Asianet Suvarna News Asianet Suvarna News

ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಟಗರು ಪಲ್ಯ' ಬೆಡಗಿ ಅಮೃತಾ ಪ್ರೇಮ್!

 ಹುಟ್ಟುಹಬ್ಬ ಸಂಬ್ರಮದಲ್ಲಿ ಅಮೃತಾ ಪ್ರೇಮ್. ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಲಿರುವ ಪ್ರೇಮ್ ಪುತ್ರಿ.... 

Dolly pictures Nagabushan Tagaru Palya film new post of Amrutha prem release vcs
Author
First Published Jan 23, 2023, 2:55 PM IST

ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ನೆನಪಿರಲಿ ಪ್ರೇಮ್ ಮುದ್ದಿನ ಪುತ್ರಿ ಅಮೃತಾ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ ಸಿನಿಮಾ ಮೂಲಕ ಕರುನಾಡ ಜನರ ಮುಂದೆ ನಾಯಕಿಯಾಗಿ ಅಮೃತ್ಆ ಪ್ರೇಮ್ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ 'ಟಗರು ಪಲ್ಯ' ಲುಕ್‌ ಸಿನಿ ಪ್ರೇಕ್ಷಕರಿಂದ ಅಪಾರ ಪ್ರೀತಿ ಮತ್ತು ಮೆಚ್ಚುಗೆ ಪಡೆದುಕೊಂಡಿರುವ ಅಮೃತಾ ಪ್ರೇಮ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕಲಾವಿದೆಯಾಗಿ ಆಚರಿಸಿಕೊಳ್ಳುತ್ತಿರುವ ಮೊದಕ ಹುಟ್ಟುಹಬ್ಬ ಇದಾಗಿರುವ ಕಾರಣ ತುಂಬಾನೇ ಸ್ಪೆಷಲ್ ಎನ್ನಬಹುದು. ಅಮೃತಾಳಿಗೆ  ಚಿತ್ರತಂಡ ಕೂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ನಾಯಕ ನಟಿಗೆ ಶುಭ ಕೋರಿದೆ. 

‘ಟಗರು ಪಲ್ಯ’ ಚಿತ್ರದಲ್ಲಿ ಅಮೃತಾ ಪ್ರೇಮ್ ಪಕ್ಕಾ ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ವರ್ಕ್ ಶಾಪ್ ಮೂಲಕ ಸಾಕಷ್ಟು ಕಲಿತು ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನಬಹುದು. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ.  ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಕೆ ಕೃಪ ಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು ಆ ನಯನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತ ನಟಿಸಿದ್ದಾರೆ. ಭಾಷೆ ಮೇಲೆ ಅವರಿಗೆ ಹಿಡಿತ ಇದೆ. ಮಂಡ್ಯ ಸ್ಲ್ಯಾಂಗ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಕಂಪ್ಲೀಟ್ ಆಗಿದ್ದು ಬಹಳ ಬೇಗ ಎಲ್ಲವನ್ನು ಕಲಿತುಕೊಂಡು ಅಭಿನಯ ಮಾಡಿದ್ದಾರೆ ಎಂದು ಹೇಳಿದ್ದಾರೆ. 

Dolly pictures Nagabushan Tagaru Palya film new post of Amrutha prem release vcs

ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಟಗರು ಪಲ್ಯ’. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. 'ಇಕ್ಕಟ್' ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. 

ಸ್ಟಾರ್ ಮಕ್ಕಳು ಕಲಾವಿದರಾಗೋದು ತಪ್ಪಾ? ಪ್ರೇಮ್ ಪುತ್ರಿಗೆ ಚಾನ್ಸ್ ನೀಡಿದ್ದಕ್ಕೆ ನೆಟ್ಟಿಗರ ಟೀಕೆ

'ಟಗರು ಪಲ್ಯ' ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

Follow Us:
Download App:
  • android
  • ios