ರೈಡರ್‌ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ನಿಖಿಲ್ ಕುಮಾರಸ್ವಾಮಿ ಭಾನುವಾರ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಅದರಲ್ಲೂ ಬೈಕ್‌ ಸವಾರಿ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಹೌದು! ಆರ್‌ಎಕ್ಸ್‌ 100 ಕೊಂಚ ಹಳೆ ಬೈಕ್‌ ಆದರೆ ಎಲ್ಲಾ ಬೈಕ್ ಪ್ರೇಮಿಗಳು ಅದನ್ನು ಕ್ಲಾಸಿಕ್‌ ಬೈಕ್‌ ಎಂದು ಪರಿಗಣಿಸಿ ಈಗಲೂ ಚಿನ್ನದಂತೆ ನೋಡಿಕೊಳ್ಳುತ್ತಾರೆ.  ಹೆಚ್ಚಾಗಿ ಕಾರು ಬಳಸುವ ನಿಖಿಲ್ ಇದೇ ಮೊದಲ ಬಾರಿ ಸಿನಿಮಾ ಹೊರತು ಪಡಿಸಿ ಬೈಕ್ ಓಡಿಸುತ್ತಿರುವುದನ್ನು ನೋಡಬಹುದು.'ನಾನು ಅತಿ ಹೆಚ್ಚಾಗಿ ಇಷ್ಟ ಪಡುವ ಬೈಕ್‌ಗಳಲ್ಲಿ ಇದೂ ಒಂದು'ಎಂದು ನಿಖಿಲ್ ಬರೆದುಕೊಂಡಿದ್ದಾರೆ. ಪತ್ನ ರೇವತಿ ಜೊತೆ ಬೈಕ್‌ ಏರಿ ಜಾಲಿ ರೈಡ್‌ ಹೊರಟಿದ್ದಾರೆ.

ಅಭಿಮಾನಿಗಳ ಜೊತೆಗಿದ್ದ ನಿಖಿಲ್‌ನನ್ನು ಬಾಲ್ಕನಿಯಿಂದ ನೋಡಿ ನಾಚಿ ನೀರಾದ ಪತ್ನಿ! 
 
ಕೆಲವರು ಯುವರಾಜನ ಬೈಕ್ ಮೇಲೆ ಕಣ್ಣಿಟ್ಟರೆ  ಇನ್ನೂ ಕೆಲವರು ಅಂತೂ ಇಂತೂ ಅತ್ತಿಗೆ ಜೊತೆಗಿರುವ ವಿಡಿಯೋ ಶೇರ್ ಮಾಡಿಕೊಂಡಿರಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲ ಕಿಲಾಡಿಗಳು 'ಸರ್ ನಮ್ ಹುಡ್ಗಿನೂ ಬೈಕ್‌ನಲ್ಲಿ ಇದೇ ರೀತಿ ಕರ್ಕೊಂಡು ಹೋಗಬೇಕು ಕೊಡ್ತೀರಾ' ಎಂದು ಕೇಳಿದ್ದಾರೆ.  ಜಾಗ್ವಾರ್, ಬಿಎಂಡ್ಬ್ಯೂ, ಲ್ಯಾಂಬೋರ್ಗಿನಿ ಅಂತ ದುಬಾರಿ ಕಾರುಗಳನ್ನು ಬಳಸುವ ನಿಖಿಲ್ ಇಷ್ಟು ಸರಳವಾದ ಬೈಕ್ ಬಳಸುವುದನ್ನು ನೋಡಿ ಫ್ಯಾನ್‌ ಫುಲ್ ಖುಷ್ ಆಗಿದ್ದಾರೆ.