2020ರ ಸ್ಯಾಂಡಲ್‌ವುಡ್‌ ಫೇವರೆಟ್‌ ಜೋಡಿಯಾಗಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಹೊಸ ವರ್ಷವನ್ನು ವಿಶೇಷವಾಗಿ ಬರ ಮಾಡಿಕೊಂಡಿದ್ದಾರೆ. ಬಹು ದಿನಗಳ ನಂತರ ಪತ್ನಿ ಜೊತೆ ಫೋಟೋ ಶೇರ್ ಮಾಡಿಕೊಂಡು ಜನರಿಗೆ ಹಿತ ಬಯಸಿದ್ದಾರೆ.

ಸುಮಾರು ತಿಂಗಳ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನಿಖಿಲ್ ದಂಪತಿ!
 
ನಿಖಿಲ್ ಪೋಸ್ಟ್:
ನಿಖಿಲ್ ಹಾಗೂ ರೇವತಿ ಐಷಾರಾಮಿ ಬ್ರ್ಯಾಂಡ್ ಉಡುಪು ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. 'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ,' ಎಂದು ನಿಖಿಲ್ ಬರೆದುಕೊಂಡಿದ್ದಾರೆ. ಇಬ್ಬರನ್ನೂ ಕೆಲವು ದಿನಗಳ ನಂತರ ಒಟ್ಟಾಗಿ ಕಂಡು ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. 'ನಿಮ್ಮ ತಾಯಿ ತಂದೆಗೆ ಹೆಮ್ಮೆ ತರಿಸುವ ವರ್ಷ ನಿಮ್ಮದಾಗಲಿ,' ಎಂದು ಹಾರೈಸಿದ್ದಾರೆ. 

ಡಿಸೆಂಬರ್‌ನಲ್ಲಿ ದೇವೇಗೌಡ ದಂಪತಿ ಹಾಗೂ ನಿಖಿಲ್ ದಂಪತಿ ಹಾಸನದ ಹೊಳೆನರಸೀಪುರ ಹರದನಹಳ್ಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಅಂದು ತಾತ ಮೊಮ್ಮಗನನ್ನು ಒಟ್ಟಾಗಿ ನೋಡಿ ಸಂತಸ ವ್ಯಕ್ತ ಪಡಿಸಿದ್ದರು, ಅಭಿಮಾನಿಗಳು. ಆದರೂ ನಿಖಿಲ್ ಮದುವೆಯಾದ ಆರಂಭದಲ್ಲಿ ಪತ್ನಿ ಜೊತೆ ಹೆಚ್ಚಾಗಿ ಫೋಟೋ ಅಪ್ಲೋಡ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ನಿಲ್ಲಿಸಿದ್ದ ಕಾರಣ ನೆಟ್ಟಿಗರು ಹಲವು ರೀತಿಯಲ್ಲಿ ಅನುಮಾನಪಟ್ಟರು. ಏನೇ ಇರಲಿ ಅಣ್ಣ-ಅತ್ತಿಗೆ ಸಂತೋಷವಾಗಿರಬೇಕೆಂಬುದು ಅವರ ಆಸೆ.

ಸುಮಲತಾ-ಪ್ರತಾಪ್ ಸಿಂಹ ವಾರ್ : ನಿಖಿಲ್ ಏನಂದ್ರು..?