ಅಪ್ಪ ನಾನು ಒಂದು ಟೀಂ ಯಾರೂ ಇಲ್ಲ; ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಸಂಪರ್ಕ ಮಾಡೋಕೆ ಇಲ್ಲಿದೆ ಅವಕಾಶ!
ಫಯರ್ ಫ್ಲೈ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿವಿ. ಚಿತ್ರ ಮುಹೂರ್ತದಲ್ಲಿ ಭಾಗಿಯಾದ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿ ಈಗಾಗಲೆ ಒಂದು ಸೀರಿಯಲ್ ಮೂರು ವೆಬ್ ಸೀರಿಸ್ ಮಾಡಿದ್ದಾರೆ. ಈಗ ಮತ್ತೊಂದು ಹೊಸ ತಂಡದ ಜೊತೆ ಸೇರಿ ಫಯರ್ ಫ್ಲೈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಫಸ್ಟ್ ಕ್ಲಾಪ್ ಮಾಡುವ ಮೂಲಕ ಗೀತ ಶಿವಣ್ಣ ಶುಭ ಕೋರಿದರು. ಆನಂತರ ಸಿನಿಮಾ ಹೇಗಿದೆ, ಯಾವ ರೀತಿ ಕಥೆ ಇಷ್ಟ ಆಗುತ್ತದೆ, ಹೇಗೆ ಸಂಪರ್ಕ ಮಾಡಬೇಕು, ತಮ್ಮ ನಿರ್ಮಾಣ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎಂದು ನಿವೇದಿತಾ ಹಂಚಿಕೊಂಡಿದ್ದಾರೆ.
'ಚಿತ್ರರಂಗಕ್ಕೆ ಕಾಲಿಡುವಾಗ ಒಳ್ಳೆ ನಿರ್ಮಾಪಕಿಯಾಗಿ ಒಳ್ಳೆ ಕಥೆಗಳನ್ನು ಸೆಲೆಕ್ಟ್ ಮಾಡಿ ಒಳ್ಲೆ ಸಿನಿಮಾ ಅಥವಾ ಒಳ್ಳೆ ವೆಬ್ ಸೀರಿಸ್ ಮಾಡಬೇಕು ಅನ್ನೋ ಪ್ಲಾನ್ ಇದೆ. ನಟಿಯಾಗಬೇಕು ಅನ್ನೋ ಆಸೆ ಇಲ್ಲ ಸದ್ಯಕ್ಕೆ ಜನರಿಗೆ ಒಳ್ಳೆ ಕಂಟೆಂಟ್ ಕೊಡಬೇಕು. ನನ್ನ ಸಂಪರ್ಕ ಮಾಡುವವರು ಯಾವ ಕಥೆ ಬೇಕಿದ್ದರೂ ತರಬಹುದು ಇದೇ ರೀತಿ ಇರಬೇಕು ಅನ್ನೋದು ಏನೋ ಇಲ್ಲ ಆದರೆ ಡಿಫರೆಂಟ್ ಆಗಿರಬೇಕು ಎಲ್ಲರೂ ಮಾಡಿದ ಕಥೆ ಆಗಿರಬಾರದು..ವಿಭಿನ್ನವಾಗಿ ಜನರಿಗೆ ತೋರಿಸಬೇಕು. ನನ್ನನ್ನು ಸಂಪರ್ಕ ಮಾಡಲು ಅಫೇಶಿಯಲ್ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಎಲ್ಲಾ ಮಾಹಿತಿ ಹಾಕಿದ್ದೀವಿ. ಹೊಸ ಕಲಾವಿದರನ್ನು ಬರ ಮಾಡಿಕೊಳ್ಳುತ್ತಿದ್ದೀವಿ ಇತ್ತೀಚಿಗೆ ಕಲಾವಿದರು ಬೇಕು ಎಂದು ಪೋಸ್ಟ್ ಕೂಡ ಹಾಕಿದ್ದೆ' ಎಂದು ನಿವೇದಿತಾ ಮಾತನಾಡಿದ್ದಾರೆ.
ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ನಿರ್ಮಾಪಕಿ; ಹೇಗಿದ್ದಾರೆ ನೋಡಿ!
'ನಿರ್ಮಾಪಕಿಯಾಗಿ ನನ್ನ ತಂದೆಯನ್ನು ಹೀಗೆ ತೋರಿಸಬೇಕು ಹಾಗೆ ತೋರಿಸಬೇಕು ಅಂತ ತುಂಬಾ ಸಲ ಯೋಚನೆ ಮಾಡಿರುವೆ ಅದರಲ್ಲೂ ಯಾವುದಾದರೂ ವೆಬ್ ಸೀರಿಸ್ ಅಥವಾ ಇಂಗ್ಲಿಷ್ ಸಿನಿಮಾ ನೋಡಿದಾಗ ಅಪ್ಪ ಈ ರೀತಿ ಮಾಡಬೇಕು ಅನಿಸುತ್ತದೆ. ಸ್ವಲ್ಪ ಕಥೆಗಳು ನನ್ನ ತಲೆಯಲ್ಲಿದೆ ನೋಡೋಣ ಹೇಗೆ ಮುಂದುವರೆಯುವುದು ಎಂದು. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಓಟಿಟಿಯಲ್ಲಿ ಸಿನಿಮಾ ಬರುತ್ತದೆ ಎಂದು ಕಾಯಬೇಡಿ ಓಟಿಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಜಾಗಬೇಕು ಎರಡು ಮೂರುವರ್ಷಗಳಿಂದ ನಾನು ಕಾಯುತ್ತಿರುವೆ' ಎಂದು ನಿವೇದಿತಾ ಹೇಳಿದ್ದಾರೆ.
