ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಇಂದು 31ರ ವಸಂತಕ್ಕೆ ಕಾಲಿಟ್ಟಿದ್ದಾರೆ. ರೈಡರ್ ಚಿತ್ರತಂಡ ಟೀಸರ್‌ ಗಿಫ್ಟ್‌ ನೀಡಿದೆ. ಇಂದು ಬೆಳಗ್ಗೆ ಸುಮಾರು 10.30ಕ್ಕೆ ಲಹರಿ ಆಡಿಯೋ ಸಂಸ್ಥೆಯಲ್ಲಿ ಬಿಡುಗಡೆ ಮಾಡಲಾಗಿದೆ. 

ಇಂಥ ತಪ್ಪನ್ನು ಮತ್ತೆಂದೂ ಮಾಡೋಲ್ಲ: ನಿಖಿಲ್ ಕುಮಾರಸ್ವಾಮಿ

ಟೀಸರ್‌ ಆರಂಭದಲ್ಲಿಯೇ ವಿಲನ್‌ಗೆ ಪಂಚ್ ನೀಡುವ ನಿಖಿಲ್ ತಮ್ಮ ಮಾಸ್‌ ಲುಕ್‌ ರಿವೀಲ್ ಮಾಡಿದ್ದಾರೆ. 45 ಸೆಕೆಂಡ್ ಇರುವ ಈ ಟೀಸರ್‌ನಲ್ಲಿ ನಿಖಿಲ್‌ ಪಾತ್ರ ಪರಿಚಯ ಮಾಡಲಾಗಿದೆ. ಈಗಾಗಲೆ ಶೇ.40 ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಕ್ರೀಡೆಯನ್ನು ಆಧರಿಸಿ ಈ ಸಿನಿಮಾ ಮಾಡಿರುವುದು ಎಂದು ಈ ಹಿಂದೆ ನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದರು. ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯಾ ಸಂಗೀತ ನೀಡುತ್ತಿರುವ ಈ ಚಿತ್ರಕ್ಕೆ ಕಾಶ್ಮೀರ ಪದೇರ್ಶಿ ನಾಯಕಿಯಾಗಿದ್ದಾರೆ. ಟೀಸರ್‌ನಲ್ಲಿ ನಿಖಿಲ್‌ನ ನೋಡಿ ನೆಟ್ಟಿಗರು 'ಸಿಕ್ಕಾಪಟ್ಟೆ ಮಾಸ್‌ ಇದೆ ಗುರು' ಎಂದು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರೈಡರ್ ರಿಲೀಸ್ ಆಗುತ್ತಿದೆ. ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಟ್ರೆಂಡಿಂಗ್‌ ಲಿಸ್ಟ್‌ ಮುಟ್ಟಿದೆ.  ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ  ಅಭಿಮಾನಿಗಳು ಎಲ್ಲೆಡೆ ಯುವರಾಜ ಹುಟ್ಟುಹಬ್ಬವನ್ನು ಆದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಸಿನಿಮಾ ರಿಲೀಸ್‌ ಬಗ್ಗೆ ಈವರೆಗೂ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ. ಲಹರಿ ಫಿಲ್ಮಂ ಸಂಸ್ಥೆಯ ಸಿನಿಮಾ ಅಂದ ಮೇಲೆ ಬಿಗ್ ಬಜೆಟ್‌ ಹಿಸ್ಟರಿ ಕ್ರಿಯೇಟ್ ಮಾಡುವ ಕಥೆನೇ ಆಗಿರುತ್ತದೆ.