ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ 31ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಜೆಡಿಎಸ್‌ ಕಾರ್ಯಕರ್ತರುಗಳ ಜೊತೆ ಆಚರಿಸಿಕೊಂಡಿದ್ದಾರೆ. ಈ ವರ್ಷ ಪತ್ನಿ ರೇವತಿ ಜೊತೆಗಿದ್ದಿದ್ದು ನಿಖಿಲ್ ಹುಟ್ಟಿದಬ್ಬದ ಮತ್ತೊಂದು ವಿಶೇಷ.  ಜೆಪಿ ನಗರ ನಿವಾಸದ ಬಳಿ ನಿಖಿಲ್‌ಗೆ ಅಭಿಮಾನಿಗಳು ಪೋಸ್ಟರ್‌ ಹಾಕುವ ಮೂಲಕ ಅಚರಣೆಗೆ ಮೆರುಗು ನೀಡಿದ್ದಾರೆ.

ನಿಖಿಲ್ ಹುಟ್ಟುಹಬ್ಬಕ್ಕೆ 'ರೈಡರ್‌' ಟೀಸರ್ ರಿಲೀಸ್‌; ಸಿಕ್ಕಾಪಟ್ಟೆ ಮಾಸ್ ಗುರು! 

ಪ್ರತಿ ವರ್ಷ ನಿಖಿಲ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಅದರಂತೆ ಈ ವರ್ಷ ಕೇಕ್ ಕಟ್ ನಂತರ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದರು. ತಮ್ಮ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದಿರುವ ಅಭಿಮಾನಿಗಳಿಗೆ ನಿಖಿಲ್ ಹುಟ್ಟಿದಬ್ಬದ ಊಟದ ವ್ಯವಸ್ಥೆ ಮಾಡಿಸಿದ್ದಾರೆ. 

ಆಚರಣೆ ನಂತರ ನಿಖಿಲ್ ಮಾಧ್ಯಮ ಸ್ನೇಹಿತರ ಜೊತೆ ಮಾತನಾಡಿದ್ದಾರೆ. 'ಕೊರೋನಾ ಸಂಕಷ್ಟದ ಕಾಲವಿದು. ಹುಟ್ಟುಹಬ್ಬ ಆಚರಣೆ ಬೇಡ ಎಂದುಕೊಂಡಿದ್ದೆ. ಆದ್ರೆ ಸಾವಿರಾರು ಕಾರ್ಯಕರ್ತರು ಹುಟ್ಟುಹಬ್ಬ ಆಚರಿಸಬೇಕು ಎಂದು ಇಲ್ಲಿಗೆ ಬಂದಿದ್ದಾರೆ. ಇವೆರೆಲ್ಲರು ಸುರಕ್ಷಿತವಾಗಿ ತಮ್ಮ ಮನೆ ತಲುಪಬೇಕು. ಆಗಲೇ ನನಗೆ ನೆಮ್ಮದಿ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಯುವಕರಿಗೆ ಧನ್ಯವಾದಗಳು. ಜೆಡಿಎಸ್ ಅಂದ್ರೆ ರೈತರ ಪಕ್ಷ, ಮುಂದಿನ ದಿನಗಳಲ್ಲಿ ಜೆಡಿಎಸ್‌ ಅಂದ್ರೆ ಯುವಕರ ಪಕ್ಷವೂ ಆಗುತ್ತದೆ. ರೈಡರ್ ಟೀಸರ್ ಬಿಡುಗಡೆ ಆಗಿದೆ ನೋಡಿ ಅಭಿಪ್ರಾಯ ತಿಳಿಸಿ. ಇಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ ನಂತರ ಅನಾಥಾಶ್ರಮಕ್ಕೆ ಭೇಟಿ ಮಾಡುತ್ತೇನೆ. ಅಲ್ಲಿಂದ ರಾಮನಗರ  ಮತ್ತು ಮಂಡ್ಯದಲ್ಲಿ ಕಾಯುತ್ತಿರುವ ಅಭಿಮಾನಿಗಳನ್ನು ಭೇಟಿಯಾಗುತ್ತೇನೆ. ಮಧ್ಯಾಹ್ನದ ನಂತರ ಅಲ್ಲೇ ಸಮಯ ಕಳೆಯುತ್ತೇನೆ,' ಎಂದು ನಿಖಿಲ್ ಹೇಳಿದ್ದಾರೆ.

ನಿಖಿಲ್ ಜೋಡಿಗೆ ಡಾರ್ಲಿಂಗ್ ಕೃಷ್ಣ ಮದುವೆಯ ಮಮತೆಯ ಕರೆಯೋಲೆ 

ಹುಟ್ಟಿದಬ್ಬದ ಪ್ರಯುಕ್ತ ತಂದೆ, ತಾಯಿ ಹಾಗೂ ಮಡದಿ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ ನಿಖಿಲ್, ಪೋಷಕರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.