'ಈಗ ನಿರ್ಮಾಣ ಮಾಡುತ್ತಿರುವ ಸಿನಿಮಾ ಹೆಸರು ಫಯರ್‌ಫ್ಲೈ ಎಂದು. ಇದೊಂದು ಕಮರ್ಷಿಯಲ್ ಆರ್ಟಿಸ್ಟಿಕ್ ಸಿನಿಮಾ ಹೊಸ ರೀತಿ ತೋರಿಸುವ ಪ್ರಯತ್ನ ನಡೆಯುತ್ತಿದೆ ವಂಶಿ ನಿರ್ದೇಶನ ಮಾಡುತ್ತಿದ್ದಾರೆ. ಆಗಸ್ಟ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಬೇಕು ಇನ್ನಿತರ ಕಲಾವಿದರನ್ನು ಹುಡುಕುತ್ತಿದ್ದೀವಿ ಸ್ವಲ್ಪ ಎಕ್ಸಪರಿಮೆಂಟ್ ಮಾಡುತ್ತಿರುವೆ. ನಾನು ಸಿನಿಮಾ ಮತ್ತು ವೆಬ್ ಸೀರಿಸ್ ಜಾಸ್ತಿ ನೋಡುವ ಕಾರಣ ಕಥೆ ಮೇಲೆ ಒಪ್ಪಿಕೊಳ್ಳುವೆ ಒಳ್ಳೆ ಕಲಾವಿದರಾಗಲಿ ಹೊಸ ಕಥೆಯಾಗಿರಲಿ ಕಥೆ ಮುಖ್ಯ. ನಮ್ಮ ನಿರ್ಮಾಣ ತಂಡದಲ್ಲಿ ಅಪ್ಪ ಮತ್ತು ನಾನು ಇಬ್ಬರೇ ಇರುವುದು. ನಾನು ಮೊದಲು ಕಥೆ ಕೇಳುವುದು ನನಗೆ ಇಷ್ಟ ಆದ್ಮೇಲೆ ಅಪ್ಪ ಕೇಳುತ್ತಾರೆ ಆನಂತರ ಒಪ್ಪಿಕೊಳ್ಳುತ್ತೀವಿ. ಪಿಆರ್‌ಕೆ ಸಂಸ್ಥೆ ನನಗೆ ಪ್ರೇರಣೆ ಅವರು ಆನ್‌ಲೈನ್‌ನಲ್ಲಿ ಒಳ್ಳೆ ಕಥೆಗಳನ್ನು ಕೊಟ್ಟರು ಹೀಗಾಗಿ ಅವರ ದಾರಿಯಲ್ಲಿ ನಡೆಯುತ್ತಿರುವೆ' ಎಂದಿದ್ದಾರೆ ನಿವೇದಿತಾ.
'ಫಯರ್‌ಫ್ಲೈ ಒಂದು ಅರ್ಬನ್ ಆರ್ಟಿಸ್ಟಿಕ್ ಸಿನಿಮಾ ಕಮರ್ಷಿಯಲ್ ಸಿನಿಮಾ ಪ್ರತಿಯೊಬ್ಬರಿಗೂ ಕಥೆ ಇಷ್ಟವಾಗುತ್ತದೆ. ನಾನು ಮೊದಲು ಕಥೆ ಕೇಳುವುದು ನನಗೆ ಇಷ್ಟ ಆಗಿದೆ ಆನಂತರ ತಂದೆಗೂ ಇಷ್ಟ ಆಗಿದೆ. ತಂದೆ ತಾಯಿ ಅಜ್ಜಿ ನನಗೆ ಪ್ರೇರಣ ಹೀಗಾಗಿ ಒಳ್ಳೆ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡಬೇಕು ಅನ್ನೋ ಆಸೆ ತುಂಬಾ ಇದೆ. ನಿರ್ಮಾಪಕಿಯಾಗಿರುವುದಕ್ಕೆ ಖುಷಿಯಾಗಿರುವ ಒಳ್ಳೆ ನಿರ್ದೇಶಕರು ಒಳ್ಳೆ ತಂಡ ನನಗೆ ಸಿಗುತ್ತಿದ್ದಾರೆ ನನ್ನ ಜರ್ನಿ ಚೆನ್ನಾಗಿದೆ ಒಂದು ಸೀರಿಯಲ್ ಆನಂತರ ಮೂರು ವೆಬ್ ಸೀರಿಸ್ ಮಾಡಿರುವೆ ಖುಷಿ ಇದೆ. ತುಂಬಾ ಒಳ್ಳೆ ಕಲಾವಿದರು ಇದ್ದಾರೆ ಹೀಗಾಗಿ ಇನ್ನು ಹೆಚ್ಚಿಗೆ ಸಿನಿಮಾ ಮಾಡಬೇಕು' ಎಂದು ನಿವೇದಿತಾ ಹೇಳಿದ್ದಾರೆ.