ಅಂದು ಡಾ ರಾಜ್ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಖ್ಯಾತ ನಿರ್ದೇಶಕರು!
ರಾಜ್‌ಕುಮಾರ್ ಇಟ್ಕೊಂಡು ನಾವೆಲ್ಲಾ ಸೇರಿ ದೊಡ್ಡ ಹೋರಾಟ ಮಾಡಿದ್ವಿ.. ಅಂದು ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದು ಇದೇ ಸಿದ್ದರಾಮಯ್ಯ ಅವ್ರು ಫೈನಾನ್ಸ್ ಮಿನಿಷ್ಟರ್ ಆಗಿದ್ರು.. ಕೊನೆಗೆ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆ ಆಗಬೇಕು ಅಂದ್ರೆ ಅಲ್ಲಿ ಬಿಡುಗಡೆ ಆಗಿ..
ನಾನು, ವಿಷ್ಣುವರ್ಧನ್ (Vishnuvardhan) ಹಾಗೂ ಅಂಬರೀಷ್ (Ambareesh) ಇಂಥವ್ರೆಲ್ಲಾ ಸುಮಾರು 30-35 ವರ್ಷ ಒಟ್ಟಿಗೇ ಕೆಲಸ ಮಾಡಿದೀವಿ. ಆದ್ರೆ ಗೊತ್ತಾಗದೇ ಅಷ್ಟು ವರ್ಷ ಕಳೆದೇಹೋಯ್ತು.. ನಾವೆಲ್ಲಾ ಸೇರಿ ಸುಮಾರು 50 ಸಿನಿಮಾಗಳನ್ನು ಮಾಡಿದೀವಿ.. ಅದೆಷ್ಟೊ ಸಾರಿ, ನಾನು ನೊಡಿದೀನಿ, ವಿಷ್ಣುವರ್ಧನ್ ಅವರು ಅವರ ಸಿನಿಮಾ ನಿರ್ಮಾಪಕರಿಗೆ ಲಾಸ್ ಆದಾಗ ದುಡ್ಡು ತಗೊಳ್ಳದೇ ಮುಂದಿನ ಸಿನಿಮಾ ಮಾಡಿದಾನೆ, ನಮಗೊತ್ತು ಅವೆಲ್ಲಾ. ಆದ್ರೆ ಅವ್ನು ಅದನ್ನೆಲ್ಲಾ ಎಲ್ಲೂ ಹೇಳಿಕೊಳ್ತಾ ಇರ್ಲಿಲ್ಲ ಅಷ್ಟೇ..
ಅಂಬರೀಷ್ ಕೂಡ ಅಷ್ಟೇ.. ಎಷ್ಟೋ ಜನ್ರಿಗೆ ಸಿನಿಮಾ ಮುಗೊಯೋ ಹೊತ್ತಿಗೆ ದುಡ್ಡ ಇರ್ತಾ ಇರ್ಲಿಲ್ಲ. ಆಗ ಸ್ವತಃ ಅಂಬರೀಷ್ ದುಡ್ಡ ಕೊಡ್ತಾ ಇದ್ದ.. ಅವ್ರು ಒಂಥರಾ ಫೈನಾನ್ಸಿಯರ್ ಥರ ಇದ್ದ.. ಅಂದ್ರೆ ಅಷ್ಟು ಕಮಿಟ್‌ಮೆಂಟ್ ಇತ್ತು ಅವ್ರಿಗೆ ತಮ್ಮ ಕೆಲಸ ಮೇಲೆ, ಸಿನಿಮಾ ಮೇಲೆ ಅಷ್ಟು ಪ್ರೀತಿ ಇತ್ತು.. 'ಇದು ನಮ್ಮ ಸಿನಿಮಾ, ಗೆದ್ದರೆ ನಮಗೆ ಇನ್ನೂ ಸ್ವಲ್ಪ ದಿನ ಬೇಡಿಕೆ ಇರುತ್ತೆ.. ಅದ್ರಿಂದ ಇನ್ನೊಂದು ಸಿನಿಮಾ ಸಿಗುತ್ತೆ.. ನಾವು ಒಂದು ಸಿನಿಮಾ ಮಾಡಿದ್ರೆ ನಾಲ್ಕಾರು ಜನ ಟೆಕ್ನಿಷಿಯನ್‌ಗೆ ಕೆಲಸ ಸಿಗುತ್ತೆ.. ಸಾಕಷ್ಟು ಜನ ನೆಮ್ಮದಿಯಿಂದ ಊಟ ಮಾಡ್ತಾರೆ' ಹೀಗೆ ದೊಡ್ಡ ಮನಸ್ಸಿನಿಂದ ಯೋಚಿಸ್ತಾ ಇದ್ರು..
