ಡಿ.24ರಂದು ಮಿಯಾಮಿಯಲ್ಲಿ ನಟ ಶಿವರಾಜ್ ಕುಮಾರ್‌ಗೆ ಆಪರೇಷನ್‌: ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಶಸ್ತ್ರಚಿಕಿತ್ಸೆಗಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ಈಗಾಗಲೇ ಮಿಯಾಮಿ ತಲುಪಿದ್ದಾರೆ. 24ರಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 

On December 24th Operation for Actor ShivarajKumar Says Minister Madhu Bangarappa gvd

ಶಿವಮೊಗ್ಗ (ಡಿ.21): ಶಸ್ತ್ರಚಿಕಿತ್ಸೆಗಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ಈಗಾಗಲೇ ಮಿಯಾಮಿ ತಲುಪಿದ್ದಾರೆ. 24ರಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಳೆ ಸಂಜೆ ನಾನೂ ಕೂಡ ಅಲ್ಲಿಗೆ ತೆರಳಲಿದ್ದೇನೆ. ಚಿಕಿತ್ಸೆ ನಡೆಯುವಾಗ ನಾನೂ ಕೂಡ ಅವರ ಜೊತೆಯಲ್ಲಿ ಇರುತ್ತೇನೆ. ವಿಶ್ವದ ಬೆಸ್ಟ್ ಡಾಕ್ಟರ್ ಅವರಿಗೆ ಚಿಕಿತ್ಸೆ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಇರಲಿದ್ದಾರೆ. ಬಳಿಕ ಒಂದು ತಿಂಗಳ ಕಾಲ ಶಿವಣ್ಣ ಅಲ್ಲೆ ಇದ್ದು, ಒಂದುವರೆ ತಿಂಗಳ ನಂತರ ಶಿವಣ್ಣ ಬೆಂಗಳೂರಿಗೆ ಬರುತ್ತಾರೆ ಎಂದು ಮಾಹಿತಿ ನೀಡಿದರು.

ಅಭಿಮಾನಿಗಳ ಅಶೀವಾರ್ದವೇ ಅವರಿಗೆ ಶ್ರೀ ರಕ್ಷೆ. ಶಿವಣ್ಣ ಶೀಘ್ರದಲ್ಲಿಯೇ ಗುಣಮುಖರಾಗುತ್ತಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದರು. ಬಿಜೆಪಿಯವರ ಹಣೆಬರಹ ಗೊತ್ತಾಗಿದೆ. ಈ ರಾಜ್ಯದಲ್ಲಿ ಕಾನೂನು ಇದೆ ಎಂದರೆ ಅದಕ್ಕೆ‌ ಸಿ.ಟಿ‌ ರವಿ ಬಂಧನ ಸಾಕ್ಷಿಯಾಗಿದೆ. ಮೊದಲಿನಿಂದಲೂ ಈ ರೀತಿ ಹೇಳಿಕೆ ನೀಡುವ ಕೆಟ್ಟ ಚಾಳಿ ಸಿ‌.ಟಿ. ರವಿ ಮೇಲೆ ಇದೆ. ಸಂವಿಧಾನ ಮತ್ತು ಮಹಿಳೆಯ ಮೇಲೆ ಅಸಹ್ಯಕರವಾದ ಪದ ಬಳಕೆಯನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಕಠಿಣ ಶಿಕ್ಷೆ ಸಿ.ಟಿ.ರವಿಯವರಿಗೆ ಕೂಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಡಾ. ಅಂಬೇಡ್ಕರ್ ರವರ ಕುರಿತು ಚರ್ಚೆ ಆಗಬಾರದು ಎಂದು ಸಿ.ಟಿ ರವಿ ಆ ರೀತಿ ವರ್ತನೆ ಮಾಡಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. 

'ಮಾರ್ಟಿನ್‌ ಪಾರ್ಟ್‌ 2' ಕತೆ ರೈನೊ ಹೆಸರಿನಲ್ಲೇ ಬರಲಿದೆ: ಧ್ರುವ ಸರ್ಜಾ ಹೇಳಿದ 7 ಕಾರಣಗಳು!

