ತೆರೆ ಮೇಲೆ ಸಾಮಾನ್ಯನಂತೆ ಕಾಣಿಸುತ್ತಿರುವುದಕ್ಕೆ ಜನರಿಗೆ ಹತ್ತಿರವಾಗುತ್ತಿರುವುದು: ವಿನಯ್ ರಾಜ್‌ಕುಮಾರ್

ಕಾಮನ್ ಮ್ಯಾನ್ ಪಾತ್ರದಲ್ಲಿ ಮಿಂಚುತ್ತಿರುವ ವಿನಯ್ ರಾಜ್‌ಕುಮಾರ್. ವಿಜಯ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಸಹಿ ಹಾಕಲು ಕಾರಣವಿದು....
 

Vinay rajkumar talks about duniya vijay city light film and character as common man vcs

ದೊಡ್ಡಮನೆ ಕುಡಿ ವಿನಯ್ ರಾಜ್‌ಕುಮಾರ್ ಆಯ್ಕೆ ಮಾಡುವ ಸಿನಿಮಾಗಳು ತುಂಬಾನೇ ವಿಭಿನ್ನ. ಚಿತ್ರಮಂದಿರಗಳಲ್ಲಿ ಸಿನಿಮಾ ಹೆಚ್ಚಾಗಿ ಕಲೆಕ್ಷನ್ ಮಾಡದೇ ಇದ್ದರೂ ಓಟಿಟಿಯಲ್ಲಿ ವಿನಯ್ ಸಿನಿಮಾಗಳು ಅಬ್ಬರಿಸುತ್ತದೆ. ತೆರೆಯ ಮೇಲೆ ಸಾಮಾನ್ಯ ವ್ಯಕ್ತಿ ಎಂತೆ ಕಾಣಿಸಿಕೊಂಡರೆ ಜನರಿಗೆ ಬೇಕ ಕನೆಕ್ಟ್ ಆಗಬಹುದು ಅಂತಾರೆ ವಿನಯ್. ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ ತಮ್ಮ ಕಿರುಮಗಳನ್ನು ಲಾಂಚ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಸಿಟಿ ಲೈಟ್ಸ್‌ ಎಂಬ ಟೈಟಲ್ ನೀಡಲಾಗಿದ್ದು,ಸ್ವತ ವಿಜಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

'ದುನಿಯಾ ವಿಜಯ್ ಸರ್ ನಟಿಸುತ್ತಿಲ್ಲ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅನಿರೀಕ್ಷಿತವಾಗಿ ಸಿನಿಮಾ ಪ್ರಮೋಷನ್‌ನಲ್ಲಿ ಭೇಟಿ ಆಗಿದ್ದು, ಆಗ ವಿಜಯ್‌ ಸರ್‌ ನನಗೆ ಕಥೆ ಹೇಳಿದ್ದರು. ತೆರೆ ಮೇಲೆ ಪಾತ್ರಗಳನ್ನು ಸಖತ್ ಸಿಂಪಲ್ ಆಗಿ ತೋರಿಸುವುದರಲ್ಲಿ ವಿಜಯ್ ಸರ್ ಎಕ್ಸ್‌ಪರ್ಟ್. ಭೀಮಾ ಸಿನಿಮಾದಲ್ಲಿ ಪಾತ್ರಧಾರಿಗಳು ಕನ್ನಡ-ತಮಿಳು ಮಾತನಾಡುತ್ತಾರೆ, ಕೆಲವರು ಉರ್ದು-ಕನ್ನಡ ಮಾತನಾಡುತ್ತಾರೆ. ಇದೇ ಜನರಿಗೆ ಬೇಗ ಇಷ್ಟವಾಗುತ್ತದೆ ಹಾಗೂ ಕನೆಕ್ಟ್ ಮಾಡಿಕೊಳ್ಳುತ್ತಾರೆ. ಸಿನಿಮಾ ಕಥೆ ಮತ್ತು ಪಾತ್ರಗಳ ಮೂಲಕ ಜನರನ್ನು ಸೂಪರ್ ಆಗಿ ಮನೋರಂಜಿಸುತ್ತಾರೆ. ವಿಜಯ್ ಸರ್ ಅವರ ಜರ್ನಿ ಪ್ರತಿಯೊಬ್ಬರಿಗೂ ಸ್ಫೂರ್ತಿ. ಸಿಟಿ ಲೈಟ್ಸ್ ಸಿನಿಮಾ ಪಾತ್ರದ ಟ್ರೈನಿಂಗ್ ನಡೆಯುತ್ತಿದೆ, ಎರಡು ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ವಿನಯ್ ಮಾತನಾಡಿದ್ದಾರೆ.

ಹೊಸ ಅವತಾರದಲ್ಲಿ ರಚಿತಾ ರಾಮ್; ಪೆಡ್ಡೆ ಹುಡುಗರ ನಿದ್ರೆಗೆಡಿಸಿದ ಫೋಟೋ ವೈರಲ್!

'ಪ್ರತಿಯೊಬ್ಬ ವ್ಯಕ್ತಿ ಕೂಡ ತಮ್ಮ ತಮ್ಮ ಜೀವನದಲ್ಲಿ ಬೆಸ್ಟ್‌ ಹೀರೋ ಅಥವಾ ಹೀರೋಯಿನ್. ಪ್ರತಿಯೊಬ್ಬ ಕಾಮನ್ ಮ್ಯಾನ್‌ನಲ್ಲೂ ಹೀರೋ ಇದ್ದೇ ಇರುತ್ತಾರೆ. ನಾವು ಜಗತ್ತನ್ನು ನೋಡಿದಾಗ ಸಾಕಷ್ಟು ಕಥೆಗಳು ಸಿಗುತ್ತದೆ, ಆದರೆ ಅವುಗಳನ್ನು ಸಿನಿಮಾ ಮಾಡಿರುವುದಿಲ್ಲ. ಈ ರೀತಿ ಕಥೆಗಳನ್ನು ಜನರಿಗೆ ಹೇಳಲು ಇಷ್ಟ ಪಡುತ್ತೀನಿ. ನಿಮ್ಮನ್ನು ನೀವು ನಂಬಿದರೆ ಖಂಡಿತಾ ನೀವು ಒಬ್ಬ ಹೀರೋ ಎಂದು ಹೇಳಲು ಇಷ್ಟ ಪಡುತ್ತೀನಿ. ಯಾವುದೇ ಸಿನಿಮಾ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡರೂ ಕಾಮನ್ ಮ್ಯಾನ್ ಆಗಿರುವುದಕ್ಕೆ ಇಷ್ಟ ಪಡುತ್ತೀನಿ' ಎಂದು ವಿನಯ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios