ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಬೇಕೆಂಬ ಛಲದಿಂದ ಹೊಸ ಪ್ರಯತ್ನಗಳಿಗೆ ಕೈ ಹಾಕುತ್ತಿರುವ ನಿಖಿಲ್‌ ಕುಮಾರಸ್ವಾಮಿ ಮದುವೆ ನಿಶ್ಚಿತಾರ್ಥವಾದ ಮೇಲೆ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದಾರೆ. ರೇವತಿಯೊಂದಿಗೆ ಹತ್ತು ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ನಿಖಿಲ್, ಕವನಗಳನ್ನು ಬರೆಯುವ ಮೂಲಕ ತಮ್ಮ ಜೀವನದಲ್ಲಿ ಬೆಳಗುತ್ತಿರುವ ರೇವತಿ ನಕ್ಷತ್ರವನ್ನು ಹಾಡಿ ಹೊಗಳುತ್ತಿದ್ದಾರೆ. 

ಡಿಫರೆಂಟ್‌ ಆಗಿ ಕಾಣಿಸಿಕೊಂಡ ನಿಖಿಲ್‌- ರೇವತಿ; ರಿವೀಲ್‌ ಆಯ್ತು 10 ಫೋಟೋ!

ಹೌದು! ಫೆಬ್ರವರಿ 10ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ನಿಖಿಲ್ - ರೇವತಿ ಜೋಡಿ ಈಗ ಸೋಷಿಯಲ್‌ ಮೀಡಿಯಾ ಸೆನ್ಸೇಷನ್‌ ಆಗಿದ್ದಾರೆ. ನಟರು ತಮ್ಮ ಫೋಟೋ ಅಪ್ಲೋಡ್‌ ಮಾಡುವಾಗ ಸಣ್ಣದೊಂದು ಸಾಲು ಬರೆಯುವುದು ಕಾಮನ್. ಆದರೆ, ನಿಖಿಲ್ ಅಪ್‌ಲೋಡ್ ಮಾಡುತ್ತಿರುವ ಪ್ರತಿಯೊಂದೂ ಫೋಟೋಗಳನ್ನು ವಿಶೇಷವಾಗಿ, ಕಾವ್ಯಾತ್ಮಕವಾಗಿ ಕ್ಯಾಪ್ಷನ್ ಬರೆಯುತ್ತಿದ್ದಾರೆ. 

ಇತ್ತೀಚಿಗೆ ರೇವತಿ ಬರೆದ ಇಂಗ್ಲೀಷ್ ಸಾಲುಗಳನ್ನು ಶೇರ್ ಮಾಡಿಕೊಂಡು 'ಆಕಾಶವೇ ಭೂಮಿ ಮೇಲೆ ಬಿದ್ದರೂ ಐ ಲವ್‌ ಯೂ ಮೈ ಪ್ರಿನ್ಸೆಸ್‌. ದಿನಗಳು, ವರ್ಷಗಳು ಕಳೆಯುತ್ತಿದ್ದಂತೆ ಸೌಂದರ್ಯ ಕುಂದುತ್ತದೆ. ಆದರೆ ಗುಣ ಎಂದೆಂದಿಗೂ ಅಮರ. ನಿನ್ನ ವ್ಯಕ್ತಿತ್ವಕ್ಕೆ ನಾನು ಮನ ಸೋತಿದ್ದೇನೆ. ನಿನ್ನ ಜೊತೆ ಕಳೆಯುವ ಪ್ರತಿಯೊಂದೂ ಕ್ಷಣವನ್ನು ಸಂಭ್ರಮಿಸುತ್ತಿದ್ದೇನೆ. ನಿನ್ನ ಕೈ ಹಿಡಿದು ವರ್ಷಗಳ ಕಾಲ ಒಟ್ಟಾಗಿ ಸಾಗಿ, ಜತೆಯಾಗಿ ಬೆಳೆಯೋಣ. ಸಾವೂ ನಮ್ಮನ್ನು ದೂರ ಮಾಡಬಾರದು. ನನ್ನ ಮುಂದಿನ ಜನ್ಮದಲ್ಲೂ ನೀನೇ ನನ್ನವಳಾಗಿರಬೇಕು...' ಎಂದು ರೊಮ್ಯಾಂಟಿಕ್‌ ಲೈನ್ಸ್ ಬರೆದುಕೊಂಡಿದ್ದಾರೆ.

ಭಾವಿ ಪತ್ನಿಯ ಕೈಬರಹ ಶೇರ್, ನಿಖಿಲ್‌ರಿಂದ ಮತ್ತೊಂದು ವಿಷಯ ಕ್ಲಿಯರ್!

ಇತ್ತೀಚಿಗೆ ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದರು. ಅದರಲ್ಲಿಯೂ ರೇವತಿ ನಿಖಿಲ್‌ ಅವರನ್ನು ನೋಡುತ್ತಿದ್ದಾರೆ. ಇದಕ್ಕೆ 'OMG ಪ್ರತಿ ಕ್ಷಣ ನೀನು ನನ್ನನ್ನು ಹೀಗೆ ನೋಡುವಾಗ, ನನ್ನ ಹೃದಯ ಬಡಿತದ ತಾಳ ತಪ್ಪುತ್ತದೆ. ಮಾರುವೇಷದಲ್ಲಿ ಬಂದ ಪ್ರೀತಿಯ ಉಡುಗೊರೆಯಾಗಿ ಬಂದವಳು ನೀನು. ಲೆನ್ಸ್ ಸುಳ್ಳು ಹೇಳುವುದಿಲ್ಲ ಅಲ್ಲವೇ?,' ಎಂದು ತಮ್ಮ ಭಾವೀ ಮಡದಿ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ.