ಬೆಂಗಳೂರು(ಫೆ. 16)   ನಿಖಿಲ್ ರೇವತಿ ಕಲ್ಯಾಣಕ್ಕೆ ಜಾಗವೂ ಫಿಕ್ಸ್ ಆಗಿದೆ. ದಿನಾಂಕವೂ ನಿಗದಿಯಾಗಿದೆ. ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ಪ್ರೇಮಿಗಳ ದಿನದಂದು ದೇವಾಲಯಕ್ಕೆ ತೆರಳಿದ್ದ ಜೋಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹವಾ ಸೃಷ್ಟಿಸಿದೆ. ರೇವತಿ ಹಸ್ತಾಕ್ಷರದಲ್ಲಿ ಬರೆದಿರುವ ಸಾಲುಗಳನ್ನು ನಿಖಿಲ್ ಮೆಚ್ಚಿ ಕೊಂಡಾಡಿದ್ದಾರೆ.

ಕೈಬರಹಕ್ಕೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ನಿಖಿಲ್ ಹಂಚಿಕೊಂಡ ನಂತರ ಅಭಿಮಾನಿಗಳಿಂದಲೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ನಿಖಿಲ್ ಭಾವಿ ಪತ್ನಿಯ ಬಗ್ಗೆ ಇಂಟರೆಸ್ಟಿಂಗ್ ವಿಚಾರ

ಇಬ್ಬರು ಕೈ ಮೇಲೆ ಕೈಯಿಟ್ಟ ಪೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಇಬ್ಬರ ಎಂಗೇಜ್ ಮೆಂಟ್ ರಿಂಗ್ ಸಹ ರಿವೀಲ್ ಆಗಿದೆ. ಟಾಲಿವುಡ್ ನಟರು ಸಹ ಈ ಪೋಟೋಕ್ಕೆ ಕಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.  ಸುಂದರ ಕೈಬರಹಕ್ಕೆ ನಿಮ್ಮದು ಒಂದು ಮೆಚ್ಚುಗೆ ಇರಲಿ..

ನಿಖಿಲ್‌ ವಿವಾಹಕ್ಕೆಂದು ನಿಗದಿಪಡಿಸಿರುವ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಈಗಾಗಲೇ ಒಂದು ಬಾರಿ ಪರಿಶೀಲಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬೀಗರಾದ ಮಂಜುನಾಥ್‌ ಅವರೊಂದಿಗೆ ಮತ್ತೊಮ್ಮೆ ನೋಡಿ ಬಂದಿದ್ದಾರೆ.

ನಿಖಿಲ್-ರೇವತಿ ನಿಶ್ಚಿತಾರ್ಥದ ಪೋಟೋಗಳಿವು

ಏ.17ರಂದು ಬೆಳಗ್ಗೆ 9:15ರಿಂದ 9:30ರ ಶುಭಲಗ್ನದಲ್ಲಿ ನಿಖಿಲ್‌ ಮತ್ತು ರೇವತಿ ವಿವಾಹ ಕಾರ್ಯ ನೆರ​ವೇ​ರ​ಲಿದೆ. ಮದುವೆಗೆ 5 ರಿಂದ 6 ಲಕ್ಷ ಜನ ಬರುವ ನಿರೀಕ್ಷೆ ಇದೆ. ಇದು ಅ​ದ್ಧೂರಿ ಮ​ದುವೆ ಅಲ್ಲ. ಆ​ದರೆ ಗ​ಣ್ಯರು ಆ​ಗ​ಮಿ​ಸು​ವು​ದರಿಂದ ವಿ​ಶಾಲ​ವಾದ ಪ್ರ​ದೇಶ ಆಯ್ಕೆ ಮಾಡಲಾಗಿದೆ.