Asianet Suvarna News Asianet Suvarna News

ಜೂನಿಯರ್ NTR ಕಣ್ಣಿಗೆ ಗಾಯ; ಸ್ಪೆಷ್ಟನೆ ಕೊಟ್ಟ ಆರ್‌ಆರ್‌ಆರ್‌ ಟೀಂ

ನಿರ್ದೇಶಕ ರಾಜಮೌಳಿ ಸೆರೆ ಹಿಡಿದ ಹಳೇ ವಿಡಿಯೋ ವೈರಲ್. ಜೂನಿಯರ್‌ ಅಭಿಮಾನಿಗಳಿಗೆ ಆತಂಕ ಶುರು...

RRR team share video Junior NTR seen hurt fans demand clarification vcs
Author
Bangalore, First Published Aug 9, 2021, 12:51 PM IST
  • Facebook
  • Twitter
  • Whatsapp

ಕೊರೋನಾ ಅಟ್ಟಹಾಸದಿಂದ ಈ ವರ್ಷ ಬಿಗ್ ಬಜೆಟ್ ಸಿನಿಮಾ ಚಿತ್ರೀಕರಣ ಹಾಗೂ ಬಿಡುಗಡೆ ತಡವಾಗುತ್ತಿದೆ. ಸೋಷಿಯಲ್ ಮೀಡಿಯಾ ಇರುವುದರಿಂದ ಅಭಿಮಾನಿಗಳಿಗೆ ಸಣ್ಣ ಪುಟ್ಟ ಅಪ್ಡೇಟ್ ನೀಡುವ ಮೂಲಕ ಎಂಗೇಜ್‌ ಆಗಿಟ್ಟು ಕೊಂಡಿದೆ ಸಿನಿ ತಂಡ. ಅದರಲ್ಲೂ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿರುವ ಆರ್‌ಆರ್‌ಆರ್‌ ಸಿನಿಮಾ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ. 

ಐಡಿ ಕಾರ್ಡಿದ್ದವರಿಗೆ ಮಾತ್ರ RRR ಸೆಟ್‌ಗೆ ಎಂಟ್ರಿ; ಜೂ.ಎನ್‌ಟಿಆರ್ ಐಡಿ ನೋಡಿದ್ರಾ?

ಟ್ಟಿಟರ್‌ನಲ್ಲಿ RRR ಅಧಿಕೃತ ಖಾತೆ ಹೊಂದಿದ್ದು, ನಿರ್ದೇಶಕ ರಾಜಮೌಳಿ ತಮ್ಮ  ಹಳೆ ಕ್ಯಾಮೆರಾದಲ್ಲಿ ಸೆರೆ ಹಿಡದಿರುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಮಾತನಾಡುತ್ತಿದ್ದಾರೆ. ಆಫ್‌ ಸ್ಕ್ರೀನ್ ಇಬ್ಬರ ಬಾಂಧವ್ಯ ಕಂಡು ಮೆಚ್ಚಿಕೊಂಡ ನೆಟ್ಟಿಗರು ಜೂನಿಯರ್ ಹಣೆ ಮೇಲೆ ಗಾಯ ನೋಡಿ, ಶಾಕ್ ಆಗಿದ್ದಾರೆ. 

RRR team share video Junior NTR seen hurt fans demand clarification vcs

ಜೂನಿಯರ್ ಎನ್‌ಟಿಆರ್‌ ಕಣ್ಣಿನ ಹುಬ್ಬಿನ ಬಳಿ ಗಾಯವಾಗಿದೆ. ಚಿತ್ರೀಕರಣದ ವೇಳೆ ಅಪಘಾತವಾಗಿದೆ ಎಂದು ಗಾಬರಿಗೊಂಡ ಅಭಿಮಾನಿಗಳು ಸ್ಪಷ್ಟನೆ ನೀಡುವಂತೆ ಚಿತ್ರತಂಡಕ್ಕೆ ಒತ್ತಾಯಿಸಿದ್ದಾರೆ. ವಿಡಿಯೋ ಕಾಮೆಂಟ್‌ನಲ್ಲಿ ಚಿತ್ರತಂಡ ಉತ್ತರ ನೀಡಿದೆ. 'ಅದು ಗಾಯವಲ್ಲ ಬದಲಿಗೆ ಮೇಕಪ್ ಅಷ್ಟೆ,' ಎಂದು ಟ್ಟೀಟ್ ಮಾಡಿದೆ. ಇದರಿಂದ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿದೆ. 

ಕೆಲವು ಮೂಲಗಳ ಪ್ರಕಾರ ಫೈಟ್ ಸನ್ನಿವೇಶಕ್ಕೆ ಈ ರೀತಿ ಮೇಕಪ್ ಹಾಕಲಾಗಿದೆ. ಆರ್‌ಆರ್‌ಆರ್‌ ಸಿನಿಮಾದಲ್ಲಿ ಬರೋಬ್ಬರಿ ಹತ್ತು ಫೈಟ್ ದೃಶ್ಯಗಳಿದ್ದು, ಬಾಲಿವುಡ್ ನಟ ಅಜಯ್ ದೇವಗನ್‌ ಸಹ ಒಂದು ಫೈಟ್‌ನಲ್ಲಿ ಕಾಣಸಿಕೊಂಡಿದ್ದಾರೆ.

Follow Us:
Download App:
  • android
  • ios