ಬೆಂಗಳೂರು(ಸೆ. 09) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ  ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.

ನಿರ್ದೇಶಕ ಅಶೋಕ್ ಕಶ್ಯಪ್, ಉಮೇಶ್ ನಾಯಕ್, ಎಸ್‌ಜಿ ತುಂಗಾ ರೇಣುಕಾ, ಶ್ರೀಪಾಲ್ ಸುದರ್ಶನ್,  ನಟಿ ಸೋನು ಗೌಡ, ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಶ್ರೀರಾಜ್ ಗುಡಿ ಹೊಸ ಸದಸ್ಯರಾಗಿದ್ದಾರೆ.

ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಚಲನಚಿತ್ರ ನಿಯೋಗ

ರಾಜ್ಯಪಾಲರ ಆದೇಶದ ಅನ್ವಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಜಯಶ್ರೀ ಎಸ್.ಎನ್. ನೇಮಕದ ವಿಚಾರವನ್ನು ತಿಳಿಸಿದ್ದಾರೆ. ಕೊರೋನಾದಿಂದ ಎದುರಾಗಿರುವ ಸಂಕಷ್ಟ ನಿವಾರಣೆಗೆ ಶಿವರಾಜ್ ಕುಮಾರ್ ನೇತೃತ್ವದ ಚಲನಚಿತ್ರ ಆಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತ್ತು.