ಹಗ್ಗ ಹಿಡಿದು ನೇತಾಡುತ್ತಿರುವ ನಿಧಿ ಸುಬ್ಬಯ್ಯ ಫೋಟೋ ವೈರಲ್; ಫಿಟ್ ಆಗಲು ಮಾಡುತ್ತಿರುವ ಕಸರತ್ತು ನೋಡಿ!

ಬಾಡಿ ಫಿಟ್ ಆಂಡ್ ಫೈನ್ ಆಗಿರಲು ಬಾಲಿವುಡ್ ನಟಿಯರಂತೆ ಏರಿಯಲ್ ಯೋಗ ಆರಂಭಿಸಿದ ನಿಧಿ ಸುಬ್ಬಯ್ಯ. ಹೀಗೆ ಮಾಡುತ್ತಿರುವುದರಿಂದ ಪ್ರಯೋಜನಗಳು ಏನು?

Nidhi subbaiah enjoys aerial yoga training to reduce body stiffness vcs

ಕೊಡಿನ ಕುವರಿ ನಿಧಿ ಸುಬ್ಬಯ್ಯ ಫೇರ್ ಆಂಡ್ ಲವ್ಲಿ ಜಾಹೀರಾತು ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟರು. 2009ರಲ್ಲಿ ಅಭಿಮಾನಿ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ನಿಧಿ ಕೃಷ್ಣ ನೀ ಲೇಟಾಗಿ ಬಾರೋ,ಪಂಚರಂಗಿ, ವೀರಾ ಬಾಬು, ಕೃಷ್ಣ ಮ್ಯಾರೇಜ್ ಸ್ಟೋರಿ,ಅಣ್ಣ ಬಾಂಡ್, ಆಯುಷ್ಮಾಭವ ಸೇರಿಂದತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿರುವ ಸುಂದರಿ ಸಿಕ್ಕಾಪಟ್ಟೆ ಫಿಟ್ನೆಸ್ ಕಾಳಜಿ ಮಾಡುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ನಟಿಯರಿಂದ ಏರಿಯಲ್ ಯೋಗ ಟ್ರೆಂಡ್‌ನಲ್ಲಿದೆ. ಯೋಗ, ಜಿಮ್ ಮತ್ತು ಯಾವುದೇ ವರ್ಕೌಟ್ ಮಾಡಿದರೂ ಒಮ್ಮೆ ಆದರೂ ಹಗ್ಗ ಹಿಡಿದು ಜೋತಾಡುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡುತ್ತಾರೆ. ಏನಿದು ವರ್ಕ್‌ಔಟ್ ಡ್ರೆಸ್ ಧರಿಸಿ ಹಗ್ಗ ಹಿಡಿದು ಉಲ್ಟಾಪಲ್ಟಾ ಇದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೇ ಏರಿಯಲ್ ಯೋಗ. 'ನಾನು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತೀನಿ ಆದರೂ ನನ್ನ ಬಾಡಿ ಸ್ಟಿಫ್ ಆಗಿದೆ ಎಂದು ಟ್ರೈನರ್ ಹೇಳುತ್ತಿದ್ದರು. ಹೀಗಾಗಿ ಬಾಡಿಯನ್ನು ಸ್ಟ್ರೆಚ್ ಮಾಡಲು ವರ್ಕೌಟ್ ಮಾಡಬೇಕು ಇಲ್ಲವಾದರೆ ಇಂಚುರಿ ಆಗುತ್ತದೆ ಎಂದು ಹೇಳಿದ್ದರು. ನನಗೆ ತುಂಬಾ ಬೇಗ ಬೋರ್ ಆಗುತ್ತದೆ ಹೀಗಾಗಿ ಏರಿಯಲ್ ಯೋಗ ಮಾಡಲು ಶುರು ಮಾಡಿದೆ' ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ನಿಧಿ ಮಾತನಾಡಿದ್ದಾರೆ.

ತೆರೆ ಮೇಲೆ ಸಾಮಾನ್ಯನಂತೆ ಕಾಣಿಸುತ್ತಿರುವುದಕ್ಕೆ ಜನರಿಗೆ ಹತ್ತಿರವಾಗುತ್ತಿರುವುದು: ವಿನಯ್

'ಏರಿಯಲ್ ಯೋಗ ಮಾಡಲು ದೇಶದಾದ್ಯಂತ ಜನರು ಸೇರುತ್ತಾರೆ, ನನ್ನ ಮನೆಗೆ ಈ ಜಾಗ ತುಂಬಾ ಹತ್ತಿರವಾಗಿದೆ. ಈ ಯೋಗದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಹೀಗಾಗಿ ಕಮ್ಯೂನಿಟಿ ವೈಬ್ಸ್ ಸೂಪರ್ ಆಗಿದೆ. legging go ಅನ್ನೋದು ಏರಿಯಲ್ ಯೋಗದಲ್ಲಿ ಇದೆ. ಆರಂಭದಲ್ಲಿ ನನಗೂ ಭಯವಾಗುತ್ತಿತ್ತು ಆದರೆ ದಿನ ಕಳೆಯುತ್ತಿದ್ದಂತೆ ಸಪೋರ್ಟ್‌ನಿಂದ ಸುಲಭವಾಗಿತ್ತು. ಸೇಫ್ಟ್‌ ಮೊದಲು ...ನನ್ನ ಟ್ರೈನರ್ ಜೊತೆಗೆ ಇರುತ್ತಾರೆ. ನಮ್ಮ ಕೆಳಗೆ ಮ್ಯಾಟ್‌ಗಳನ್ನು ಹಾಕಿರುತ್ತಾರೆ..ಇದು ಗಾಯಗಳನ್ನು ತಡೆಯುತ್ತದೆ' ಎಂದು ನಿಧಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios