1986ರಲ್ಲಿ ಡಾ.ರಾಜ್ ಮ್ಯೂಸಿಕ್ ಕಾನ್ಸರ್ಟ್ ಟಿಕೆಟ್ ದರ ಎಷ್ಟಿತ್ತು? ಅಮೂಲ್ಯ ಫೋಟೋ ವೈರಲ್!

ಗಾಯಕ-ಗಾಯಕಿಯರ ಮ್ಯೂಸಿಕ್ ಕಾನ್ಸರ್ಟ್ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಆದರೆ ಈ ರೀತಿಯ ಸಂಗೀತ ರಸ ಸಂಜೆಗಳನ್ನು 1980-90ರ ದಶಕದಲ್ಲಿ ಡಾ. ರಾಜ್‌ಕುಮಾರ್ ಮಾಡಿ ಜನಪ್ರಿಯತೆ ಗಳಿಸಿದ್ದರು. 1986ರಲ್ಲಿ ಡಾ.ರಾಜ್‌ಕುಮಾರ್ ಸಂಗೀತ ರಸ ಸಂಜೆ ಟಿಕೆಟ್ ದರ ಎಷ್ಟಿತ್ತು?

Nostalgia Dr Rajkumar 1986 music concert pamphlet reveals ticket price ckm

ಬೆಂಗಳೂರು(ಜ.05) ವಿಶ್ವದಲ್ಲೇ ಅತೀ ಹೆಚ್ಚು ಟಿಕೆಟ್ ದರ ಹೊಂದಿದ ಕಾರ್ಯಕ್ರಮ ಪೈಕಿ ಮ್ಯೂಸಿಕ್ ಕಾನ್ಸರ್ಟ್ ಒಂದು. ಇಷ್ಟೇ ಅಲ್ಲ ಜನರು ಇದೀಗ ಮ್ಯೂಸಿಕ್ ಕಲ್ಚರ್‌ ಅಪ್ಪಿಕೊಂಡಿದ್ದಾರೆ. ಹೀಗಾಗಿ ಬಹುತೇಕ ಮ್ಯೂಸಿಕ್ ಕಾನ್ಸರ್ಟ್ ಅಥವಾ ಸಂಗೀತ ರಸ ಸಂಜೆ ತುಂಬಿ ತುಳುಕುತ್ತದೆ. ಇದೀಗ ಹಲವು ಗಾಯಕರು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸುತ್ತಿದ್ದಾರೆ. ಆದರೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್‌ಕುಮಾರ್ 80-90ರ ದಶಕದಲ್ಲಿ ಸಂಗೀತ ರಸ ಸಂಜೆ ಮೂಲಕ ಮೋಡಿ ಮಾಡಿದ್ದರು. ಡಾ.ರಾಜ್‌ಕುಮಾರ್ ಮ್ಯೂಸಿಕ್ ಕಾನ್ಸರ್ಟ್‌ಗೆ ಜನಸಾಗರವೇ ಹರಿದು ಬರುತ್ತಿತ್ತು. ಹೀಗೆ 1986ರಲ್ಲಿ ಡಾ.ರಾಜ್‌ಕುಮಾರ್ ನಡೆಸಿಕೊಟ್ಟ ಸಂಗೀತ ರಸ ಸಂಜೆ ಕಾರ್ಯಕ್ರಮದ ಜಾಹೀರಾತೊಂದು ವೈರಲ್ ಆಗಿದೆ. ಈ ಜಾಹೀರಾತಿನಲ್ಲಿ ಡಾ.ರಾಜ್ ಕುಮಾರ್ ಮ್ಯೂಸಿಕ್ ಕಾನ್ಸರ್ಟ್ ಟಿಕೆಟ್ ದರವೂ ಬಹಿರಂಗವಾಗಿದೆ.

1986ರ ನವೆಂಬರ್ ತಿಂಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 29ನೇ ತಾರಿಕು ಕಾರ್ಯಕ್ರಮ ನಡೆದಿತ್ತು. ಇಂದಿನ ವೀಕೆಂಡ್ ಮ್ಯೂಸಿಕ್ ಕಾನ್ಸರ್ಟ್ ಹಲವು ದಶಗಳ ಮೊದಲು ಡಾ.ರಾಜ್‌ಕುಮಾರ್ ಸೃಷ್ಟಿಸಿದ ಟ್ರೆಂಡ್. ಕಾರಣ ನವೆಂಬರ್ 29 ರಂದು ಶನಿವಾರ ಈ ಕಾರ್ಯಕ್ರಮ ನಡೆದಿತ್ತು. ಕಬ್ಬನ್ ಪಾರ್ಟ್ ಟೆನ್ನಿಸ್ ಕ್ರೀಡಾಂಗಣದಲ್ಲಿ ಡಾ.ರಾಜ್‌ಕುಮಾರ್ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಬೂಕನಕೆರೆಗೆ ಹೋಗುತ್ತಿದ್ದಾಗ ಕಾರು ನಿಲ್ಲಿಸಿ ಓಡಿ ಹೋಗಿದ್ದೇಕೆ ಡಾ ರಾಜ್‌ಕುಮಾರ್‌?

ಮಹಾಯೋಗ ಕ್ಷೇತ್ರ ಕಟ್ಟಡ ಸಹಾಯಾರ್ಥಕ್ಕಾಗಿ ಈ ಸಂಗೀತ ಕಾರ್ಯಕ್ರಮವನ್ನು ಡಾ.ರಾಜ್‌ಕುಮಾರ್ ನಡೆಸಿಕೊಟ್ಟಿದ್ದರು. ರಾಜ್ ಸಂಗೀತ ಸಂಜೆ ಕಾರ್ಯಕ್ರಮದ ಟಿಕೆಟ್ 30 ರೂಪಾಯಿಯಿಂದ ಆರಂಭಗೊಂಡು ಗರಿಷ್ಠ 200 ರೂಪಾಯಿವರೆಗೆ ನಿಗಧಿಪಡಿಸಲಾಗಿತ್ತು. 30 ರೂಪಾಯಿ, 50 ರೂಪಾಯಿ, 75 ರೂಪಾಯಿ, 100 ರೂಪಾಯಿ ಹಾಗೂ 200 ರೂಪಾಯಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಡಾ.ರಾಜ್‌ಕುಮಾರ್ ಪ್ರತಿ ಕಾರ್ಯಕ್ರಮದಂತೆ ಈ ಸಂಗೀತ ಕಾರ್ಯಕ್ರಮದ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಇಷ್ಟೇ ಅಲ್ಲ ಟಿಕೆಟ್‌ಗಾಗಿ ಭಾರಿ ಡಿಮ್ಯಾಂಡ್ ಕೂಡ ವ್ಯಕ್ತವಾಗಿತ್ತು.

ಈ ಹಳೇ ಪಾಂಪ್ಲೆಟ್ ಇದೀಗ ವೈರಲ್ ಆಗುತ್ತಿದೆ. ಹಲವರು ಕಮೆಂಟ್ ಮಾಡಿದ್ದಾರೆ. ಅಂದಿನ ಸಮಯಕ್ಕೆ ಟಿಕೆಟ್ ದರ ದುಬಾರಿಯಾಗಿತ್ತು. ಇದೀಗ ಅಣ್ಣಾವ್ರ ಸಂಗೀತ ರಸೆ ಸಂಜೆ ಕಾರ್ಯಕ್ರಮವಿದ್ದರೆ ಟಿಕೆಟ್ ಬೆಲೆ ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಟಿಕೆಟ್ ಬೆಲೆ ಕುರಿತು ತಲೆಕೆಡಿಸಿಕೊಳ್ಳಬೇಡಿ, ಆದರೆ ಅಂದು ಮೇರುನಟ, ಗಾಯಕನೊಬ್ಬ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟ ಕಾರಣ ಹಾಗೂ ಉದ್ದೇಶ ಗಮನಿಸಿ. ಈ ರೀತಿಯ ಉದ್ದೇಶವಿಟ್ಟುಕೊಂಡು ಈಗನ ಯಾವುದೇ ಒಬ್ಬ ಸಂಗೀತಕಾರ ಮಾಡಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಈ ಹಳೇ ಪಾಂಪ್ಲೆಟ್ ಫೋಟೋವನ್ನು ಅಭಿಷೇಕ್(ಕನ್ನಡ ದೇಶ ಗೆಲ್ಗೆ) ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಲವರು ಹಳೇ ಸಂಗೀತ ಕಾರ್ಯಕ್ರಮದ, ಡಾ.ರಾಜ್‌ಕುಮಾರ್ ಸಿನಿಮಾ ನೋಡಿ, ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಅಣ್ಣಾವ್ರ ಹಾಡಿಗೆ ನಾನು ಟಿಕೆಟ್ ಬೆಲೆ ನೋಡುವುದಿಲ್ಲ. ಅವರ ಸುಮಧುರ ಕಂಠ, ನಡೆ ನುಡಿಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.

 

 

ಡಾ.ರಾಜ್‌ಕುಮಾರ್ ಭಾರತ ಕಂಡ ಅತ್ಯಂತ ಮೇರು ನಟ. ಹೀಗಾಗಿ ಬಾಲಿವುಡ್‌ನಿಂದ ಹಿಡಿದು ಯಾವುದೇ ವುಡ್‌ಗೆ ತೆರಳಿದರೂ ಡಾ.ರಾಜ್ ಎಂದ ತಕ್ಷಣ ಎಲ್ಲಾ ನಟ ನಟಿಯರು ಗೌರವ ನೀಡುತ್ತಾರೆ. ಡಾ.ರಾಜ್ ಹಾದಿಯಲ್ಲಿ ನಡೆಯಲು ಪ್ರಯತ್ನಿಸುತ್ತಾರೆ. 5 ದಶಕಗಳ ಕಾಲ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಚಿತ್ರಗಳು ಸೂಪರ್ ಹಿಟ್. ಪುರಾಣದ ಪಾತ್ರವಿರಬಹುದು, ಜೇಮ್ಸ್ ಬಾಂಡ್ ಆಗಿರಬಹುದು, ಲವರ್ ಬಾಯ್, ಪೊಲೀಸ್ ಅಧಿಕಾರಿ ಸೇರಿದಂತೆ ಯಾವುದೇ ಪಾತ್ರದಲ್ಲೂ ಮಿಂಚಿದ ರಾಜ್‌ಕುಮಾರ್ ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವು ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಅಂದು ಡಾ ರಾಜ್‌ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಖ್ಯಾತ ನಿರ್ದೇಶಕರು!

Latest Videos
Follow Us:
Download App:
  • android
  • ios