ಫೈಟ್ ನೋಡಿ ನಾನು ಸುದೀಪ್ ಅಚ್ಚರಿ ಪಟ್ವಿ; 'ಸೂಪರ್‌ಸ್ಟಾರ್' ನಿರಂಜನ್ ಹೊಗಳಿದ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರನ ಮಗ ನಿರಂಜನ್ ಸುಧೀಂದ್ರ ನಟನೆಯ ‘ಸೂಪರ್‌ಸ್ಟಾರ್’ ಸಿನಿಮಾದ ಹೊಸ ಟೀಸರ್ ಬಿಡುಗಡೆಯಾಗಿದೆ. ವಿಶೇಷ ಎಂದರೆ ಈ ಸಿನಿಮಾ 5 ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಟೀಸರ್ ರಿಲೀಸ್ ಸಂದರ್ಭದಲ್ಲಿ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರನ ಮಗ ನಿರಂಜನ್ ಸುಧೀಂದ್ರ ನಟನೆಯ ‘ಸೂಪರ್‌ಸ್ಟಾರ್’ ಸಿನಿಮಾದ ಹೊಸ ಟೀಸರ್ ಬಿಡುಗಡೆಯಾಗಿದೆ. ನಿರಂಜನ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹುಟ್ಟುಹಬ್ಬದ ಗಿಫ್ಟ್ ಆಗಿ ಸೂಪರ್ ಸ್ಟಾರ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ವಿಶೇಷ ಎಂದರೆ ಈ ಸಿನಿಮಾ 5 ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಟೀಸರ್ ರಿಲೀಸ್ ಸಂದರ್ಭದಲ್ಲಿ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ನಿರಂಜನ್ ಸುಧೀಂದ್ರ ಅವರ ಸೂಪರ್ ಸ್ಟಾರ್ ಸಿನಿಮಾ ತೆಲುಗು ಮೂಲದ ನಿವೃತ್ತ ಎಸ್‌ಪಿ ಸತ್ಯನಾರಾಯಣ್ ಮತ್ತು ಅವರ ಮಗಳು ರಮಾದೇವಿ ರಮಾಸ್ ಮೀಡಿಯಾ ಕ್ರಿಯೇಷನಸ್ ಮೂಲಕ ನಿರ್ಮಿಸುತ್ತಿರುವ ಸಿನಿಮಾ ಇದು. ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಟೀಸರ್ ಬಿಡುಗಡೆಗೆ ಬಂದಿದ್ದ ಉಪೇಂದ್ರ ನಿರ್ಮಾಪಕರಿಗೆ ಧನ್ಯವಾದ ಸಲ್ಲಿಸಿದರು, ಬಳಿಕ ಮಾತನಾಡಿ, ‘ನಾನು ನಿರಂಜನ್‌ನನ್ನು ಅದ್ದೂರಿಯಾಗಿ ಲಾಂಚ್ ಮಾಡೋಣ ಎಂದರೆ ಅವನೇ ರಿಜೆಕ್ಟ್ ಮಾಡಿದ್ದಾನೆ. ಅವನ ಇಷ್ಟದಂತೆ ಸಿನಿಮಾ ಮಾಡುತ್ತಿದ್ದಾನೆ. ಈ ಚಿತ್ರದ ಒಂದು ಫೈಟ್ ಅನ್ನು ನಾನೂ ಸುದೀಪ್ ನೋಡಿ ಅಚ್ಚರಿಪಟ್ಟೆವು. ಬಹಳ ಚೆನ್ನಾಗಿ ಸಿನಿಮಾ ಮಾಡುತ್ತಿದ್ದಾರೆ’ ಎಂದರು.
