‘ರಂಗ​ನಾ​ಯ​ಕಿ’ ಚಿತ್ರದ ನಂತರ ಶ್ರೀನಿ ಮತ್ತು ಅದಿತಿ ಪ್ರಭು​ದೇವ ಮತ್ತೆ ಜತೆ​ಯಾ​ಗು​ತ್ತಿ​ದ್ದಾರೆ. ಬೆಂಗ​ಳೂ​ರಿ​ನ ಶೇಷಾ​ದ್ರಿ​ಪು​ರಂನ​ಲ್ಲಿ​ರುವ ಮಹಾ​ಲಕ್ಷ್ಮೀ ಮಂದಿ​ರ​ದಲ್ಲಿ ಚಿತ್ರಕ್ಕೆ ಅದ್ದೂ​ರಿ​ಯಾಗಿ ಮುಹೂರ್ತ ನಡೆ​ಯಿತು. ಈ ಸಂದ​ರ್ಭ​ದಲ್ಲಿ ಮಾಧ್ಯ​ಮ​ಗಳ ಮುಂದೆ ಬಂದು ಚಿತ್ರ​ತಂಡ ಹೇಳಿಕೊಂಡ ಮಾತುಗಳು ಇಲ್ಲಿವೆ-

1. ಪಕ್ಕಾ ರೊಮ್ಯಾಂಟಿಕ್‌ ಕಾಮಿಡಿ ಕತೆ. ಯಾವುದೇ ಗೊಂದ​ಲ​ಗ​ಳಿ​ಲ್ಲದೆ ನಿರೂ​ಪ​ಣೆ ಮಾಡಿ​ರುವ ಕತೆ ಇದಾ​ಗಿದ್ದು, ಎಲ್ಲ ವರ್ಗದ ಪ್ರೇಕ್ಷ​ಕ​ರಿಗೆ ಮೆಚ್ಚುಗೆ ಆಗ​ಲಿದೆ.

ಶ್ರೀನಿ ಜೊತೆ 'ಓಲ್ಡ್ ಮಾಂಕ್' ಹಿಡಿದ ಅದಿತಿ ಪ್ರಭುದೇವ.!

2. ಚಿತ್ರದ ಹೆಸರು ತುಂಬಾ ಕ್ಯಾಚಿ​ಯಾ​ಗಿದೆ. ‘ಓಲ್ಡ್‌ ಮಾಂಕ್‌’ ಎನ್ನು​ವುದು ಎಲ್ಲ​ರಿಗೂ ಗೊತ್ತಿ​ರುವ ಹೆಸರು. ಎಣ್ಣೆ ಹೆಸ​ರಿನ ಚಿತ್ರ​ದಲ್ಲಿ ಏನು ಹೇಳಕ್ಕೆ ಹೊರ​ಟಿ​ದ್ದೇವೆ ಎಂಬುದು ಚಿತ್ರದ ಕತೆ.

3. ಶಾಪಕ್ಕೆ ಗುರಿ​ಯಾದ ನಾರದ ಭೂಲೋ​ಕಕ್ಕೆ ಬಂದ ಮೇಲೆ ಏನಾ​ಗು​ತ್ತದೆ, ನಾರ​ದನ ಪ್ರೇಮ ಕತೆ​ಯನ್ನು ಈ ಜನ​ರೇ​ಷನ್‌ ಪ್ರೇಮ ಕತೆ​ಗಳ ಜತೆಗೆ ಹೇಳು​ತ್ತಿ​ದ್ದೇವೆ.

4. ಚಿತ್ರದ ನಾಯಕಿ ಅದಿತಿ ಪ್ರಭು​ದೇವ ಅವರು ಇಲ್ಲಿ ತುಂಬಾ ಟ್ರೆಡಿ​ಷ​ನಲ್‌ ಪಾತ್ರ​ದಲ್ಲಿ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ಗ್ಲಾಮ​ರ್‌​ಗಿಂತ ಹೆಚ್ಚಾಗಿ ನಟ​ನೆಗೆ ಮಹತ್ವ ಇರುವ ಪಾತ್ರ ಅವ​ರ​ದು.

ನೀಲಿ ಸೀರೆಯಲ್ಲಿ ಗ್ಲಾಮರಸ್ ಬೊಂಬೆಯಾಗಿದ್ದಾಳೆ 'ಬ್ರಹ್ಮಚಾರಿ' ಹುಡುಗಿ!

5. ಎಸ್‌ ನಾರಾ​ಯಣ್‌, ಅರುಣಾ ಬಾಲ​ರಾಜ್‌ ಸೇರಿ​ದಂತೆ ನೂರಕ್ಕೂ ಹೆಚ್ಚು ಕಲಾ​ವಿ​ದ​ರು ಚಿತ್ರ​ದಲ್ಲಿ ನಟಿ​ಸು​ತ್ತಿ​ದ್ದಾರೆ. ಶ್ರೀಶ ಕೂದ​ವಳ್ಳಿ ಕ್ಯಾಮೆರಾ, ಸೌರಭ್‌ ವೈಭವ್‌ ಸಂಗೀತ ಚಿತ್ರ​ಕ್ಕಿದೆ. ಚಿತ್ರ​ದಲ್ಲಿ ಒಟ್ಟು ಐದು ಹಾಡು​ಗ​ಳಿವೆ.

6. ಎಸ್‌ ನಾರಾ​ಯಣ್‌ ಪಾತ್ರ​ವನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ‘ಇವರು ಎಲ್ಲಕ್ಕೂ ಎಸ್‌ ನಾರಾ​ಯಣ್‌, ಪ್ರೀತಿ ವಿಚಾ​ರಕ್ಕೆ ಬಂದರೆ ನೋ ನಾರಾ​ಯ​ಣ್‌’ ಎನ್ನುವ ಸಂಭಾ​ಷ​ಣೆ​ಗಳು ಬರಿ​ದ್ದು, ಚಿತ್ರದ ಹೈಲೈಟ್‌ ಕೂಡ ಈ ಸಂಭಾ​ಷ​ಣೆ​ಗಳಂತೆ.