ಒಬ್ಬ ನಟನಿಗಾಗಿ ಕಥೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕೆಂಪೇಗೌಡ ಸಿನಿಮಾ ಬಗ್ಗೆ ಸ್ಪಷ್ಟನೆ ಕೊಟ್ಟ ನಾಗಾಭರಣ.  

ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಸಿನಿಮಾಗಳ ಟ್ರೆಂಡ್‌ ನಡೆಯುತ್ತಿದೆ. ಎಲ್ಲಿಯೂ ನೋಡಿರದ ಎಲ್ಲೂ ಓದಿರದ ಮಾಹಿತಿಗಳನ್ನು ವರ್ಷಗಟ್ಟಳೆ ಹುಡುಕಿ ಸಿನಿಮಾ ಮೂಲಕ ಜನರಿಗೆ ವಿಚಾರ ತಿಳಿಸಿ ಮನೋರಂಜನೆ ನೀಡುತ್ತಾರೆ. ಕೆಲವು ದಿನಗಳಿಂದ ಕೆಂಪೇಗೌಡ ಕಥೆಯನ್ನು ತೆರೆ ಮೇಲೆ ತರಲು ನಿರ್ದೇಶಕ ನಾಗಾಭರಣ ಮುಂದಾಗಿದ್ದಾರೆ ಚಿತ್ರಕ್ಕೆ ಯುವ ರಾಜ್‌ನ ನಾಯಕ ಮಾಡಲಿದ್ದಾರೆ ಅನ್ನೋ ಬಿಸಿ ಸುದ್ದಿ ಹಬ್ಬಿದೆ. ಇದರ ಬಗ್ಗೆ ಯುವ ಆಗಲಿ ನಾಗಾಭರಣ ಆಗಲಿ ಎಲ್ಲಿಯೂ ಪೋಸ್ಟ್‌ ಮಾಡಿಲ್ಲ ಹೀಗಾಗಿ ಜನರಲ್ಲಿ ಗೊಂದಲ ಹೆಚ್ಚಾಗಿದೆ. 

ನಾಗಾಭರಣ ಸ್ಪಷ್ಟನೆ:

'ಕೆಂಪೇಗೌಡ ಅವರ ಬಗ್ಗೆ ನಾನು ಸಿನಿಮಾ ಮಾಡುತ್ತಿಲ್ಲ ಆ ರೀತಿ ಯಾವುದೇ ಸಿನಿಮಾ ನಾನು ಕೈಗೆತ್ತಿಕೊಂಡಿಲ್ಲ. ನಾನು ಯಾವುದೇ ನಟನಿಗಾಗಿ ಸಿನಿಮಾ ಕಥೆ ಮಾಡುವುದು ಇಲ್ಲ. ಇಂತಾದೊಂದು ಸುದ್ದಿ ಹರಡಿದ್ದು ಹೇಗೆ ಅನ್ನೋದು ನನಗೆ ಗೊತ್ತಿಲ್ಲ. ಮಾಧ್ಯಮ ಸ್ನೇಹಿತರು ಹೇಳಿದ ಮೇಲೆ ವಿಚಾರ ತಿಳಿಯುತ್ತಿದೆ ಆದರೆ ಇಂತಹ ಯಾವುದೇ ಸಿನಿಮಾ ಆಲೋಚನೆ ಕೂಡ ನಾನು ಮಾಡಿಲ್ಲ' ಎಂದು ಖಾಸಗಿ ಕನ್ನಡ ವೆಬ್‌ ಸೈಟ್‌ಗೆ ನಾಗಾಭರಣ ಸ್ಪಷ್ಟನೆ ಕೊಟ್ಟಿದ್ದಾರೆ. 

ಗುಡ್ ನ್ಯೂಸ್ ಕೊಟ್ಟ ಪ್ರಜ್ವಲ್ ದೇವರಾಜ್; ಹಾರ ಮತ್ತು ಕೇಕ್ ತರಬೇಡಿ ಎಂದು ಮನವಿ!

'ಸಧ್ಯಕ್ಕೆ ಕರ್ನಾಟಕ ಸಂಗೀತಕ್ಕೆ ದೊಡ್ಡ ಮಟ್ಟದಲ್ಲಿ ಕೊಡುವೆ ನೀಡಿದ ಬೆಂಗಳೂರು ನಾಗರತ್ನಮ್ಮ ಅವರ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದೇನೆ. ಆ ಸಿನಿಮಾ ಬಗ್ಗೆ ಸಂಶೋಧನೆ, ಕಥೆ ಚಿತ್ರಕಥೆ ಸಿದ್ಧ ಪಡಿಸುವೆ ಕೆಲಸಗಳು ಪ್ರಗತಿಯಲ್ಲಿದೆ. ಶೀಘ್ರದಲ್ಲಿ ನಾಯಕಿ ಯಾರು? ಬೇರೆ ಯಾರೆಲ್ಲಾ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ, ತಂತ್ರಜ್ಞರು ಗುಂಪು ಬಗ್ಗೆ ಮಾಹಿತಿ ನೀಡುತ್ತೇನೆ' ಎಂದು ನಾಗಾಭರಣ ಹೇಳಿದ್ದಾರೆ. 

2 ತಿಂಗಳಿನಲ್ಲಿ ಸಿಕ್ಕಾಪಟ್ಟೆ ದಪ್ಪಗಾದ 'ಅಮೃತಾಧಾರೆ' ರಾಜೇಶ್; ತಯಾರಿ ಹೀಗಿತ್ತು!

ಈ ಮೂಲಕ ಕೆಂಪೇಗೌಡ ಸಿನಿಮಾ ಗಾಸಿಪ್ ಬಗ್ಗೆ ಸ್ಪಷ್ಟನೆ ಸಿಕ್ಕಿದೆ ಆದರೆ ಈ ಟೈಟಲ್ ಮತ್ತು ಕಥೆ ಯಾರ ಪಾಲಾಗುತ್ತದೆ ಎಂದು ಕಾದು ನೋಡಬೇಕಿದೆ. ಸದ್ಯಕ್ಕೆ ಯುವ ರಾಜ್‌ಕುಮಾರ್ ಕೂಡ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ 'ಯುವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಂತಾರ ಲೀಲಾ ಉರ್ಫ್ ಸಪ್ತಮಿ ಗೌಡ ನಾಯಕಿಯಾಗಿರುವ ಈ ಸಿನಿಮಾ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇದಾದ ಮೇಲೆ ಪಿಆರ್‌ಕೆ ಪ್ರೋಡಕ್ಷನ್ ಮತ್ತು ಗೀತಾ ಪಿಕ್ಚರ್ಸ್‌ನಲ್ಲೂ ಯುವ ನಟಿಸಬಹುದು.