ಅಣ್ಣಾವ್ರ ಕಟ್ಟುಮಸ್ತಾದ ದೇಹ ನೋಡಬೇಕೆ? AI ಫೋಟೋ ನೋಡಿದ್ರೆ ಶಾಕ್ ಆಗ್ತೀರಾ!
ಮಾನವೀಯತೆಯಿಂದ ಅವ್ರೆಲ್ಲಾ ಯೋಚಿಸ್ತಾ ಇದ್ರು.. ಆ ಕಾರಣಕ್ಕೆ ಅಂದು ಸಿನಿಮಾ ವೃತ್ತಿ ಎಂಬುದು ಶೋಕಿ ಆಗಿರಲಿಲ್ಲ. ಅದೊಂದು ವೃತ್ತಿ, ಹಾಗೂ ನಾಲ್ಕಾರು ಜನಕ್ಕೆ ಉಪಯೋಗ ಆಗುವಂತ ಕೆಲಸ ಮಾಡಲು ಅವಕಾಶ ಅಂದ್ಕೊತಾ ಇದ್ದರು ಅವ್ರೆಲ್ಲ.. ಇನ್ನು, ಯಾವತ್ತೇ ಕರೆದ್ರೂ ಬರೋದಕ್ಕೆ ಅಂತ ಇಲ್ಲಿ ಒಬ್ರು ಮಹಾನ್ ಲೀಡರ್ ಇದ್ರು, ಅವ್ರು (Dr Rajkumar) ಡಾ ರಾಜ್‌ಕುಮಾರ್. ನಮ್ಗೆ ಸಿನಿಮಾರಂಗದಿಂದ ಒಳ್ಳೇದು ಆಗ್ಬೇಕು, ಸರ್ಕಾರದಿಂದ ಒಳ್ಳೇದು ಆಗ್ಬೇಕು, ಥಿಯೇಟರ್ ಮಾಲೀಕರಿಂದ ಒಳ್ಳೇದು ಆಗ್ಬೇಕು ಅಂದ್ರೆ ನಮ್ ಜೊತೆ ಸದಾ ನಿಲ್ತಾ ಇದ್ದಿದ್ದು ಡಾ ರಾಜ್‌ಕುಮಾರ್ ಅವ್ರು. ಅವ್ರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ.
ಈ ಬಾಡಿಗೆ ಸಿಸ್ಟಮ್ ಹೋಗ್ಬೇಕು, ಪರ್ಸಂಟೇಜ್ ಸಿಸ್ಟಮ್ ಬರ್ಬೇಕು.. ಹೀಗೆ ಹಲವಾರು ಸಮಸ್ಯೆಗಳಿದ್ದಾಗ ನಮ್ಗೆ ಲೀಡರ್ ಅಂತ ಇದ್ದಿದ್ದು ಡಾ ರಾಜ್‌ಕುಮಾರ್ ಅವ್ರೇ ಆಗಿತ್ತು. ಇನ್ನು, ಆವತ್ತು ಅವ್ರೆಲ್ಲರ ಸಂಬಂಧ ಹೇಗಿತ್ತು ಅಂದ್ರೆ, ಡಾ ರಾಜ್‌ಕುಮಾರ್ ಬರ್ತಾರೆ ಅಂದ್ರೆ, ವಿಷ್ಣು ಹಾಗೂ ಅಂಬಿ ಹೇಳಿಸ್ಕೊತಾ ಇರ್ಲಿಲ್ಲ, ಅವ್ರೇ ತಕ್ಷಣ ಬಂದುಬಿಡೋರು.. ಯಾಕೆ ಅಂದ್ರೆ, ಅವ್ರಿಗೆ ಗೊತ್ತಿತ್ತು, ಇವ್ರೆಲ್ಲಾ ಸೇರಿ ಯಾವುದೋ ಒಂದು ಸರಿಯಾದ ಕಾರಣಕ್ಕೆ, ಸರಿಯಾದ ನಿರ್ಧಾರಕ್ಕೆ ಏನೋ ಮಾಡ್ತಾ ಇದಾರೆ ಅಂತ.. ಇವತ್ತು ಅವೆಲ್ಲಾ ಮಿಸ್ ಆಗೋಗಿದೆ. ಸಂಬಂಧ ಸರಿ ಇಲ್ಲ, ಬರೀ ನಟನೆ ಅಂದ್ರೆ ನಟನೆ ಅಷ್ಟೇ, ಚಿತ್ರರಂಗದ ಕಾಳಜಿ ಯಾರಿಗೂ ಇಲ್ಲ..
