ಸ್ಯಾಂಡಲ್ ವುಡ್ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಪುತ್ರನಿಗೆ ಇಂದು (ಜೂನ್ 8)ಸಂಭ್ರಮ. ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ ನಡೆಯುತ್ತಿದೆ. 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊಮ್ಮಗನಿಗೆ ನಾಮಕರಣ ಮಾಡಲಾಯಿತು.
ಸ್ಯಾಂಡಲ್ ವುಡ್ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಪುತ್ರನಿಗೆ ಇಂದು (ಜೂನ್ 8)ಸಂಭ್ರಮ. ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ ನಡೆಯುತ್ತಿದೆ. 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊಮ್ಮಗನಿಗೆ ನಾಮಕರಣ ಮಾಡಲಾಯಿತು. ದೊಡ್ಡ ಗೌಡರ ಕುಟುಂಬ ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಭಿಷೇಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ದೇವೇಗೌಡರ ಇಡೀ ಕುಟುಂಬ ಹಾಜರಾಗಿತ್ತು.
ಅಂದಹಾಗೆ ನಿಖಿಲ್ ಪುತ್ರನಿಗೆ 9 ತಿಂಗಳು ತುಂಬಿದೆ. ಹಾಗಾಗಿ ನಾಮಕರಣ ಶಾಸ್ತ್ರವನ್ನು ಹಮ್ಮಿಕೊಂಡಿದೆ. ಈ ಸಮಾರಂಭದಲ್ಲಿ ದೊಡ್ಡಗೌಡರ ಕುಟುಂಬದವರು ಮಾತ್ರ ಹಾಜರಾಗಿದ್ದಾರೆ. ತೀಪ್ತರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ನಡೆಯುತ್ತಿದ್ದು ನಿಖಿಲ್ ಪುತ್ರ ಮುದ್ದಾಗಿ ಕಾಣಿಸುತ್ತಿದ್ದಾನೆ. ಅಂದಹಾಗೆ ನಿಖಿಲ್-ರೇವತಿ ಪುತ್ರನಿಗೆ ಏನೆಂದು ಹೆಸರಿಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.
ಅವ್ಯಾನ್ ದೇವ್
ಅಂದಹಾಗೆ ನಿಖಿಲ್ ಮತ್ತು ರೇವತಿ ದಂಪತಿಯ ಮುದ್ದಾಗ ಮಗನಿಗೆ ಅವ್ಯಾನ್ ದೇವ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಮಾರಂಭದಲ್ಲಿ ಅವ್ಯಾನ್ ಸುಂದರವಾಗಿ ಕಂಗೊಳುತ್ತಿದ್ದ. ಬಿಳಿ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಪುಟ್ಟ ಅವ್ಯಾನ್ ದೇವ್ ಮಿಂಚುತ್ತಿದ್ದನು. ದೊಡ್ಡಗೌಡರ ಕುಟುಂಬದ ಕುಡಿಯ ನಾಮಕರಣಕ್ಕೆ ಬೆಳ್ಳಿ ತೊಟ್ಟಿಲನ್ನು ವಿವಿಧ ಹೂಗಳಿಂದ ಸಿಂಗಾರ ಮಾಡಲಾಗಿತ್ತು.
ಅವ್ಯಾನ್ ಎಂದರೆ ಅರ್ಥ
ಅವ್ಯಾನ್ ದೇವ್ ದೇವರ ಹೆಸರು. ಹೌದು, ಗಣಪತಿಯ ಮತ್ತೊಂದು ಹೆಸರು. ಅದೃಷ್ಟದಿಂದ ಜನಿಸಿದವನು ಎಂದು ಸೂಚಿಸುತ್ತದೆ. ಅಂದಹಾಗೆ ಇತ್ತೀಚಿಗಷ್ಟೆ ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ತನ್ನ ಪುತ್ರನಿಗೆ ಅವ್ಯಾನ್ ಎಂದು ನಾಮಕರಣ ಮಾಡಿದ್ದರು.
ನಾಮಕರಣದಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರನ ಮುಖ ರಿವೀಲ್!
2020ರಲ್ಲಿ ಮದುವೆ
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ 2020 ಏಪ್ರಿಲ್‌ನಲ್ಲಿ ಹಸೆಮಣೆ ಏರಿದರು. ಇಬ್ಬರ ಮದುವೆಗೆ ಲಾಕ್ ಡೌನ್ ಅಡ್ಡಿಯಾಗಿತ್ತು. ಭೀಕರ ಲಾಕ್ ಡೌನ್ ಸಮಯದಲ್ಲೇ ರಾಮನಗರದಲ್ಲಿ ಕುಮಾರಸ್ವಾಮಿ ಪುತ್ರನ ಮದುವೆ ನೆರವೇರಿತು. ಕೊರೊನಾ ನಿಮಯದ ಪ್ರಕಾರ ಕೆಲವೇ ಕೆಲವು ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಯಾಗಿ ಒಂದು ವರ್ಷದ ಬಳಿಕ ಅಂದರೆ 2021 ಸೆಪ್ಟಂಬರ್ 24ರಂದು ರೇವತಿ ಗಂಡು ಮಗನಿಗೆ ಜನ್ಮ ನೀಡಿದರು. ಇದೀಗ 9 ತಿಂಗಳ ಬಳಿಕ ಮಗನಿಗೆ ನಾಮಕರಣ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಮತಗಳನ್ನು ಒಡೆಯಲು ಸಿದ್ದರಾಮಯ್ಯ ಕೈಯಲ್ಲಿ ಆಗಲ್ಲ: ನಿಖಿಲ್ ಕುಮಾರಸ್ವಾಮಿ
ನಿಖಿಲ್ ಸಿನಿಮಾಗಳು
ನಿಖಿಲ್ ಕುಮಾರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾಗ್ವರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ ನಿಖಿಲ್ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೀತರಾಮ ಕಲ್ಯಾಣ, ಕುರುಕ್ಷೇತ್ರ ಮತ್ತು ರೈಡರ್ ನಲ್ಲಿ ಮಿಂಚಿದ್ದಾರೆ. ಸದ್ಯ ಯುದುವೀರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮನೆಗೆ ಮಗ ಬಂದಿರುವ ಸಂತಸದಲ್ಲಿರುವ ನಿಖಿಲ್, ಸಿನಿಮಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ಜೊತೆಗೆ ಕುಟುಂಬದ ಜೊತೆಯೂ ಸಮಯ ಕಳೆಯುತ್ತಿದ್ದಾರೆ.