ನಿರ್ಮಾಪಕ ಸತ್ಯನಾರಾಯಣ್, ‘ಮಗಳು ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಕನ್ನಡದಲ್ಲೇ ಸಿನಿಮಾ ಮಾಡೋಣ. ಹೀರೋ ಚೆನ್ನಾಗಿದ್ದಾರೆ. ಸಿನಿಮಾ ಚೆನ್ನಾಗಿ ಆಗುತ್ತದೆ ಎಂದು ನಿರ್ಮಾಣಕ್ಕೆ ಮುಂದಾದಳು. ಎಲ್ಲರ ಸಹಕಾರ ಇರಲಿ’ ಎಂದರು. ರಮಾದೇವಿ ಮಾತನಾಡಿ, ‘ಬೇರೆ ಉದ್ಯಮದಲ್ಲಿದ್ದೆ. ಮೊದಲ ಬಾರಿ ಇಷ್ಟಪಟ್ಟು ಸಿನಿಮಾ ಮಾಡುತ್ತಿದ್ದೇನೆ’ ಎಂದರು. ರಮೇಶ್ ವೆಂಕಟೇಶ್ ಬಾಬು ನಿರ್ಮಾಪಕರ ಸಹಕಾರ ನೆನೆದು ಕೃತಜ್ಞತೆ ಸಲ್ಲಿಸಿದರರು. ನಿರಂಜನ್ ಸುಧೀಂದ್ರ ಅವರು ಚಿಕ್ಕಪ್ಪನ ಸಿನಿಮಾ ಟೈಟಲ್‌ಗೆ ನ್ಯಾಯ ಸಲ್ಲಿಸುವ ಭರವಸೆ ನೀಡಿದರು.
ಚಿತ್ರರಂಗದಲ್ಲಿ ನೆಲೆ ನಿಲ್ಲಲು ಬ್ಯಾಕ್‌ಗ್ರೌಂಡ್ ಇದ್ದರೆ ಸಾಲದು: ನಿರಂಜನ್ ಸುಧೀಂದ್ರ
ಸೂಪರ್ ಸ್ಟಾರ್ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ನಿರಂಜನ್ ಕುಟುಂಬ, ತೆಲುಗಿನ ರಾಜಕಾರಣಿ ಮಾಧವ ರಾವ್, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್, ಚಿತ್ರದ ಡಿಓಪಿ ಗಿರೀಶ್, ಸಂಗೀತ ನಿರ್ದೇಶಕ ರಾಘವೇಂದ್ರ, ಶಿಲ್ಪಾ ಶ್ರೀನಿವಾಸ್ ಇದ್ದರು.
ಇದು ಯುಐ ಮ್ಯಾಚು ಕಣೋ.. ರಿಯಲ್ ಸ್ಟಾರ್ ಬ್ಯಾಟಿಂಗ್ ಕಣೋ..; ಚಿತ್ರತಂಡದ ಜೊತೆ ಕ್ರಿಕೆಟ್ ಆಡಿದ ಉಪ್ಪಿ
ನಿರಂಜನ್ ಸುಧೀಂದ್ರ ಮೊದಲ ಬಾರಿಗೆ ಸೆಕೆಂಡ್ ಹಾಫ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪ್ರಿಯಾಂಕಾ ಉಪೇಂದ್ರ ನಟನೆಯ ಸಿನಿಮಾ ಇದಾಗಿದ್ದು ನಿರಂಜನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕದಲ್ಲಿ ಮಿಂಚಿದ್ದರು. ಈ ಸಿನಿಮಾ ಬಳಿಕ ನಿರಂಜನ್ ನಮ್ಮ ಹುಡುಗರು ಸಿನಿಮಾ ಮೂಲಕ ನಾಯಕನಾಗಿ ಅಭಿಮಾನಿಗಳ ಮುಂದೆ ಬಂದಿದ್ದದ್ದರು. ಆದರೆ ಈ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಇದೀಗ ಸೂಪರ್ ಸ್ಟಾರ್ ಸಿನಿಮಾ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತಿದ್ದು ಸ್ಟಾರ್ ಆಗಿ ಹೊರಹೊಮ್ಮುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಸೂಪರ್ ಸ್ಟಾರ್‌ಗೆ ನಾಯಕಿಯಾರಾಗ್ತಾರೆಯಾರೆಲ್ಲ ಕಲಾವಿದರು ಇರಲಿದ್ದಾರೆ ಎಂದು ಸಧ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.