Asianet Suvarna News Asianet Suvarna News

'RRR'ಫ್ರೆಂಡ್‌ಶಿಪ್ ಹಾಡು ವೈರಲ್; ಕನ್ನಡಿಗರಿಗೇಕಿಲ್ಲ ಹಾಡಲು ಅವಕಾಶ?

ದೋಸ್ತಿ ಹಾಡು ಮೆಚ್ಚಿಕೊಂಡ ಸಿನಿ ಪ್ರೇಮಿಗಳು, ಕನ್ನಡಿಗರಿಗೂ ಅವಕಾಶ ನೀಡಬೇಕಿತ್ತು ಎಂದು ಬೇಸರ ತೋಡಿ ಕೊಂಡು ಕನ್ನಡಾಭಿಮಾನಿಗಳು.

SS Rajamouli RRR Friendship day song Kannadigas disappointed vcs
Author
Bangalore, First Published Aug 2, 2021, 12:47 PM IST
  • Facebook
  • Twitter
  • Whatsapp

ಎಸ್.ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿರುವ 'ಆರ್‌ಆರ್‌ಆರ್‌' ಸಿನಿಮಾ ಇದೇ ಆಗಸ್ಟ್‌ 13ಕ್ಕೆ ಬಿಡುಗಡೆಯಾಗುತ್ತಿದೆ. ಆಗಸ್ಟ್‌ 1ರ ಸ್ನೇಹಿತರ ದಿನಾಚರಣೆ ಪ್ರಯುಕ್ತ ಚಿತ್ರತಂಡ ಸ್ಪೆಷಲ್ ಹಾಡೊಂದನ್ನು ಸ್ನೇಹಿತರಿಗೆಂದೇ ಬಿಡುಗಡೆ ಮಾಡಿದೆ. ಪ್ರತೀ ಭಾಷೆಯಲ್ಲಿಯೂ ಹಾಡು ಡಿಫರೆಂಟ್ ಆಗಿ ಕೇಳಿಸುತ್ತಿದ್ದು, ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಆದರೆ ಕನ್ನಡಿಗರಿಗೆ ಈ ಒಂದು ವಿಚಾರದಲ್ಲಿ ಬೇಸರವಿದೆ. 

ಹೌದು! ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ 'ದೋಸ್ತಿ' ಹಾಡು ಬಿಡುಗಡೆ ಮಾಡಲಾಗಿತ್ತು. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್‌ ಮತ್ತು ರಾಮ್‌ಚರಣ್ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಪ್ರತಿ ಭಾಷೆಯಲ್ಲಿಯೂ ಬಿಡುಗಡೆ ಆಗಿರುವ ಹಾಡನ್ನು ಆಯಾ ಭಾಷಾ ಗಾಯಗರು ಹಾಡಿದ್ದಾರೆ. ಆದರೆ ಕನ್ನಡ ಹಾಡನ್ನು ಮಾತ್ರ ಕೇರಳದ ಗಾಯಕ ಹಾಡಿರುವುದಕ್ಕೆ ಕನ್ನಡ ಭಾಷಾಭಿಮಾನಿಗಳಿಗೆ ಸಹಜವಾಗಿಯೇ ಬೇಸರ ತರಿಸಿದೆ. 

ದೊಡ್ಡ ಮೊತ್ತಕ್ಕೆ ರಾಜಮೌಳಿ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದ ಲಹರಿ ಮ್ಯೂಸಿಕ್!

ತೆಲಗು ಹಾಡನ್ನು ಹೇಮಚಂದ್ರ ಹಾಡಿದ್ದಾರೆ, ತಮಿಳು ಹಾಡನ್ನು ಅನಿರುದ್ಧ ರವಿಚಂದ್ರನ್ ಹಾಡಿದ್ದಾರೆ, ಮಲಯಾಳಂ ಹಾಡನ್ನು ವಿಜಯ್ ಯೇಸುದಾಸ್, ಹಿಂದಿ ಹಾಡನ್ನು ಅಮಿತ್ ತ್ರಿವೇದಿ ಹಾಡಿದ್ದಾರೆ. ಆದರೆ ಕನ್ನಡ ಹಾಡನ್ನು ಕೇರಳದ ಗಾಯಕ ಯಾಜೀನ್ ನಿಜರ್ ಹಾಡಿದ್ದಾರೆ. ಕನ್ನಡದ ಸುಮಾರು 7-8 ಹಾಡುಗಳನ್ನು ಹಾಡಿರುವ ಯಾಜೀನ್ ಧ್ವನಿಯಲ್ಲಿ ಹಾಡು ಕೇಳುವುದು ಅದ್ಭುತವಾಗಿದೆ. ಆದರೆ ಸ್ಥಳೀಯರಿಗೆ ಅಥವಾ ಭಾಷೆ ಗೊತ್ತಿರುವವರಿಗೆ ಅವಕಾಶ ಕೊಟ್ಟರೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಹಾಗೂ ಸಾಲುಗಳ ಭಾವನೆ ಅರ್ಥ ಮಾಡಿಕೊಂಡು ಹಾಡುತ್ತಾರೆ. ಕನ್ನಡದಲ್ಲಿ ಬಿಡುಗಡೆ ಮಾಡುತ್ತೀರಾ, ಕನ್ನಡಿಗರು ನೋಡಬೇಕು ಎಂದರೆ ಕನ್ನಡಿಗರಿಗೂ ಅವಕಾಶ ನೀಡಿ ಎಂದು ಕನ್ನಡ ಸಿನಿ ಪ್ರೇಮಿಗಳು ಆಗ್ರಹಿಸಿದ್ದಾರೆ.

 

Follow Us:
Download App:
  • android
  • ios