ಸ್ಯಾಂಡಲ್‌ವುಡ್‌ ಯುವರಾಜ, ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಜನವರಿ 22ರಂದು 31ರ ವಸಂತಕ್ಕೆ ಕಾಲಿಡಲಿದ್ದಾರೆ. ಇದರ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಇನ್‌ಸ್ಟಾಗ್ರಾಂ ಖಾತೆ ಮೂಲಕ ತಿಳಿಸಿದ್ದಾರೆ.  

ನಿಖಿಲ್ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ 'ಹೊಸ' ಫೋಟೋ;ಅಭಿಮಾನಿಗಳು ಖುಷ್! 

ಜಾಗ್ವಾರ್, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಚಿತ್ರದ ನಂತರ ವೈವಾಹಿಕ ಜೀವನ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ನಿಖಿಲ್ ತಮ್ಮ ಚಿತ್ರಗಳ ಬಗ್ಗೆ ಯಾವುದೇ ಅಪ್ಡೇಟ್ ನೀಡಿರಲಿಲ್ಲ. ರೈಡರ್‌ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಾಗಿ ಈ ಹಿಂದೆ ಪೋಸ್ಟರ್ ರಿಲೀಸ್‌ ಮಾಡುವ ಮೂಲಕ ತಿಳಿಸಿದ್ದರು. ಇದೀಗ ತಮ್ಮ ಹುಟ್ಟುಹಬ್ಬದ ದಿನ ಟೀಸರ್‌ ರಿಲೀಸ್‌ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. 

ಪೋಸ್ಟರ್ ಲುಕ್‌ನಲ್ಲಿ ಮಾಸ್‌ ಹೀರೋ ಆಗಿ ಕಾಣಿಸಿಕೊಂಡಿರುವ ನಿಖಿಲ್ ಚಿತ್ರದ ಟೀಸರ್ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಕೌಂಟ್‌ಡೌನ್‌ ಶುರು ಮಾಡಿದ್ದಾರೆ. ಇನ್ನು ನಿಖಿಲ್ ಪತ್ನಿ ರೇವತಿ ಏನು ಗಿಫ್ಟ್‌ ಕೊಡಲಿದ್ದಾರೆ? ಹೇಗೆ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಿದ್ದೀರಾ ಎಂದು ಕಾಮೆಂಟ್ಸ್‌ ಮೂಲಕ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.