ಅಂದು ಪರಭಾಷಾ ಚಿತ್ರಗಳು ನಮ್ಮ ಕನ್ನಡ ನಾಡಿನಲ್ಲಿ ಬಿಡುಗಡೆ ಆಗ್ಭೆಕು ಅಂದ್ರೆ ಕನಿಷ್ಠ ಅಲ್ಲಿ ಬಿಡುಗಡೆ ಆಗಿ ಏಳು ವಾರಗಳಾದ್ರೂ ಆಗಿರ್ಬೇಕು ಅನ್ನೋ ರೂಲ್ಸ್ ತರೋಕೆ ಟ್ರೈ ಮಾಡಿದ್ವಿ.. ಹಾಗೆ ಆಗೋದಕ್ಕೆ ರಾಜ್‌ಕುಮಾರ್ ಇಟ್ಕೊಂಡು ನಾವೆಲ್ಲಾ ಸೇರಿ ದೊಡ್ಡ ಹೋರಾಟ ಮಾಡಿದ್ವಿ.. ಅಂದು ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದು ಇದೇ ಸಿದ್ದರಾಮಯ್ಯ ಅವ್ರು ಫೈನಾನ್ಸ್ ಮಿನಿಷ್ಟರ್ ಆಗಿದ್ರು.. ಕೊನೆಗೆ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆ ಆಗಬೇಕು ಅಂದ್ರೆ ಅಲ್ಲಿ ಬಿಡುಗಡೆ ಆಗಿ ನಾಲ್ಕು ವಾರಗಳು ಕಳೆದಿರಬೇಕು ಎಂಬ ರೂಲ್ಸ್ ಜಾರಿಗೆ ಬಂದಿತ್ತು.
ಕುಡ್ಸು ನನ್ ಮಗ್ನಿಗೆ ಹಾಲು, ಹಂಗಾದ್ರೂ ಬೆಳ್ಳಗಾಗ್ತಾನೇನೋ ಅಂದಿದ್ರಂತೆ ಡಾ ರಾಜ್!
ಆದರೆ, ನಮ್ಮವರೇ ನಮಗೆ ಶತ್ರುಗಳು ಎಂಬಂತೆ, ಯಾರೋ ನಮ್ಮವರೇ ಹೋಗಿ ಸುಪ್ರೀಂ ಕೋರ್ಟ್‌ನಲ್ಲಿ ಅದರ ವಿರುದ್ಧ ಹೋಗಿ ಅಲ್ಲಿಂದ ಸ್ಟೇ ಆರ್ಡರ್ ತಂದ್ಬಿಟ್ಟರು. ಹೀಗೆ ಅಂದು ಪರಭಾಷಾ ಹಾವಳಿಯಿಂದ ಕನ್ನಡ ಚಿತ್ರರಂಗ ನರಳಿ ನಲುಗದಂತೆ ಮಾಡಲು ಯೋಚನೆ ಮಾಡಿ ಯೋಜನೆ ಜಾರಿಗೆ ಎಲ್ಲ ಪ್ರಯತ್ನ ಮಾಡಲಾಗಿತ್ತು. ಆದರೆ, ಡಾ ರಾಜ್ ನೇತೃತ್ವದಲ್ಲಿ ಅಂದು ನಡೆದ ಈ ಯುದ್ಧದಲ್ಲಿ ಡಾ ರಾಜ್‌ಕುಮಾರ್ ಅವರಿಗೇ ನಮ್ಮವರೇ ಕೆಲವರು ಚೂರಿ ಹಾಕಿಬಿಟ್ಟರು' ಎಂದಿದ್ದಾರೆ ವೇದಿಕೆಯೊಂದರಲ್ಲಿ ಕನ್ನಡದ ಖ್ಯಾತ ನಿರ್ದೇಶಕರಾದ ಎಸ್‌ವಿ ರಾಜೇಂದ್ರ ಸಿಂಗ್ ಬಾಬು.