ಕರ್ನಾಟಕದಲ್ಲಿ ದೊಡ್ಮನೆ ಎಂದೇ ಕರೆಸಿಕೊಳ್ಳುವ ರಾಜ್‌ಕುಮಾರ್‌ ಕುಟುಂಬದ ಕುಡಿ, ರಾಘವೇಂದ್ರ  ರಾಜ್‌ಕುಮಾರ್‌  ಸಿಹಿ ಸುದ್ದಿಯನ್ನು ನೀಡಿದ್ದಾರೆ. ಏನದು..?

ಕರ್ನಾಟಕದ ದೊಡ್ಮನೆ ಕುಟುಂಬದ ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ನಟ ವಿನಯ್‌ ರಾಜ್‌ಕುಮಾರ್‌ ಅಭಿನಯದ ಹೊಸ ಚಿತ್ರದ ಹೆಸರು ‘ಪೆಪೆ’.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಹಬ್ಬದ ಪ್ರಯುಕ್ತ ವಿನಯ್‌ ರಾಜ್‌ಕುಮಾರ್‌ ಅವರ ವಿಶಿಷ್ಟ ಗೆಟಪ್ಪಿನ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದೆ. 

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. Meet ಪೆಪೆ | Pepe It’s an absolute honour to collaborate with a great team for my first action film. Stayed tuned for more updates!

Posted by Vinay Rajkumar on Tuesday, April 13, 2021

ಕೈಯಲ್ಲಿ ಲಾಂಗ್‌, ಮುಖ, ಮೈ ತುಂಬಾ ರಕ್ತದ ಕಲೆಗಳು, ಮುಖದ ಮೇಲೆ ಇಳಿಯುತ್ತಿರುವ ರಕ್ತವನ್ನು ಒರೆಸಿಕೊಳ್ಳುತ್ತಿರುವ ವಿನಯ್‌ ರಾಜ್‌ಕುಮಾರ್‌ ಅವರ ಲುಕ್ಕು ಕುತೂಹಲ ಮೂಡಿಸುವಂತಿದೆ.

ಉದಯ್‌ ಶಂಕರ ಎಸ್‌ ಹಾಗೂ ನಿಜಗುಣ ಗುರುಸ್ವಾಮಿ ನಿರ್ಮಾಣದ ಚಿತ್ರವಿದು. ಶ್ರೀಲೇಶ್‌ ಎಸ್‌ ನಾರಾಯಣ್‌ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ ಶೂಟಿಂಗ್‌ಗೆ ತೆರಳುತ್ತಿದೆ.