ನಮಗೆಲ್ಲ ಬಾಬಾ ಸಾಹೇಬ ಅಂಬೇಡ್ಕರ್ ರವರೇ ದೇವರು ಎಂದರು. ಬಂಗಾರಪ್ಪ‌ ಅವರು ಬಿಜೆಪಿ ಹೋಗಲಿಲ್ಲ ಎಂದರೆ ಬಿಜೆಪಿಯವರು ಗೆಲ್ಲುತ್ತಿರಲಿಲ್ಲ. ಬಿಜೆಪಿಯವರು ಕ್ರಿಮಿನಲ್ ಚಿಂತನೆವುಳ್ಳವರು. ಇವರದ್ದು ಒಡೆದಾಳುವ ನೀತಿ ಎಂದು ಬಿಜೆಪಿ ವಿರುದ್ಧ ಹರಿ ಹಾಯ್ದರು. ಸಂವಿದಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಇವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ನಂಬರ್ ಒನ್ ಕ್ರಿಮಿನಲ್ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಮಹಾತ್ಮ ಗಾಂದಿ ಹಾಗೂ ಅಂಬೇಡ್ಕರ್ ನಮಗೆ ಎರಡು ಕಣ್ಣುಗಳಿದ್ದಂತೆ. ಆದರೆ ಗಾಂಧಿಯವರನ್ನು ಕೊಂದವರು ಬಿಜೆಪಿ ಅವರಿಗೆ ದೇವರಿಗೆ ಸಮ. ಬಿಜೆಪಿ ಎಂದರೆ ಬ್ರಿಟಿಷ್ ಜನತಾ ಪಾರ್ಟಿ ಎಂದು ವ್ಯಂಗ್ಯವಾಡಿದರು.

ಶಿಕ್ಷಕರ ಸಮಸ್ಯೆ ಕುರಿತು ಸಚಿವರೊಂದಿಗೆ ಚರ್ಚೆ: ಬೆಳಗಾವಿಯ ಸುವರ್ಣ ಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಹಾಗೂ ಶಿಕ್ಷಣ ಆಯುಕ್ತರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಅನುದಾನಿತ ಶಾಲೆಯ ಶಿಕ್ಷಕರ ವೇತನ, ನೇಮಕಾತಿ, ಬಡ್ತಿ (ಟೈಮ್ ಬಾಂಡ್) ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ ಅವರು ಭಾಗವಹಿಸಿ, ನೌಕರರ ಸೇವಾ ಸಮಸ್ಯೆಗಳ ಸಂಬಂಧಿಸಿದಂತೆ ಸಚಿವರಲ್ಲಿ ಚರ್ಚಿಸಿದರು. 

UI ಸಿನಿಮಾ ವಿಮರ್ಶೆ: ಕ್ಷಣಿಕ ಸಂತೋಷಕ್ಕೆ, ಕ್ಷಣಿಕ ಉದ್ವೇಗಕ್ಕೆ.. ಜಗತ್ತಿಗೆ ಹಿಡಿದ ವಿಡಂಬನಾತ್ಮಕ ಕನ್ನಡಿ

ರಾಜ್ಯದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸುವ ಕುರಿತು, ಎಸ್ ಡಿ ಎ ಹಾಗೂ ಅಟೆಂಡರ್ ಹುದ್ದೆಯನ್ನು ತುಂಬಿಕೊಳ್ಳಲು ಅನುಮತಿ ನೀಡುವುದು, ನಿವೃತ್ತಿಯಿಂದ ತೆರವಾಗಿರುವ ಹುದ್ದೆಗಳನ್ನು ತುಂಬುವುದು ಹಾಗೂ ಓಪಿಎಸ್ ಪಿಂಚಣಿ ಸೌಲಭ್ಯ ನೀಡುವುದರ ಕುರಿತಂತೆ ಶಿಕ್ಷಣ ಸಚಿವರ ಗಮನಕ್ಕೆ ತಂದರು. ಸಮಸ್ಯೆಗಳನ್ನು ಆಲಿಸಿದ ಶಿಕ್ಷಣ ಸಚಿವರು ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ವಿ ಸಂಕನೂರ್, ಹನುಮಂತ ನಿರಾಣಿ, ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಎಸ್.ಎಲ್ ಭೋಜೇಗೌಡ ಸೇರಿದಂತೆ ಅನೇಕ ಶಾಸಕರು ಹಾಗೂ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios