ಚಿತ್ರತಂಡ ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಮಾಲೀಕ ಕುರುಬಾನಿ ಆಗ್ಬೇಕಿದ್ದ 'ಟಗರು ಪಲ್ಯ' ಸುಲ್ತಾನ ಜೀವ ಉಳಿಸಿದ್ದಾರೆ.
ಡಾಲಿ ಧನಂಜಯ್ ತನ್ನ ಡಾಲಿ ಪಿಕ್ಚರ್ಸ್ ಮೂಲಕ ನಿರ್ಮಿಸುತ್ತಿರುವ ಸಿನಿಮಾ ಟಗರ್ ಪಲ್ಯಾ. ಈ ಚಿತ್ರದಲ್ಲಿ ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಂದಹಾಗೆ ಈ ಚಿತ್ರದಲ್ಲಿ ಅನೇಕ ಟಗರು ಕಾಳಗದಲ್ಲಿ ಗೆದ್ದು ಬೀಗಿರುವ '7 ಸ್ಟಾರ್ ಸುಲ್ತಾನ' ಹೆಸರಿನ ಟಗರನ್ನು ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲು ಮಾಲೀಕ ತೀರ್ಮಾನ ನಡೆಸಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು.
ಈ ಬಗ್ಗೆ ಟಗರು ಪಲ್ಯ ಚಿತ್ರತಂಡ ಕೂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದ್ದು, 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡದಿರಲು ಮಾಲೀಕರು ತೀರ್ಮಾನ ನಡೆಸಿದ್ದಾರೆ. ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಮಾಲೀಕ ಯುನೀಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ 7 ಸ್ಟಾರ್ ಸುಲ್ತಾನ್ ಟಗರನ್ನು 1 ಲಕ್ಷ 88 ಸಾವಿರದ 500 ರೂಪಾಯಿ ಕೊಟ್ಟು ಖರೀದಿಸಿದ್ದರು. ಆದ್ರೆ ಕುರುಬಾನಿ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.
ಇಲ್ಲಿಯ ವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್ಗಳನ್ನ ಈ 7 ಸ್ಟಾರ್ ಸುಲ್ತಾನ್ ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ್ ಎಂದು ಹೆಸರಿಟ್ಟರು. ಆದ್ರೆ ಅಂದುಕೊಂಡಂತೆ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಈ ಟಗರನ್ನ ಕುರ್ಬಾನಿ ನೀಡಲು ನಿರ್ಧರಿಸಿದ್ದರು. ಸಾಧಕ ಟಗರನ್ನು ಕುರ್ಬಾನಿ ಮಾಡದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಸೆಗೆ ಮಣಿದು 7 ಸ್ಟಾರ್ ಸುಲ್ತಾನನ ಕುರ್ಬಾನಿ ಕೊಡದಿರಲು ಯುನೀಸ್ ನಿರ್ಧರಿಸಿದ್ದಾರೆ.
'ಬಡವರ ಮಕ್ಕಳು ಬೆಳಿಬೇಕ್' ಎನ್ನುತಾ ಪ್ರೇಮ್ ಮಗಳಿಗೆ ಅವಕಾಶ ಕೊಟ್ಟಿದ್ದೀರಾ? ನೆಟ್ಟಿಗರಿಗೆ ಡಾಲಿ ಖಡಕ್ ಉತ್ತರ
ಟಗರು ಪಲ್ಯಾ ಬಗ್ಗೆ
ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಮೂರನೇ ಕೊಡುಗೆ ಟಗರು ಪಲ್ಯ. ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಟಗರು ಪಲ್ಯ' ಬೆಡಗಿ ಅಮೃತಾ ಪ್ರೇಮ್!
ಈ ಸಿನಿಮಾದಲ್ಲಿ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವೇ ಟಗರು ಪಲ್ಯ ಸಿನಿಮಾದಲ್ಲಿದೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
