಗಾಯ; ಸ್ಪಷ್ಟನೆ ಕೊಟ್ಟ ಆರ್‌ಆರ್‌ಆರ್‌ ಟೀಂ

ಗ್ಲಿಂಪ್ಸ್ ವಿಡಿಯೋದಲ್ಲಿ ಅಪ್ಪಟ ದೇಶಿ ಸಿನಿಮಾದಂತಿರುವ ಪಾತ್ರಗಳು ಸಿನಿರಸಿಕರ ಮನಸೆಳೆಯುತ್ತಿವೆ. ಡಿವಿವಿ ದಾನಯ್ಯ (DVV Danayya) ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
 


ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್‌' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ (M.M. Keeravaani) ಸಂಗೀತ ಸಂಯೋಜಿಸಿದ್ದಾರೆ. ಜನವರಿ 7, 2022ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್‌' ಬಿಡುಗಡೆಯಾಗಲಿದೆ.

'RRR' ಫ್ರೆಂಡ್‌ಶಿಪ್ ಹಾಡು ವೈರಲ್: ಕನ್ನಡಿಗರಿಗೇಕಿಲ್ಲ ಹಾಡಲು ಅವಕಾಶ?

ಇನ್ನು ಸ್ನೇಹಿತರ ದಿನಾಚರಣೆ ಪ್ರಯುಕ್ತ 'ಆರ್‌ಆರ್‌ಆರ್‌' ಚಿತ್ರತಂಡ ಸ್ಪೆಷಲ್ ಹಾಡೊಂದನ್ನು ಸ್ನೇಹಿತರಿಗೆಂದೇ ಬಿಡುಗಡೆ ಮಾಡಿತ್ತು. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ 'ದೋಸ್ತಿ' ಹಾಡು (Dosti Song) ಬಿಡುಗಡೆ ಮಾಡಲಾಗಿತ್ತು. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್‌ ಮತ್ತು ರಾಮ್‌ಚರಣ್ ಕಾಣಿಸಿಕೊಂಡಿದ್ದರು. ತೆಲಗು ಹಾಡನ್ನು ಹೇಮಚಂದ್ರ, ತಮಿಳು ಹಾಡನ್ನು ಅನಿರುದ್ಧ ರವಿಚಂದ್ರನ್, ಮಲಯಾಳಂ ಹಾಡನ್ನು ವಿಜಯ್ ಯೇಸುದಾಸ್, ಹಿಂದಿ ಹಾಡನ್ನು ಅಮಿತ್ ತ್ರಿವೇದಿ ಹಾಡಿದ್ದರು. ಆದರೆ ಕನ್ನಡ ಹಾಡನ್ನು ಕೇರಳದ ಗಾಯಕ ಯಾಜೀನ್ ನಿಜರ್ ಹಾಡಿದ್ದರು. 
 


'ಆರ್‌ಆರ್‌ಆರ್‌' ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ (Lahari Music) ತನ್ನದಾಗಿಸಿಕೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಆಡಿಯೋ ಹಕ್ಕುಗಳೂ ಸಹ ಲಹರಿ ಪಾಲಾಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪದುಕೊಂಡಿರುವುದು ಖುಷಿ ಇದೆ. ಒಂದು ದೊಡ್ಡ ಚಿತ್ರದ ಭಾಗವಾಗುತ್ತಿದ್ದೇವೆಂಬ ಹೆಮ್ಮೆ ಕೂಡ ಇದೆ ಎಂದು ಲಹರಿ ವೇಲು (Lahari Velu) ಹೇಳಿದ್ದರು. ಅಲ್ಲದೇ ಈ ಚಿತ್ರದ ಡಿಜಿಟಲ್ ಮತ್ತು ಸೆಟಲೈಟ್‌ ಹಕ್ಕು ಜೀ ತಂಡ (Zee Team) 300 ಕೋಟಿ ರೂ. ಗೆ ಪಡೆದುಕೊಂಡಿದೆ. 

Follow Us:
Download App:
  • android
  • ios